Top

ಹೇಗಿತ್ತು ಗೊತ್ತಾ ಅಂಬಾನಿ ಪುತ್ರಿಯ ಪ್ರಿ-ವೆಡ್ಡಿಂಗ್ ಪ್ರೊಗ್ರಾಮ್..?

ಹೇಗಿತ್ತು ಗೊತ್ತಾ ಅಂಬಾನಿ ಪುತ್ರಿಯ ಪ್ರಿ-ವೆಡ್ಡಿಂಗ್ ಪ್ರೊಗ್ರಾಮ್..?
X

ಉದಯ್‌ಪುರ್: ಭಾರತದ ಆಗರ್ಭ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ರಾಜಸ್ತಾನದ ಉದಯ್‌ಪುರದ ಅರಮನೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಇಶಾ ಅಂಬಾನಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಅಲ್ಲದೇ ಭಾರತೀಯ ಸಂಪ್ರದಾಯಕ್ಕೆ ತಕ್ಕಂತೆ ಮರೂನ್ ಮತ್ತು ನೀಲಿ ಬಣ್ಣದ ಚುಡೀದಾರ ಧರಿಸಿದ್ದರು.

ಇನ್ನು ಈ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್,ಐಶ್ವರ್ಯಾ ರೈ ಬಚ್ಚನ್- ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಸಲ್ಮಾನ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ಬೋನಿ ಕಪೂನ್ ಕುಟುಂಬ, ಕ್ರಿಕೇಟರ್ ಮಹೇಂದ್ರ ಸಿಂಗ್ ಧೋನಿ ದಂಪತಿ, ಸಚಿನ್ ತೆಂಡೂಲ್ಕರ್ ದಂಪತಿ, ಜಹೀರ್ ಖಾನ್ ದಂಪತಿ ಸೇರಿ ಹಲವು ಗಣ್ಯರು ಆಗಮಿಸಿದ್ದರು.

ಇನ್ನು ಈ ಕಾರ್ಯಕ್ರಮಕ್ಕೂ ಮುನ್ನ ಅಂಬಾನಿ ಕುಟುಂಬ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. 5,100 ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮುಖೇಶ್ ಅಂಬಾನಿ, ನೀತಾ ಅಂಬಾನಿ, ಅಜಯ್ -ಸ್ವಾಮಿ ಪಿರಾಮಲ್, ಇಶಾ ಅಂಬಾನಿ- ಆನಂದ್ ಪಿರಾಮಲ್ ಜನರಿಗೆ ಊಟ ಬಡಿಸುತ್ತಿರುವ ದೃಶ್ಯ ಕಂಡುಬಂತು.

ಇದೇ ಡಿಸೆಂಬರ್ 12ರಂದು ಮುಂಬೈನ ಅಂಬಾನಿ ನಿವಾಸದಲ್ಲಿ ಇಶಾ ಮತ್ತು ಆನಂದ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Next Story

RELATED STORIES