Top

'ಭರ್ಜರಿ'ಯಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಬಹದ್ದೂರ್ ಗಂಡು'

ಭರ್ಜರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಹದ್ದೂರ್ ಗಂಡು
X

ಬೆಂಗಳೂರು: ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭಾನುವಾರ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು.

ಗುರುಹಿರಿಯರ ಸಮ್ಮುಖದಲ್ಲಿ ಪ್ರೇರಣಾ- ಧ್ರುವ ರಿಂಗ್ ಬದಲಾಯಿಸಿಕೊಂಡಿದ್ದು, ಹಿರಿಯರ ಆಶೀರ್ವಾದ ಪಡೆದರು.ಕಾರ್ಯಕ್ರಮದಲ್ಲಿ ಮೇಘನಾ ರಾಜ್, ಅರ್ಜುನ್ ಸರ್ಜಾ, ಐಶ್ವರ್ಯಾ ಅರ್ಜುನ್, ಪ್ರಮಿಳಾ ಜೋಷಾಯ್, ಸುಂದರ್‌ರಾಜ್ ಸೇರಿ ಸ್ಯಾಂಡಲ್‌ವುಡ್ ಗಣ್ಯರು ಭಾಗಿಯಾಗಿದ್ದರು.

ಧರ್ಮಗಿರಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಡಿಸೈನರ್ ಪವಿತ್ರಾ ರೆಡ್ಡಿ ರೆಡಿ ಮಾಡಿರುವ ಬಿಳಿ ಬಣ್ಣದ ಧೋತಿ- ಶರ್ಟ್- ಶಲ್ಯದಲ್ಲಿ ಧ್ರುವಾ ಮಿಂಚಿದ್ರೆ, ಕೊಲ್ಕತ್ತಾದಲ್ಲಿ ಡಿಸೈನ್ ಆಗಿರೋ ಸೀರೆಯಲ್ಲಿ ಪ್ರೇರಣಾ ಕಂಗೊಳಿಸುತ್ತಿದ್ದರು.

ಕಲಾ ನಿರ್ದೇಶದ ಅರುಣ್ ಸಾಗರ್ ಕೈ ಚಳಕದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗಿದ್ದು, ಹಳ್ಳಿ ಸೊಗಡಿನಲ್ಲಿ, ಕಬ್ಬು-ಬಾಳೆ ಗೋನೆಯ ಅಲಂಕಾರ, ಕೊಟ್ಟಿಗೆ, ಹಸು, ಹಸಿರು ತೆಂಗಿನ ಚಪ್ಪರದಿಂದ ಕೂಡಿದ್ದ ಮಂಟಪದಲ್ಲಿ ರಾಮ-ಸೀತೆಯ ಚಿತ್ರ ಕಣ್ಮನ ಸೆಳೆಯುವಂತಿತ್ತು.

ನಿಶ್ಚಿತಾರ್ಥಕ್ಕೂ ಮುನ್ನ ಧ್ರುವ ಸರ್ಜಾ ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸಿದರು. ತಿರುಪತಿಯಿಂದ 3 ಜನ ಪುರೋಹಿತರು, ಹುಳಿಮಾವು ಭಗವತಿ ದೇವಸ್ಥಾನದಿಂದ 31 ಜನ ಪುರೋಹಿತರು, ತಿರುಮಲ ದೇವಸ್ಥಾನದಿಂದ 15 ಪುರೋಹಿತರು, ಧ್ರುವ ಸರ್ಜಾ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಭೂರಿ ಭೋಜನ ತಯಾರು ಮಾಡಿದ್ದು, ಊಟದ ಮೆನುವಿನಲ್ಲಿ ಸಿಹಿ ಕಡಬು, ಹೋಳಿಗೆ, ಪನ್ನೀರ್ ಕಾರ್ನ್, ಜಾಮೂನ್, ಬಜ್ಜಿ, ಬೋಂಡ, ವೈಟ್ ರೈಸ್,- ಸಾಂಬಾರ್, ಬಸ್ಸಾರು, ಕಾಳು ಸಾಂಬಾರ್, ಮಂಗಳೂರು ಕೋಟೆ ಬಿರಿಯಾನಿ, ಶ್ಯಾವಿಗೆ ಪಾಯಸ, ಡ್ರೈಫೂಟ್ ಹೋಳಿಗೆ, ಸ್ಪೇಷಲ್ ತವಾ ಫ್ರೈ, ಐಸ್‌ಕ್ರೀಮ್ ಮಾಡಲಾಗಿತ್ತು.

Next Story

RELATED STORIES