Top

ಡಿಸ್ಚಾರ್ಜ್ ಆದ ರಾಧಿಕಾ: ಎಲ್ಲರಿಗೂ ಧನ್ಯವಾದ ತಿಳಿಸಿದ ರಾಕಿಂಗ್ ದಂಪತಿ

ಡಿಸ್ಚಾರ್ಜ್ ಆದ ರಾಧಿಕಾ: ಎಲ್ಲರಿಗೂ ಧನ್ಯವಾದ ತಿಳಿಸಿದ ರಾಕಿಂಗ್ ದಂಪತಿ
X

ಬೆಂಗಳೂರು: ಡಿಸೆಂಬರ್ 2ಕ್ಕೆ ಹೆಣ್ಣುಮಗುವಿನ ತಾಯಿಯಾಗಿರುವ ನಟಿ ರಾಧಿಕಾ ಪಂಡಿತ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಕಿಂಗ್ ದಂಪತಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ತಮಗೆ ಶುಭಾಶಯ ಕೋರಿದ ಅಭಿಮಾನಿಗಳಿಗೆ, ವೈದ್ಯರಾದ ಸ್ವರ್ಣಲತಾರವರಿಗೆ, ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೇ ಮಗು ನೋಡಲು ಯಶ್ ಥರಾನೆ ಇದೆ. ಆರೋಗ್ಯವಾಗಿದೆ. ಮಗುವಿನ ಲಾಲನೆ ಪಾಲನೆ ಬಗ್ಗೆ ಕಲಿಯುತ್ತಿದ್ದೇನೆ. ಇದೊಂದು ಹೊಸ ಮತ್ತು ಖುಷಿಯ ಪಯಣ. ಇವತ್ತು ನಮ್ಮ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ. ಯಶ್ ಕೆಜಿಎಫ್ ಚಿತ್ರದ ಪ್ರಮೋಷನ್‌ಗಾಗಿ ಬ್ಯುಸಿ ಇದ್ದು, ಇವತ್ತು ನಾನು ನನ್ನ ಮಗುವಿನೊಂದಿಗೆ ಸಂಭ್ರಮ ಆಚರಿಸುತ್ತಿದ್ದೇನೆಂದು ರಾಧಿಕಾ ಹೇಳಿದ್ದಾರೆ.

ಇನ್ನು ಯಶ್ ತಮ್ಮ ಮಗುವಿನ ಬಗ್ಗೆ ಮಾತನಾಡಿದ್ದು, ಇಷ್ಟು ದಿನ ನೀವು ಯಶ್‌ಗೆ ಡಿಸೆಂಬರ್ ತಿಂಗಳು ಲಕ್ಕಿ ಅಂತಾ ಹೇಳ್ತಿದ್ರಿ. ಆದ್ರೆ ನಾನು ಹಾಗೇ ತಿಳಿದುತಕೊಂಡಿರಲಿಲ್ಲ, ಸಿನಿಮಾ ರಿಲೀಸ್ ಆಗ್ತಾನೆ ಇರತ್ತೆ. ಡಿಸೆಂಬರ್‌ನಲ್ಲೇ ಮದುವೆ ಆದ್ವಿ. ಆದ್ರೆ ಈಗ ಮಗಳು ಬಂದಿದ್ದಾಳೆ. ಹೀಗಾಗಿ ಡಿಸೆಂಬರ್ ಲಕ್ಕಿ ತಿಂಗಳೆಂದು ಒಪ್ಪಿಕೊಳ್ಳುತ್ತೇನೆಂದು ಹೇಳಿದ್ದಾರೆ.

ಅಲ್ಲದೇ ಅಂಬಿ ಕೊಟ್ಟ ತೊಟ್ಟಿಲ ಬಗ್ಗೆ ಮಾತನಾಡಿದ ಯಶ್. ಸುಮಲತಾ ಅಕ್ಕಾ ಕರೆ ಮಾಡಿ ತೊಟ್ಟಿಲ ಬಗ್ಗೆ ಹೇಳಿದರು. ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ತುಂಬಾ ಪುಣ್ಯ ಮಾಡಿದ್ದಾಳೆಂದು ಹೇಳಿದರು. ಅವರು ನನ್ನನ್ನು ಮಗನಂತೆ ನೋಡಿದ್ದಾರೆ. ಅವರ ಪ್ರೀತಿ ಆಶೀರ್ವಾದ ನಮ್ಮ ಮೇಲಿದೆ ಎಂಬುದಕ್ಕೆ ಈ ತೊಟ್ಟಿಲೇ ಸಾಕ್ಷಿ ಎಂದಿದ್ದಾರೆ.

Next Story

RELATED STORIES