ಮಂಗಳೂರಿನ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ: 4 ಮಕ್ಕಳ ರಕ್ಷಣೆ

X
TV5 Kannada9 Dec 2018 9:55 AM GMT
ಸರ್ಕಾರಿ ಜಿಲ್ಲಾ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ, ಎನ್ಐಸಿಯುನಲ್ಲಿ ಶಾರ್ಟ್ ಸರ್ಕ್ಯೂಟ್ ಕಾಣಸಿಕೊಂಡಿದೆ. ತಕ್ಷಣ ನಾಲ್ಕು ಮಕ್ಕಳನ್ನು ರಕ್ಷಿಸಿರುವ ಘಟನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ.
ಮಕ್ಕಳ ತೀವ್ರ ನಿಗಾ ಘಟಕ ಎನ್ಐಸಿಯುನಲ್ಲಿ ಬೆಂಕಿ ಅವಘಡ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಎನ್ಐಸಿಯು ಘಟಕದಲ್ಲಿ ಇದ್ದ ನಾಲ್ವರು ಮಕ್ಕಳನ್ನು ಲೇಡಿ ಗೋಶನ್ ಆಸ್ಪತ್ರೆಯಿಂದ ವೆನ್ಲಾಕ್ ಆಸ್ಪತ್ರೆಗೆ ಸಿಬ್ಬಂದಿ ಸಾಗಿಸಿದ್ದಾರೆ.
ರಕ್ಷಿಸಿದ ನಾಲ್ಕು ಮಕ್ಕಳನ್ನು ವೆನ್ ಲಾಕ್ ಆಸ್ಪತ್ರೆಗೆ ಸಿಬ್ಬಂದಿ ಸಾಗಿಸಲಾಗಿದೆ.ಇನ್ನೂ ಬೆಂಕಿಯನ್ನು ಅಗ್ನಿಶಾಮಕದಳ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನಂದಿಸಿ ಯಶಸ್ವಿಯಾಗಿದ್ದಾರೆ.ಆಕ್ಸಿಜನ್ ಮಿಷನ್ ರಿಪೇರಿವೇಳೆ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತೀದೆ.
Next Story