Top

ರಾಮಲೀಲಾ ಮೈದಾನದಲ್ಲಿ ಹಿಂದೂಗಳ ಶಕ್ತಿ ಪ್ರದರ್ಶನ

ರಾಮಲೀಲಾ ಮೈದಾನದಲ್ಲಿ ಹಿಂದೂಗಳ ಶಕ್ತಿ ಪ್ರದರ್ಶನ
X

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವು ಹಿಂದೂ ಸಂಘಟನೆಗಳು ಸಂಕಲ್ಪ ತೊಟ್ಟಿವೆ. ಅದಕ್ಕಾಗಿ ದೇಶಾದ್ಯಂತ ಮಂದಿರ ನಿರ್ಮಾಣಕ್ಕಾಗಿ ಹೋರಾಟದ ಕಾವು ತೀವ್ರವಾಗಿದ್ದು,ರಾಷ್ಟ್ರ ರಾಜಧಾನಿಯನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಅಯೋಧ್ಯೆಯಲ್ಲಿ ಧರ್ಮಸಭೆ ನಡೆಸಿದ್ದ ವಿಎಚ್‌ಪಿ, ಇವತ್ತು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಧರ್ಮಸಭೆ ನಡೆಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ನಮಗೆ ಅಧಿಕಾರ ಸಿಕ್ಕರೆ ರಾಮಮಂದಿರ ನಿರ್ಮಾಣ ಮಾಡೋದಾಗಿ ಹೇಳಿ ಅಧಿಕಾರಕ್ಕೆ ಬಂದಿತ್ತು.. ಆದ್ರೆ ಮೋದಿ ಸರ್ಕಾರದ 5 ವರ್ಷ ಅವಧಿ ಮುಗಿಯುತ್ತಾ ಬಂದಿದ್ರೂ, ರಾಮ ಮಂದಿರ ನಿರ್ಮಾಣದ ಬಗ್ಗೆ ಸ್ಪಷ್ಟ ನಿರ್ಣಯಕ್ಕೆ ಬರಲಾಗಿಲ್ಲ.. ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡ್ಲೇಬೇಕು ಅಂತಾ ಹಿಂದೂಪರ ಸಂಘಟನೆಗಳು ಬಿಗಿಪಟ್ಟು ಹಿಡಿದಿವೆ. ಸಂಸತ್‌ ಚಳಿಗಾಲದ ಅಧಿವೇಶನಕ್ಕೆ ಎರಡೇ ದಿನ ಬಾಕಿ ಇರುವಾಗ ರಾಷ್ಟ್ರರಾಜಧಾನಿಯಲ್ಲಿ ರಾಮಮಂದಿರದ ಕೂಗು ಜೋರಾಗಿದೆ.

ದೇಶಾದ್ಯಂತ ಮಂದಿರ ನಿರ್ಮಾಣಕ್ಕಾಗಿ ಹೋರಾಟದ ಕಾವು ತೀವ್ರವಾಗಿದ್ದು, ಅದು ರಾಷ್ಟ್ರ ರಾಜಧಾನಿಯನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಅಯೋಧ್ಯೆಯಲ್ಲಿ ಧರ್ಮಸಭೆ ನಡೆಸಿದ್ದ ವಿಎಚ್‌ಪಿ, ಇವತ್ತು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಧರ್ಮಸಭೆ ನಡೆಸ್ತು. ಸಭೆಗೂ ಮೊದಲು, ದೆಹಲಿಯ ಪ್ರಮುಖ ರಸ್ತೆಗಳನ್ನು ಬೈಕ್ ಱಲಿ ನಡೆಸಲಾಯ್ತು. ಈ ಧರ್ಮಸಭೆಯಲ್ಲಿ ಲಕ್ಷಾಂತರ ಹಿಂದೂಗಳು ಪಾಲ್ಗೊಂಡಿದ್ರು.. ವಿಹೆಚ್‌ಪಿ, ಆರ್‌ಎಸ್‌ಎಸ್‌ ಸೇರಿದಂತೆ ಹಲವು ಹಿಂದೂಸಂಘಟನೆಗಳು, ಮಂದಿರ ವಿಚಾರದಲ್ಲಿ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆ ಹೊರಡಿಸಲಿ ಅಂತ ಒತ್ತಾಯಿಸಿದರು.

ಈ ಧರ್ಮಸಭೆಯಲ್ಲಿ ಮಾತನಾಡಿದ, ಆರ್‌ಎಸ್‌ಎಸ್‌ ಹಿರಿಯ ಮುಖಂಡ ಸುರೇಶ್‌ ಭಯ್ಯಾಜಿ ಜೋಷಿ, ಬಿಜೆಪಿಯ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ರು. ಈಗ ಅಧಿಕಾರದಲ್ಲಿರುವವರು ರಾಮ ಮಂದಿರ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅವರು ಜನರ ಮಾತುಗಳನ್ನು ಆಲಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು. ಅವರಿಗೆ ಭಾವನೆಗಳು ಅರ್ಥವಾಗುತ್ತಿದೆ .. ನಾವು ಒತ್ತಾಯ ಮಾಡುತ್ತಿಲ್ಲ, ನಾವು ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದೇವೆ. ಈ ದೇಶಕ್ಕೆ ರಾಮ ರಾಜ್ಯ ಬೇಕು ಎಂದರು.

ಇದೇ 11ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ರಾಮ ಮಂದಿರ ನಿರ್ಮಾಣದ ವಿಚಾರ ಮಾರ್ಧನಿಸುವ ಸಾಧ್ಯತೆ ಹೆಚ್ಚಾಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಇನ್ನು ಕಾದು ಕುಳಿತುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಒಮ್ಮತದಿಂದ ಮಂದಿರ ನಿರ್ಮಾಣ ಬಿಲ್ ಪಾಸ್ ಮಾಡುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಒಂದು ವೇಳೆ ಅಧಿವೇಶನದಲ್ಲಿ ಒಪ್ಪಿಗೆ ಸಿಗದಿದ್ದರೇ ಹೋರಾಟದ ಎಚ್ಚರಿಕೆಯನ್ನೂ ನೀಡಿವೆ.. ಹೀಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇನ್ನು ಧರ್ಮಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಶಹನವಾಜ್ ಹುಸೇನ್‌, ಸರ್ಕಾರ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡುತ್ತೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆಯನ್ನು ಈಡೇರಿಸಲಿದೆ ಎಂದು ಸುಳಿವು ನೀಡಿದರು.

ಒಟ್ಟಾರೆ ಅಯೋಧ್ಯೆ ಸ್ಥಳ ವಿವಾದ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಜನವರಿಯಲ್ಲಿ ಈ ಪ್ರಕರಣದ ವಿಚಾರಣೆ ಆರಂಭದ ದಿನಾಂಕವನ್ನು ನ್ಯಾಯಾಲಯ ಪ್ರಕಟಿಸಲಿದೆ. ಮಂಗಳವಾರದಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನು ರಚಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

Next Story

RELATED STORIES