Top

ಮದ್ಯಪಾನಕ್ಕೆ ದುಡ್ಡು ಕೊಡದಕ್ಕೆ ತಾಯಿಗೆ ಬೆಂಕಿ ಇಟ್ಟ ಮಗ

ಮದ್ಯಪಾನಕ್ಕೆ ದುಡ್ಡು ಕೊಡದಕ್ಕೆ ತಾಯಿಗೆ ಬೆಂಕಿ ಇಟ್ಟ ಮಗ
X

ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ತಾಯಿಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವ ಘಟನೆ ಬೆಂಗಳೂರಿನ ಅಶ್ವತ್ ನಗರದಲ್ಲಿ ನಡೆದಿದೆ.

ಉತ್ತಮ್ ಕುಮಾರ್(20) ಪೆಟ್ರೋಲ್ ಸುರಿದು ಹೆತ್ತಮ್ಮನಿಗೆ ಬೆಂಕಿ ಹಚ್ಚಿದ ಪಾಪಿ ‌ಪುತ್ರ, ಡಿಸೆಂಬರ್ 6 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಾಯಿ ಭಾರತಿ ಎದೆ, ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಕೂಡಲೇ ಭಾರತಿ ಪತಿ ಭಾರತಿಯನ್ನು ರಕ್ಷಣೆ ಮಾಡಿದ ಬಳಿಕ ಪತಿ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ, ತಕ್ಷಣ ಘಟನಾ ಸ್ಥಳಕ್ಕೆ ಬಂದ ಸಂಜಯ ನಗರ ಹೊಯ್ಸಳ ಪೊಲೀಸರು. ಗಾಯಾಳು ಭಾರತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುಟ್ಟಗಾಯಗಳಿಂದ ಬಳಲುತ್ತಿರುವ ಭಾರತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತೀದೆ.

ಸದಾಶಿವನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Next Story

RELATED STORIES