ಜನರ ಪಾಲಿಗೆ ಮಂತ್ರಿಗಳು ಇದ್ದು ಸತ್ತಂತಾಗಿದೆ: ಯಡಿಯೂರಪ್ಪ

ನೂರಕ್ಕೂ ಹೆಚ್ಚು ತಾಲೂಕಿನಲ್ಲಿ ಬರಗಾಲ ಬಂದಿದೆ ಆದರೆ ಆ ಪ್ರದೇಶಗಳಿಗೆ ಯಾವ ಅಧಿಕಾರಿಗಳು, ಮಂತ್ರಿಗಳು
ಹೋಗುತ್ತಿಲ್ಲ, ಜನರ ಪಾಲಿಗೆ ಮಂತ್ರಿಗಳು ಇದ್ದು ಸತ್ತಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಹೋರಾಟ ಆರಂಭವಾಗಿದೆ. ಈ ಭಾಗ ಹಾಗೂ ಬೇರೆ ಬೇರೆ ಭಾಗಗಳಿಂದ ರೈತರು ಬರುತ್ತಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಸರ್ಕಾರದ ರೈತ ವಿರೋಧಿ ನೀತಿ ಖಂಡಿಸುತ್ತೇವೆ. ರೈತರ ಸಾಲಮನ್ನಾ, ಕಬ್ಬು ಬೆಳೆಗಾರರ ಬಾಕಿ ಕೊಡಿಸುತ್ತೇನೆ ಎಂದ ಸುಳ್ಳು ಭರವಸೆ ನೀಡಿದ್ದಾರೆ ಎಂದರು.
ಒಂದು ರೀತಿಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ ಇದು ರೈತರ ಭಾವನೆ, ಅದಕ್ಕೆ ಸ್ಪಂದಿಸಿ ನಾಳೆ ಹೋರಾಟ ಮಾಡುತ್ತೇವೆ. ದೇವಸ್ತಾನಗಳಿಗೆ ಭೇಟಿ ವಿಚಾರ ನಾನು ದೇವಸ್ತಾನಕ್ಕೆ ಹೋಗೋದಕ್ಕೆ ಅಭ್ಯಂತರ ಇಲ್ಲ. ರಾಜ್ಯದ ಜನರಿಗೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಕೇವಲ ಮಂಡ್ಯ, ರಾಮನಗರ, ಹಾಸನ, ಮೈಸೂರು ಜಿಲ್ಲೆಗಳಿಗೆ ಸೀಮಿತವಾಗಿದ್ದಾರೆ ಅದು ಇದೀಗ ಜಗಜ್ಜಾಹಿರಾಗಿದೆ ಎಂದು ಹೇಳಿದರು.
ರೈತರಿಗೆ ನೀಡಿರುವ ಆಶ್ವಾಸನೆಗಳು ಈಡೇರಿಲ್ಲ ರೈತರು ಸತ್ಯಾಗ್ರಹ ಮುಂದುವರಿಸಿದ್ದಾರೆ. ರೈತರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತೇನೆ ಎಂದು ಬೆಳಗಾವಿಯಲ್ಲಿ ಯಡಿಯೂರಪ್ಪ ಹೇಳಿದರು.