Top

ಚೊಚ್ಚಲ ಪಂದ್ಯದಲ್ಲೇ 24 ವರ್ಷದ ಹಿಂದಿನ ದಾಖಲೆ ಮುರಿದ ಕ್ರಿಕೆಟಿಗ!

ಚೊಚ್ಚಲ ಪಂದ್ಯದಲ್ಲೇ 24 ವರ್ಷದ ಹಿಂದಿನ ದಾಖಲೆ ಮುರಿದ ಕ್ರಿಕೆಟಿಗ!
X

ಮಧ್ಯಪ್ರದೇಶದ ಯುವ ಬ್ಯಾಟ್ಸ್​ಮನ್ ಅಜಯ್ ರೋಹೆರಾ ದ್ವಿಶತಕ ಸಿಡಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪಾದರ್ಪಣಾ ಪಂದ್ಯದಲ್ಲೇ ಅತೀ ಹೆಚ್ಚು ರನ್ ಗಳಿಸಿದ 24 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದಿದ್ದಾರೆ.

ಹೈದರಾಬಾದ್ ವಿರುದ್ಧ ಹೋಳ್ಕರ್ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶದ ಅಜಯ್ ರೋಹೆರಾ ಅಜೇಯ 267 ರನ್ ಸಿಡಿಸಿದ್ದಾರೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಆಟಗಾರನೊಬ್ಬ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದಿದ್ದಾರೆ.

21 ವರ್ಷದ ಅಜಯ್ ರೋಹೆರಾ 267 ರನ್ ಗಳಿಸಿದರು. ಈ ಮೂಲಕ 1994ರಲ್ಲಿ ಹರಿಯಾಣ ವಿರುದ್ಧ 260 ರನ್ ಗಳಿಸಿದ್ದ ಮುಂಬೈನ ಅಮೊಲ್ ಮಂಜುಂದಾರ್ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಅಜಯ್ ವರ್ಗಾಯಿಸಿಕೊಂಡರು.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಗಳಿಸಿದ ಮಧ್ಯಪ್ರದೇಶದ ಆಟಗಾರ ಎಂಬ ಮತ್ತೊಂದು ದಾಖಲೆಯನ್ನು ಅಜಯ್ ಬರೆದರು. ಜೆಪಿ ಯಾದವ್ 265 ರನ್ ಕಲೆ ಹಾಕಿರುವುದು ಒಟ್ಟಾರೆ ಕ್ರಿಕೆಟ್ ನಲ್ಲಿ ಚೊಚ್ಚಲ ಪಂದ್ಯದಲ್ಲೇ ಅತೀ ಹೆಚ್ಚು ರನ್ ಗಳಿಸಿರುವ ದಾಖಲೆಯಾಗಿದೆ.

ವಿಕೆಟ್ ಕೀಪರ್ ಅಜಯ್ 345 ಎಸೆತಗಳಲ್ಲಿ 21 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡ 267 ರನ್ ಗಳಿಸಿದರು. ಅಜಯ್ ಸಾಹಸದಿಂದ ಮಧ್ಯಪ್ರದೇಶ ತಂಡ 253 ರನ್ ಗಳಿಂದ ಹೈದರಾಬಾದ್ ತಂಡವನ್ನು ಸೋಲಿಸಿತು.

Next Story

RELATED STORIES