Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಬಲವರ್ಧನೆ ಸಚಿವ ರಾಮ್ ದಾಸ್ ಅಠಾವಳೆ ಮೇಲೆ ಹಲ್ಲೆ ನಡೆಸಲಾಗಿದೆ. ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ ಈ ಘಟನೆ ನಡೆದಿದ್ದು, ಯುವಕನೋರ್ವ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ್ದಾನೆ. ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ಅಠಾವಳೆ ಮೇಲೆ ಗೊಸಾವಿ ಎಂಬ ಯುವಕ ಹಲ್ಲೆ ನಡೆಸಿದ್ದಾನೆ. ತಕ್ಷಣ ಯುವಕನನ್ನು ಹಿಡಿದ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಆತ ಕೆಳಗೆ ಬಿದ್ದರೂ ಬಿಟ್ಟರೂ ಬಿಟ್ಟಿಲ್ಲ, ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದೆ. ಘಟನೆ ಬಳಿಕ ಆರ್‌ಪಿಐ ಕಾರ್ಯಕರ್ತರು ಉದ್ರಿಕ್ತರಾಗಿದ್ದು, ಮಹಾರಾಷ್ಟ್ರ ಬಂದ್‌ ನಡೆಸಲು ಕರೆ ನೀಡಿದ್ದು ಪ್ರತಿಭಟನೆಗಿಳಿದಿದ್ದಾರೆ.

2.ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ 72ನೇ ಹುಟ್ಟುಹಬ್ಬದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ದೀರ್ಘ ಹಾಗೂ ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸೋನಿಯಾ ಗಾಂಧಿ ಅವರಿಗೆ ಶುಭಾಶಯ ಕೋರಿದ್ದಾರೆ. ಮಮತಾ ಅವರು ಸೋನಿಯಾ ಗಾಂಧಿ ಅವರನ್ನು ಶೀಘ್ರ ಭೇಟಿಯಾಗಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

3.ಫಲಿತಾಂಶಕ್ಕೂ ಮೊದಲೇ ತೆಲಂಗಾಣದ ಕೆಸಿಆರ್‌ಗೆ ಬಿಜೆಪಿ ಆಫರ್‌ ಕೊಟ್ಟಿದೆ. ಆದ್ರೆ, ಇದನ್ನು ತಿರಸ್ಕರಿಸಿರುವ ಕೆಸಿಆರ್‌, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬೆನ್ನಲ್ಲೆ ಕಾಂಗ್ರೆಸ್‌ ಕೂಡ ಮೈತ್ರಿಯ ಪ್ರಸ್ತಾಪ ಮಾಡಿದೆ.

4.ಕಾಶ್ಮೀರದ ಮುಜಗುಂದ್‌ ಪ್ರದೇಶದಲ್ಲಿ ಇಂದು ನಡೆದ ಭೀಕರ ಗುಂಡಿನ ಕಾಳಗದಲ್ಲಿ ಮೂವರು ಲಷ್ಕರ್‌ ಇ ತೋಯ್ಬಾ ಉಗ್ರರನ್ನು ಹತ್ಯೆಗೈಯಲಾಗಿದೆ. ಗುಂಡಿನ ಚಕಮಕಿಯಲ್ಲಿ ಐವರು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎನ್‌ಕೌಂಟರ್‌ ನಡೆದ ಬಳಿಕ ಶ್ರೀನಗರದಲ್ಲಿ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಮೂವರು ಉಗ್ರರನ್ನು ಸದೆ ಬಡಿದ ಬಳಿಕವೂ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಕೆಲ ಉಗ್ರರು ಅಡಗಿಕೊಂಡಿರುವ ಶಂಕೆ ಇದೆ.

5.ರಾಜ್ಯ ಸರ್ಕಾರ ಯಾವಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೋ ಅಂದೇ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಪುನರುಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದೇ 22ಕ್ಕೆ ಸಂಪುಟ ವಿಸ್ತರಣೆ ಮಾಡಲಿದ್ದೇವೆ ಅಂತ ಮುಖಂಡರು ಹೇಳುತ್ತಿದ್ದಾರೆ. ಆದ್ರೆ, ಸಂಪುಟ ವಿಸ್ತರಣೆ ಆಗಲ್ಲ. ಹೀಗೆ ಮುಂದೂಡಿಕೊಂಡು ಹೋಗಲಿದ್ದಾರೆ ಎಂದು ಟೀಕಿಸಿದ್ದಾರೆ. ಸರ್ಕಾರ ದೀವಾಳಿಯಾಗಿದೆ. ಬರ ಆವರಿಸಿರುವ ಜಿಲ್ಲೆಗಳ ಕುರಿತು ಚರ್ಚೆ ಬಿಟ್ಟು ಡಿಸ್ನಿ ಲ್ಯಾಂಡ್ ಮಾಡಲು ಹೊರಟಿದ್ದಾರೆ. ಸಾಲಮನ್ನಾ ಸಮರ್ಪಕವಾಗಿ ಆಗಿಲ್ಲ.‌ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ ಎಂದು ಕಿಡಿಕಾರಿದ್ದಾರೆ.

6.ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬಗ್ಗೆ ಪರ - ವಿರೋಧ ನಿಲುವು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಹಲವರು ಡಬ್ಬಿಂಗ್ ಪ್ರೋತ್ಸಾಹಿಸಿದರೆ ಕೆಲವು ವಿರೋಧಿಸುತ್ತಿದ್ದಾರೆ. ಈಗ ಮತ್ತೇ ಡಬ್ಬಿಂಗ್ ಅಲೇ ಜೋರಾಗಿದೆ. ಕನ್ನಡದಲ್ಲಿ ಡಬ್ಬಿಂಗ್‌ಗಾಗಿ ಹಕ್ಕೊತ್ತಾಯಿಸಿ ಇಂದು ನಗರದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲಾಯ್ತು. ಡಬ್ಬಿಂಗ್ ವಿರೋಧಿ ಟಿವಿ ವಾಹಿನಿಗಳು ಮತ್ತು ಪರಭಾಷಾ ಚಿತ್ರವಿತರಕರ ವಿರುದ್ಧ ಬನವಾಸಿ ಬಳಗದಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಕನ್ನಡಪರ ಸಂಘಟನೆಗಳ ಹೋರಾಟಗಾರ ಭಾಗವಹಿಸಿದ್ದರು. ಕನ್ನಡದಲ್ಲಿ ಡಬ್ಬಿಂಗ್ ಬೇಕು ಇದರಿಂದ ಕನ್ನಡ ಭಾಷೆಗೆ ಲಾಭ, ಪರಭಾಷೆಯ ಅನೇಕ ವಿಚಾರ, ಮನರಂಜನೆಯನ್ನ ನಮ್ಮ ಭಾಷೆಯಲ್ಲಿ ನೋಡಲು ಸಾಧ್ಯ. ಹೀಗಾಗಿ ಕನ್ನಡದಲ್ಲಿ ಡಬ್ಬಿಂಗ್ ಬೇಕು ಎಂದು ಒತ್ತಾಯಿಸಿದ್ರು.

7.ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಅನ್ನದಾತರು ನಾಳೆಯಿಂದ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಅಧಿವೇಶನದ ಒಳಗೆ ಕಬ್ಬು ಬಾಕಿ ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದ್ರೆ, ಅಧಿವೇಶನ ಬಂದ್ರೂ ಭರವಸೆ ಮಾತ್ರ ಈಡೇರಿಲ್ಲ. ಹೀಗಾಗಿ, ರೈತರು ಮತ್ತೆ ಬೀದಿಗಿಳಿಯಲು ಸಿದ್ಧವಾಗಿದ್ದಾರೆ. ವಿವಿಧ ಜಿಲ್ಲೆಯಿಂದ ರೈತರು ಆಗಮಿಸಿ, ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿದ್ದಾರೆ.

8.ಹಳೆ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕದ ರೈತರು ಬೆಳಗಾವಿಗೆ ಬಂದಿಳಿದಿದ್ದಾರೆ. ಇಂದು ಸಾಂಕೇತಿಕವಾಗಿ ಹೋರಾಟ ಮಾಡಿದ್ರು. ಕರಡಿ ಮಜಲು ಭಾರಿಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ರು. ನಾಳೆಯೂ ಚನ್ನಮ್ಮ ವೃತ್ತದಿಂದ ಸುವರ್ಣಸೌಧದವರೆಗೆ ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

9.: ಈಗಾಗಲೇ ಮೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಕೇರಳದಲ್ಲಿ ಇಂದು ಮತ್ತೊಂದು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಕಾರ್ಯಾರಂಭ ಮಾಡಿದೆ. ಇದರೊಂದಿಗೆ ದೇಶದಲ್ಲಿ 4 ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಏಕೈಕ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ಕಣ್ಣೂರಿನಿಂದ ವಿಮಾನಗಳ ಹಾರಾಟ ಶುರುವಾಗಿದೆ. ಇದರಿಂದ ಕಣ್ಣೂರಿಗೆ ಹತ್ತಿರವಿರುವ ಕರ್ನಾಟಕದ ಮೈಸೂರು, ಕೊಡಗು ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

10.ಬೆಳಗಾವಿಯ ಸುವರ್ಣಸೌಧದಲ್ಲಿ ೧೦ ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಸರ್ಕಾರದ ಹಲವು ಮಹತ್ವದ ಯೋಜನೆಗಳು, ವಿಧೇಯಕಗಳ ಬಗ್ಗೆ ಚರ್ಚೆ ನಡೆಯಲಿದೆ. ಆದ್ರೆ, ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಅಟ್ಯಾಕ್​​ ಮಾಡೋಕೆ ಸಿದ್ಧರಾಗಿದ್ದು, ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳಿಂದ ಕೊಡಬೇಕಿರುವ ಬಾಕಿ ವಿಚಾರಗಳನ್ನ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಿಎಂ ಕುಮಾರಸ್ವಾಮಿ ಕಾಲೆಳೆಯೋಕೆ ನಿರ್ಧರಿಸಿದ್ದಾರೆ.

11.ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ ಅವರು ಲವಲವಿಕೆಯಿಂದ ಇದ್ದಾರೆ. ಎಂದಿನಂತೆಯೇ ಸ್ನಾನ, ಪೂಜೆ ಮಾಡಲು ಉತ್ಸುಕತೆ ತೋರಿದ್ದಾರೆ. ಮಲಗಿಕೊಂಡೇ ಇರುವುದು ಬೇಸರವಾಗುತ್ತಿದೆ ಎಬ್ಬಿಸಿ ಕುಳ್ಳಿರಿಸಿ ಎಂದಿದ್ದಾರೆ. ಮಠಕ್ಕೆ ಹೋಗೋಣ ಎಂದು ಹಠ ಮಾಡುತ್ತಿದ್ದಾರೆ.

12.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವು ಹಿಂದೂ ಸಂಘಟನೆಗಳು ಸಂಕಲ್ಪ ತೊಟ್ಟಿವೆ. ಅದಕ್ಕಾಗಿ ದೇಶಾದ್ಯಂತ ಮಂದಿರ ನಿರ್ಮಾಣಕ್ಕಾಗಿ ಹೋರಾಟದ ಕಾವು ತೀವ್ರವಾಗಿದ್ದು, ಅದು ರಾಷ್ಟ್ರ ರಾಜಧಾನಿಯನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಅಯೋಧ್ಯೆಯಲ್ಲಿ ಧರ್ಮಸಭೆ ನಡೆಸಿದ್ದ ವಿಎಚ್‌ಪಿ, ಇವತ್ತು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಧರ್ಮಸಭೆ ನಡೆಸ್ತು

13.ಇಂದು ಭಾರತೀಯ ಸೇನೆಯ ಆರ್ಮಿ ಸರ್ವೀಸ್‌ ಕೋರ್‌ನ 258ನೇ ವರ್ಷಾಚರಣೆ. ಹೀಗಾಗಿ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ASC ಕೇಂದ್ರ ಮೈದಾನದಲ್ಲಿ ನೂರಾರು ಸೈನಿಕರು ವಿವಿಧ ಸಾಹಸ ಪ್ರದರ್ಶನಗಳನ್ನ ಏರ್ಪಡಿಸಲಾಗಿತ್ತು. ಯೋಧರು ವಿವಿಧ ಸಾಹಸ ಪ್ರದರ್ಶನ ನೀಡಿ ನೋಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.

14.ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್‌ ಅಂಡ್ ಮೆಡಿಕಲ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಅವರ ಆರೋಗ್ಯದಲ್ಲಾಗುತ್ತಿರುವ ತೀವ್ರಗತಿಯ ಸುಧಾರಣೆ ಕಂಡು ಆಸ್ಪತ್ರೆಯ ವೈದ್ಯರೇ ನಿಬ್ಬೆರಗಾಗಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ನಂತ್ರ ಐಸಿಯುನಲ್ಲಿಟ್ಟು, ಚಿಕಿತ್ಸೆ ನೀಡುತ್ತಿದ್ದಾರೆ.

15.ನಟ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬನಶಂಕರಿಯ ದೇವಗಿರಿ ದೇವರ ಸಮ್ಮುಖದಲ್ಲಿ ಕಲಾ ನಿರ್ದೇಶಕ ಅರುಣ್ ಸಾಗರ್ ನಿರ್ಮಿಸಿದ್ದ ತೆಂಗಿನ ಗರಿಯ ಹಸಿರು ಚಪ್ಪರದಡಿಯಲ್ಲಿ ಉಂಗುರ ಬದಲಾಯಿಸಿಕೊಂಡ್ರು.. ಈ ವೇಳೆ ಕುಟುಂಬದ ಆಪ್ತರು, ಚಿತ್ರರಂಗದ ಗಣ್ಯರು ಹಾಜರಿದ್ರು.. ಈ ಮೂಲಕ ತಮ್ಮ ಹದಿನಾಲ್ಕು ವರ್ಷದ ಪ್ರೀತಿಗೆ ಹೊಸ ಅರ್ಥ ಬರೆದಿದ್ದಾರೆ.

16.2012ರಲ್ಲಿ ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಓರ್ವ ಬಾಲಕ ಹಳಿಗೆ ಹಾರಿದ್ದ. ಈ ರೀತಿಯ ಘಟನೆ ಮತ್ತೆ ನಡೆಯದಂತೆ ಎಚ್ಚರ ವಹಿಸಲು ಬಾಗಿಲು ಅಳವಡಿಸ ನಿಗಮ ಮುಂದಾಗಿದೆ. ಸದ್ಯ ಅಂಡರ್ ಗ್ರೌಂಡ್ ನಿಲ್ದಾಣದಲ್ಲಿ ಎರಡು ಟ್ರ್ಯಾಕ್​ಗಳ ನಡುವೆ ಅಂತರ ಕಡಿಮೆ ಇದೆ. ಕೆಲ ನಿಲ್ದಾಣಗಳಲ್ಲಿ ಪೀಕ್ ಅವರ್ಸ್​ನಲ್ಲಿ ಅತಿಹೆಚ್ಚು ಜನದಟ್ಟಣೆ ಉಂಟಾಗ್ತಿದೆ. ಹೀಗಾಗಿ ಸ್ಕ್ರೀನ್ ಡೋರ್ ಅಳವಡಿಸೋದೆ ಪ್ರಯಾಣಿಕರ ಹಿತ ದೃಷ್ಠಿಯಿಂದ ಉತ್ತಮ ಅಂತ ತೀರ್ಮಾನಿಸಿರೋ ಮೆಟ್ರೋ ನಿಗಮ ಈ ನಿರ್ಧಾರಕ್ಕೆ ಬಂದಿದೆ.

17.ಅಪ್ರಾಪ್ತೆಯನ್ನ ಲವ್​ ಮಾಡಬೇಡ ಅಂದಿದ್ದಕ್ಕೆ ಅಮ್ಮನಿಗೆ ಥಳಿಸುತ್ತಿರೋ ಪಾಪಿ ಮಗನ ರಾಕ್ಷಸಿ ಕೃತ್ಯವನ್ನ,, ಅಂದ ಹಾಗೆ ಈ ದೃಶ್ಯ ನಿಮಗೆ ಮತ್ತೆ ನೆನಪಿಸೋಕೆ ಕಾರಣಾನೂ ಇದೆ. ಸಿಲಿಕಾನ್​ ಸಿಟಿಯಲ್ಲಿ ಇಂತದ್ದೇ ಮತ್ತೊಬ್ಬ ಪಾಪಿ ಮಗನ ಹುಚ್ಚಾಟ ಬೆಳಕಿಗೆ ಬಂದಿದೆ.

18.ಇವತ್ತಿಗೆ ಒಂದು ವಾರದ ಹಿಂದೆ ನಟಿ ರಾಧಿಕಾ ಪಂಡಿತ್ ಹೊಸ ಜೀವಕ್ಕೆ ಜನ್ಮಕೊಟ್ಟರು.. ಆ ದಿನದಿಂದಲೇ ಮನೆ ಮಂದಿಯ ಜೊತೆಗೆ ನಾಡಿನ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂತಸವೋ ಸಂತಸ. ಸುಸುಕ್ಷಿತ ಹೆರಗೆಯ ನಂತರ ರಾಧಿಕಾ ಇಂದು ಆಸ್ಪೆತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಗಳನ್ನು ಮನೆ ಅಂಗಳಕ್ಕೆ ಕರೆದೊಯಲ್ಲು ಯಶ್ ಆಸ್ಪೆತ್ರೆಗೆ ಬಂದು ಹೆಂಡತಿ ಮಗಳನ್ನು ಕರೆದೊಯಿದ್ದರು

19.ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. 10 ವರ್ಷಗಳ ಹಿಂದೆ ಪೊಲೀಸ್​ ಕಸ್ಟಡಿಯಿಂದಲೇ ತಪ್ಪಿಸಿಕೊಂಡ ನಂತರ ಇವ್ನು ಆಡಿದ್ದೇ ಆಟವಾಗಿತ್ತು. ಅಂತಹ ನಟೋರಿಯಸ್ ಕ್ರಿಮಿನಲ್ ಕಾಲನ್ನ ಈಗ ಸಿಲಿಕಾನ್ ಸಿಟಿ ಪೊಲೀಸ್ರು ಸೀಳಿದ್ದಾರೆ.

ಇವನೇ ನಟೋರಿಯಸ್ ಕ್ರಿಮಿನಲ್, ರಾಜೇಶ್.. ಮೈಸೂರಿನ ಎನ್ ಆರ್ ಪುರ ಠಾಣೆ ರೌಡಿಶೀಟರ್. ದರೋಡೆ ಕಳ್ಳತನ ಕೊಲೆ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ರಿಗೆ ಬೇಕಾಗಿದ್ದ ಆರೋಪಿ. 10 ವರ್ಷಗಳ ಹಿಂದೆ ಹುಬ್ಬಳ್ಳಿ ಧಾರವಾಡ ಪೊಲಿಸ್ರಿಂದ ತಪ್ಪಿಸಿಕೊಂಡಿದ್ದ. ಈತನ ಬೆನ್ನ ಹಿಂದೆ ಬಿದ್ದಿದ್ದ ಅನ್ನ ಪೂರ್ಣೇಶ್ವರಿ ನಗರ ಪೊಲೀಸ್ರು ಖೆಡ್ಡಾಗೆ ಕೆಡವಿದ್ದಾರೆ.

20.ಬೆಳಗಾವಿಯ ಸುವರ್ಣಸೌಧದಲ್ಲಿ ೧೦ ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಸರ್ಕಾರದ ಹಲವು ಮಹತ್ವದ ಯೋಜನೆಗಳು, ವಿಧೇಯಕಗಳ ಬಗ್ಗೆ ಚರ್ಚೆ ನಡೆಯಲಿದೆ. ಆದ್ರೆ, ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಅಟ್ಯಾಕ್​​ ಮಾಡೋಕೆ ಸಿದ್ಧರಾಗಿದ್ದು, ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳಿಂದ ಕೊಡಬೇಕಿರುವ ಬಾಕಿ ವಿಚಾರಗಳನ್ನ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಿಎಂ ಕುಮಾರಸ್ವಾಮಿ ಕಾಲೆಳೆಯೋಕೆ ನಿರ್ಧರಿಸಿದ್ದಾರೆ.

21.ಉತ್ತರ ಕರ್ನಾಟಕ ಅನ್ನದಾತರಿಗೆ ಸಕ್ಕರೆ ಕಾರ್ಖಾನೆಗಳು ಕೋಟಿ ಕೋಟಿ ಹಣವನ್ನ ಬಾಕಿ ಉಳಿಸಿಕೊಂಡಿವೆ. ಸರ್ಕಾರ ಯಾವುದೇ ಬಾಕಿ ಇಲ್ಲಾ ಅಂತ ಸಮಜಾಯಿಸಿ ನೀಡಿದ್ರೆ. ಇತ್ತ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಮೂರು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬರೊಬ್ಬರಿ 1600ಕ್ಕೂ ಅಧಿಕ ಕೋಟಿ ರುಪಾಯಿ ಬಾಕಿ ಬಿಲ್ ನೀಡಬೇಕಿದೆ.

22.ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಅನ್ನದಾತರು ನಾಳೆಯಿಂದ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಅಧಿವೇಶನದ ಒಳಗೆ ಕಬ್ಬು ಬಾಕಿ ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದ್ರೆ, ಅಧಿವೇಶನ ಬಂದ್ರೂ ಭರವಸೆ ಮಾತ್ರ ಈಡೇರಿಲ್ಲ. ಹೀಗಾಗಿ, ರೈತರು ಮತ್ತೆ ಬೀದಿಗಿಳಿಯಲು ಸಿದ್ಧವಾಗಿದ್ದಾರೆ. ವಿವಿಧ ಜಿಲ್ಲೆಯಿಂದ ರೈತರು ಆಗಮಿಸಿ, ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿದ್ದಾರೆ.

23.ಹಾಸನದ ತವರು ತೊಟ್ಟಿಲು ಬಳಿ ತಿಂಗಳ ಮಗುವನ್ನು ತಾಯಿಯೊಬ್ಬಳು ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಮಗು 3.3 ಕೆಜಿಯಷ್ಟಿದ್ದು, ಮಗು ಉಸಿರಾಟ ಹಾಗೂ ಜ್ವರದಿಂದ ಬಳಲುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗು ಅನಾರೋಗ್ಯದಿಂದ ಬಳಲುತ್ತಿರೋದ್ರಿಂದಾಗಿ ಮಗುವನ್ನು ಬಿಟ್ಟು ಹೋಗಿರೋದಾಗಿ ತಾಯಿ ಪತ್ರ ಬರೆದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದಾಳೆ. ಮಗುವಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದು ಈಗಾಗಲೇ 2.5ಲಕ್ಷ ಖರ್ಚು ಮಾಡಿದ್ದೇವೆ. ಬಡವರಾಗಿರೋ ಕಾರಣದಿಂದಾಗಿ ಖರ್ಚು ಮಾಡೋ ಸ್ಥಿತಿಯಲ್ಲಿ ನಾವಿಲ್ಲ ಹಾಗಾಗಿ ಮಗುವನ್ನ ನಿಮ್ಮ ಬಳಿ ಬಿಟ್ಟು ಹೋಗುತ್ತಿದ್ದೇನೆ.. ನಿಮ್ಮ ಮಗುವಂತೆ ನೋಡಿಕೊಳ್ಳಿ ಎಂದು ಪತ್ರ ಬರೆದಿದ್ದಾರೆ.

24.ಕೋಲಾರದ ಪ್ರವಾಸಿ ಮಂದಿರ ಎದುರು ಆಯೋಜಿಸಿದ್ದ 531 ನೇ ಕನಕ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯರ ಚಾಮುಂಡೇಶ್ವರಿ ಸೋಲು ನೆನೆದು ಭಾವುಕರಾದ್ರು. ಮಾಜಿ ಸಿಎಂ ದೇವರಾಜು ಅರಸು ನಂತರ ರಾಜ್ಯಕ್ಕೆ ಜನಪರ ಕೊಡುಗೆ ನೀಡಿದ ನಾಯಕ ಎಂದ್ರೆ ಸಿದ್ದರಾಮಯ್ಯ. ಅವರನ್ನೇ ಚಾಮುಂಡೇಶ್ವರಿಯಲ್ಲಿ ಸಂಚು ರೂಪಿಸಿ ಸೋಲಿಸಿಯಾಯ್ತು.. ಇದ್ರ ಹೊಣೆಯನ್ನ ಕ್ಷೇತ್ರದ ಮತದಾರರೇ ಹೊರಬೇಕು ಅಂತ ಗದ್ಗದಿತರಾದ್ರು.

25.180 ವರ್ಷಗಳಷ್ಟು ಹಳೇ ಕಟ್ಟಡದಲ್ಲಿ ನಡೀತಿರೋ ಸರ್ಕಾರಿ ಆಸ್ಪತ್ರೆಗೆ ಹೊಸ ಕಟ್ಟದ ನಿರ್ಮಾಣವಾಗಿದೆ. ಹಳೇ ಬಿಲ್ಡಿಂಗ್‌ನಿಂದ ವಿಭಾಗಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಆದ್ರೂ ಎನ್‌ಐಸಿಯು ಮಾತ್ರ ಹಳೇ ಕಟ್ಟಡದಲ್ಲಿಯೇ ಇದೆ. ಇಂದು ವಾರ್ಮರ್‌ನಲ್ಲಿ ಆಗತಾನೆ ಹುಟ್ಟಿದ 5 ಮಕ್ಕಳಿಗೆ ಆಕ್ಸಿಜನ್ ಕೊರತೆಯಿಂದ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಇದ್ದಕ್ಕಿದ್ದಂತೆ ಶಾರ್ಟ್‌ ಸರ್ಕ್ಯೂಟ್‌ನಿಂದ ಹೊಗೆ ಕಾಣಿಸಿಕೊಂಡು ವಾರ್ಮರ್ ಬ್ಲಾಸ್ಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಸಿಬ್ಬಂದಿ ಒಳಗಿದ್ದ ಐದು ಹಸುಗೂಸುಗಳನ್ನ ಹೊರಗಡೆಯಿದ್ದ 4 ಕಂದಮ್ಮಗಳನ್ನು ವೆನ್ಲಾಕ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ರು.

26.ತಮಿಳುನಾಡಿನ ಚೆನ್ನೈನ ಡಾಕ್ಟರ್‌ ರೇಲಾ ಇನ್ಸ್‌ಟಿಟ್ಯೂಟ್‌ & ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. ಶ್ರೀಗಳಿಗೆ ಯಶಸ್ವಿಯಾಗಿ ಚಿಕಿತ್ಸೆಯಾಗಿದೆ. ಅನಸ್ಯೇಷಿಯಾದಿಂದ ಶ್ರೀಗಳು ಹೊರ ಬಂದಿದ್ದಾರೆ. ಈ ಹಿಂದೆ ಅಳವಡಿಸಿದ್ದ ಮೆಟಲ್ ಮತ್ತು ಪ್ಲಾಸ್ಟಿಕ್ ಸ್ಟೆಂಟ್‌ ಗಳನ್ನು ತೆಗೆಯಾಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಶ್ರೀಗಳ ಆರೋಗ್ಯ ಉತ್ತಮ ಸ್ಥಿಯಲ್ಲಿದೆ. ಸದ್ಯ ಶ್ರೀಗಳನ್ನು ಲಿವರ್ ಐಸಿಯೂನಲ್ಲಿ ಇಟ್ಟು ಪರೀಕ್ಷಿಸಲಾಗುತ್ತಿದೆ ಅಂತಾ ಚೆನ್ನೈನ ರೇಲಾ ಆಸ್ಪತ್ರೆ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದೆ. ಇನ್ನೂ ಶ್ರೀಗಳ ಆರೋಗ್ಯ ವಿಚಾರಿಸಲು ಸಿಎಂ ಹೆಚ್‌.ಡಿಕುಮಾರಸ್ವಾಮಿ ಚೆನ್ನೈಗೆ ತೆರಳಿದ್ದಾರೆ. ಇನ್ನೂ ಶ್ರೀಗಳಿಗೆ ಸೋಂಕು ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಮೂರು ದಿನಗಳವರೆಗೆ ಶ್ರೀಗಳನ್ನು ಯಾರು ಭೇಟಿ ಮಾಡದಂತೆ ವೈದ್ಯರು , ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಿಗೆ ಸೂಚಿಸಿದ್ದಾರೆ.

27.ಮಾಜಿ ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತಗಾರ.. ಅವ್ರು, ಒಂದು ಬಾರಿ ಅಲ್ಲ.. 10 ಬಾರಿ ಸಿಎಂ ಆಗ್ಬೇಕು ಅಂತ ಮಾಜಿ ಸಚಿವ ಶಿವರಾಜ್​ ತಂಗಡಗಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವ್ರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅಂತ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಂಸದ ಕರಡಿ ಸಂಗಣ್ಣ ವಿರುದ್ಧ ಕಿಡಿಕಾರಿದ ಅವ್ರು, ಕರಡಿ ಸಂಗಣ್ಣರನ್ನು ಈ ಬಾರಿ ಕಾಡಿಗೆ ಕಳುಹಿಸುತ್ತೇವೆ. ಸಂಸದರಾಗಿ ಒಂದೇ ಒಂದು ಸಣ್ಣ ಕೆಲಸ ಕೂಡ ಮಾಡಿಲ್ಲ. ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.

28.ಮೈಸೂರಿನಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಡಿಸಿ ಮತ್ತು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಜೊತೆ ಸಚಿವ ಸಾ.ರಾ.ಮಹೇಶ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ K.R.ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಕಾರ್ಖಾನೆಯನ್ನ 40 ವರ್ಷದ ಅವಧಿಗೆ ಲೀಸ್​ಗೆ ನೀಡಲು ಚಿಂತನೆ ನಡೆಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ಒಂದು ತಿಂಗಳೊಳಗಾಗಿ ಟೆಂಡರ್ ಕರೆಯಲು ತೀರ್ಮಾನ ಮಾಡಿದ್ದಾರೆ. ಇನ್ನು ಸರ್ಕಾರದ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು ಬಹಳಷ್ಟು ನಷ್ಟದಲ್ಲಿವೆ. ಹೀಗಾಗಿ ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ನೀಡಲು ಮುಂದಾಗಿದ್ದೇವೆ ಅಂತ ಸಚಿವ ಸಾ.ರಾ.ಮಹೇಶ್​ ಹೇಳಿದ್ದಾರೆ.

29.ಹಾಸನದಲ್ಲಿ ಮಹಿಳೆಯೊಬ್ಬಳು ಹೆತ್ತ ಮಗುವನ್ನೇ ಬಿಟ್ಟು ಹೋದ ಮನಕಲುಕುವ ಘಟನೆ ನಡೆದಿದೆ. ನಗರದ ಉತ್ತರ ಬಡಾವಣೆ ತವರಿನ ತೊಟ್ಟಿಲು ಬಳಿ 3.3 ಕೆಜಿ ತೂಕದ ಒಂದು ತಿಂಗಳ ಹೆಣ್ಣು ಮಗುವನ್ನ ಬಿಟ್ಟು ಹೋಗಿದ್ದಾರೆ. ಉಸಿರಾಟ ಹಾಗೂ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮಗುವಿನೊಂದಿಗೆ ಪತ್ರ ಇಟ್ಟು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, 2.5 ಲಕ್ಷ ಖರ್ಚು ಮಾಡಿರುವುದಾಗಿ ಪೋಷಕರು ಬರೆದಿದ್ದಾರೆ. ಅಲ್ದೇ ಬಡವರಾಗಿದ್ದು, ಚಿಕಿತ್ಸೆಗೆ ಹಣವಿಲ್ಲದ ಕಾರಣ ಮಗು ಬಿಟ್ಟು ಹೋಗಿರೋದಾಗಿ ಪತ್ರ ಬರೆದಿದ್ದಾರೆ.

30.ಪ್ರೀತಿಸಿ ಮದುವೆಯಾಗಿದ್ದೇ ಈ ಯುವತಿಗೆ ಮುಳುವಾಯ್ತ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ 4 ದಿನದ ಹಸುಗೂಸು ಜೊತೆ ಬಾಣಂತಿ ಬೀದಿಪಾಲಾಗಿದ್ದಾಳೆ. ಚಿತ್ರದುರ್ಗದಲ್ಲಿ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನೆಲಗೇತನಹಟ್ಟಿ ನಿವಾಸಿ ಶಾರದಮ್ಮ ಬೀದಿಪಾಲಾದ ಮಹಿಳೆ. ಈಕೆ 4 ದಿನಗಳ ಹಿಂದೆಯಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ರು.. ಆದ್ರೆ ಪತಿ ಮಾತ್ರ ಆಕೆಯನ್ನ ನೋಡಲು ಬಂದಿಲ್ಲ. ಇನ್ನು ಗಂಡ ಬರುವ ತನಕ ಮನೆಗೆ ಬರಬೇಡ ಎಂದು ಅತ್ತೆ ಬಾಣಂತಿಯನ್ನ ಹೊರಹಾಕಿದ್ದಾರೆ. ಯಾವುದೇ ದಾರಿ ಕಾಣದೆ ಶಾರದಮ್ಮ ಮಗುವಿನೊಂದಿಗೆ ದೇವಸ್ಥಾನದಲ್ಲಿ ಇದ್ದಾರೆ.

31.ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಓಟ ಆಯೋಜಿಸಲಾಗಿತ್ತು. ಡಿಸಿಪಿ ರವಿ ಚೆನ್ನಣ್ಣನವರ್ ಮಾರ್ಗದರ್ಶನದಲ್ಲಿ 10 ಕಿಲೋ ಮೀಟರ್‌ ಓಟ ಆಯೋಜಿಸಲಾಗಿತ್ತು, ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಓಟದಲ್ಲಿ ಪಾಲ್ಗೊಂಡು ಖುಷಿಪಟ್ಟರು. ಈ ವೇಳೆ ಮಾತನಾಡಿದ ಡಿಸಿಪಿ ರವಿ ಚೆನ್ನಣ್ಣನವರ್‌, ಸಮಾಜದಲ್ಲಿ ಪೊಲೀಸರು ಮಾತ್ರವಲ್ಲ, ಸಾರ್ವಜನಿಕರೂ ಕೂಡ ಅಪರಾಧ ತಡೆಯುವಲ್ಲಿ ಪಾಲಿದೆ ಅಂತಾ ಅಭಿಪ್ರಾಯಪಟ್ಟರು. ಇನ್ನೂ ಜಯನಗರ ಪೊಲೀಸ್‌ ಮತ್ತು ಬಾಸ್ಕೆಟ್ ಇನ್ಯೂರೆನ್ಸ್ ಸಹಯೋಗದೊಂದಿಗೆ ಬೈಕ್ ರೈಡ್ ಮ್ಯಾರಥಾನ್ ಆಯೋಜಿಸಲಾಗಿತ್ತು. 300ಕ್ಕೂ ಹೆಚ್ಚು ಬೈಕ್‌ ರೈಡರ್ಸ್‌ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು, ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಡ್ರಗ್ ಸೇವನೆ ಮಾಡದಂತೆ ಜಾಗೃತಿ ಮೂಡಿಸಿದರು.

32.ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ದಂಪತಿ ಲಂಡನ್ ಪ್ರವಾಸದಲ್ಲಿದ್ದಾರೆ. ಲಂಡನ್‌ನಲ್ಲಿ ಪ್ರತಿಷ್ಠಾಪಿಸಿರುವ ಬಸವಣ್ಣನ ಪ್ರತಿಮೆಗೆ ಯದುವೀರ್ ದಂಪತಿ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದ್ರು. ಲಂಡನ್‌ನ ಲ್ಯಾಂಬೆಥ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್‌ ಯದುವೀರ್‌ಗೆ ಸಾಥ್ ನೀಡಿದ್ರು.. ಇನ್ನು ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗರು ಯದುವೀರ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ರು.

33.ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ 2018ರ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಟಾಗೋರ್ ಕಡಲ ತೀರದ ಮಯೂರ ವರ್ಮವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ದೀಪಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಿಲ್ಲೆಯ ಪ್ರವಾಸಿ ತಾಣಗಳ ಚಿತ್ರಗಳನ್ನು ಹೊಂದಿರುವ ನೂತನ ಕ್ಯಾಲೆಂಡರ್ ಉದ್ಘಾಟನೆ ಮಾಡಿದರು.

34.ಕಡೆಗೂ ಪಾಕಿಸ್ತಾನ ತನ್ನ ತಪ್ಪು ಒಪ್ಪಿಕೊಂಡಿದೆ. ಮುಂಬೈ ದಾಳಿಯ ಹೊಣೆ ಹೊತ್ತಿಕೊಂಡಿದೆ. ಭಾರತದಲ್ಲಿ ನಡೆದ 26/11 ರ ಖಳನಾಯಕ ತಾನೇ ಎಂದು ಪಾಕಿಸ್ತಾನ ತಪ್ಪೊಪ್ಪಿಕೊಂಡಿದೆ. 2008ರ ನವೆಂಬರ್‌ 26ರಂದು ಮುಂಬೈನಲ್ಲಿ 160ಕ್ಕೂ ಹೆಚ್ಚು ಜನರ ಮಾರಣಹೋಮ ನಡೆಸಿದ್ದು, ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಸಂಘಟನೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಸುಮಾರು 10 ವರ್ಷಗಳಿಂದಲೂ ಮುಂಬೈ ದಾಳಿಯಲ್ಲಿ ತನ್ನ ಕೈವಾಡ ನಿರಾಕರಿಸುತ್ತಲೇ ಬಂದಿದ್ದ ಪಾಕಿಸ್ತಾನ ಇದೇ ಮೊದಲ ಬಾರಿಗೆ ತಪ್ಪೊಪ್ಪಿಕೊಂಡಂತಾಗಿದೆ. ಪತ್ರಿಕೆಯೊಂದಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಇಮ್ರಾನ್ ಖಾನ್, ಮಂಬೈ ದಾಳಿ ಸಂಚುಕೋರರ ವಿರುದ್ಧ ಕ್ರಮ ಜರುಗಿಸಲು ಪಾಕ್ ಬಯಸುತ್ತಿದೆ. ಹೀಗಾಗಿಯೇ ಪ್ರಕರಣದ ತನಿಖೆ ಹಾಗೂ ವಿಚಾರಣೆಯ ಸ್ಥಿತಿಗತಿಯನ್ನು ತಿಳಿದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂತಾ ಹೇಳಿದ್ರು.

35.ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸೋದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಮಾತುಕೊಟ್ಟು ಮರೆತಿದೆ. ಹೀಗಾಗಿ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ಮತ್ತೆ ಬೀದಿಗೆ ಇಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸ್ತಿದ್ದಾರೆ. ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಸೆಷನ್‌ಗೂ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ.. ಸಿಎಂ ಕುಮಾರಸ್ವಾಮಿ ವಿರುದ್ಧ ಗರಂ ಆಗಿರುವ ಅನ್ನದಾತರು ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈ ಬಿಡುವ ಮಾತೇ ಇಲ್ಲ ಎಂದು ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದಾರೆ.

36.ಹೆಣ್ಣು ಮಗುವಿಗೆ ಜನ್ಮ ನೀಡಿರುವ ನಟಿ ರಾಧಿಕಾ ಪಂಡಿತ್‌ ಫೋರ್ಟಿಸ್​​​ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ. ಡಿಸೆಂಬರ್ 2ರಂದು ರಾಧಿಕಾಗೆ ಹೆಣ್ಣು ಮಗು ಜನನವಾಗಿತ್ತು. ಒಂದು ವಾರದಿಂದ ರಾಧಿಕಾ ಪಂಡಿತ್ ಆಸ್ಪತ್ರೆಯಲ್ಲಿ ಇದ್ದರು. ಇನ್ನು ಡಿಸ್ಚಾರ್ಜ್ ಆಗ್ತಿರೋ ಬೆನ್ನಲ್ಲೇ ಸ್ಯಾಂಡಲ್‌ವುಡ್ ಸಿಂಡ್ರೆಲಾ ಪ್ರೆಸ್‌ಮೀಟ್ ಮಾಡ್ತಿದ್ದಾರೆ.

37.ಬೆಳಗಾವಿ ಅಧಿವೇಶನದೊಳಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸೋದಾಗಿ ಮಾತು ನೀಡಿ ಮರೆತ ದೋಸ್ತಿ ಸರ್ಕಾರದ ವಿರುದ್ಧ ಅನ್ನದಾತರು ಮತ್ತೆ ಬೀದಿಗಿಳಿದಿದ್ದಾರೆ. ಬೆಳಗಾವಿಯ ಡಿಸಿ ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದೆ. ಕಬ್ಬಿನ ಬಾಕಿ ಬಿಲ್, ಬೆಲೆ ನಿಗದಿಗೆ ಆಗ್ರಹಿಸಿ ಕರಡಿ ಮಜಲು ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸೋವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಹೇಳಿದ್ರು.

38.ವಿಶ್ವ ಹಿಂದೂ ಪರಿಷತ್​​ ವತಿಯಿಂದ ರಾಜಧಾನಿ ದೆಹಲಿಯಲ್ಲಿ ಧರ್ಮ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾರ್ಯಕ್ರಮವನ್ನ ಆಯೋಜಿಸಿದ್ದು, ಬೃಹತ್​ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಅಯೋಧ್ಯದಲ್ಲಿ ಆರ್​​ಎಸ್​​ಎಸ್​​​ ಹಾಗೂ ವಿಹೆಚ್​​ಪಿ ಕಾರ್ಯಕರ್ತರು ಈಗಾಗಲೇ ಬೃಹತ್​ ಱಲಿ ಆರಂಭಿಸಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಸುಮಾರು 5 ಲಕ್ಷ ಜನ ಸೇರಿದ್ದಾರೆ. ರಾಮಮಂದಿರ ನಿರ್ಮಾಣದ ಕುರಿತು ಧರ್ಮ ಸಭಾ ಕಾರ್ಯಕ್ರಮದಲ್ಲಿ ಘೋಷಣೆಗಳನ್ನ ಕೂಗ್ತಾ ಇದ್ದು, ರಾಮಮಂದಿರ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರ ಮೇಲೆ ಮತ್ತಷ್ಟು ಒತ್ತಡ ಹಾಕಲಾಗಿದೆ. ಇನ್ನು ಕಾರ್ಯಕ್ರಮಕ್ಕೆ RSS ಹಾಗೂ VHP ಹಿರಿಯ ಮುಖಂಡರೂ ಭಾಗಿಯಾಗುತ್ತಿದ್ದು, 2009ರಲ್ಲಿ ನೀಡಿದ ಸಂದೇಶವನ್ನೇ 2018ರಲ್ಲೂ ನೀಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

39.ಮಂಗಳೂರಿನ ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ವಾದ ನಡೆದಿದೆ.. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ ಅಂತ ಆರೋಪಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮವನ್ನ ವಿರೋಧಿಸಿದ್ರು.. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.. ಈ ವೇಳೆ ಪೊಲೀಸರ ಮಧ್ಯ ಪ್ರವೇಶದಿಂದ ಸಂಘರ್ಷ ತಣ್ಣಗಾಗಿದೆ.. ಇನ್ನು ಈ ಬಳಿಕ ಮಾತಾಡಿದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರ ಮನವಿಯ ಮೇರೆಗೆ ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲ ನೀಡಿತ್ತು.. ಆದ್ರೆ, ಇದನ್ನ ಸರ್ಕಾರಿ ಕಾರ್ಯಕ್ರಮ ಮಾಡದೇ ಪೂರ್ತಿ ಕಾಂಗ್ರೆಸ್ ಕಾರ್ಯಕ್ರಮ ಮಾಡಲಾಗಿದೆ, ಅಲ್ಲದೇ ನಮ್ಮ ಶಾಸಕರು ಮತ್ತು ಜನಪ್ರತಿನಿಧಿಗಳನ್ನ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಅಂತ ಆರೋಪಿಸಿದ್ರು..

40.ವಿಜಯಪುರ ನಗರದಲ್ಲಿ ಮೊನ್ನೆಯಷ್ಟೆ ನಾಲ್ಕು ನೂತನ ಇಂದಿರಾ ಕ್ಯಾಂಟೀನ್​​​​ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಮನಗೂಳಿ ಉದ್ಘಾಟಿಸಿದ್ದರು. ಕೇವಲ ಉದ್ಘಾಟನೆ ದಿನದಂದು ಜನರಿಗೆ ರುಚಿಯೂಟ ಬಡಿಸಿದ್ದ ಇಂದಿರಾ ಕ್ಯಾಂಟೀನ್ ಇಂದು ಮುಂಜಾನೆಯ ಉಪಹಾರದಲ್ಲಿ ಹುಳುಗಳ ಸಮೇತ ಅಡುಗೆ ಮಾಡಿದ್ದಾರೆ. ಎಂದಿನಂತೆ ಬೆಳಿಗ್ಗೆ ಗ್ರಾಹಕರು ಉಪಹಾರಕ್ಕೆಂದು ಐಟಿಐ ಕಾಲೇಜು ಬಳಿಯಿರುವ ಇಂದಿರಾ ಕ್ಯಾಂಟೀನ್​​​ಗೆ ಆಗಮಿಸಿದಾಗ ಕೇಸರೀಬಾತ್​​ನಲ್ಲಿ ಬಾಲಹುಳುಗಳು ಪತ್ತೆಯಾಗಿವೆ. ಇದ್ರಿಂದ ಆಕ್ರೋಶಗೊಂಡ ಸಾರ್ವಜನಿಕರು, ದಿನ ನಿತ್ಯದ ಅಡುಗೆಗಳು ಅತ್ಯಂತ ಕಳಪೆಯಾಗಿರುತ್ತವೆ ಎಂದು ಆರೋಪಿಸಿದ್ದಾರೆ.

41.ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ಸಾಗಿದೆ. ನಾಲ್ಕನೆ ದಿನದಾಟ ಅಂತ್ಯವಾಗಿದ್ದು, ಟೀಂ ಇಂಡಿಯಾಗೆ ಗೆಲ್ಲಲು ಇನ್ನು 6 ವಿಕೆಟ್​ಗಳು ಬೇಕಿದೆ. 323 ರನ್​ಗಳ ಟಾರ್ಗೆಟ್ ಬೆನ್ನತ್ತಿರೋ ಆಸ್ಟ್ರೇಲಿಯಾ, ಉತ್ತಮ ಆರಂಭದ ಹೊರತಾಗಿಯೂ ನಾಲ್ಕು ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿ ಸಿಲುಕಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ. ಆಸಿಸ್ ಗೆ ಗೆಲ್ಲಲು ಇನ್ನು 219 ರನ್​ಗಳ ಅಗತ್ಯ ಇದೆ. ಇದಕ್ಕೂ ಮುನ್ನ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 307 ರನ್​ಗಳಿಗೆ ಆಲೌಟ್ ಆಯಿತು.

42.ರೈತ ಹಾಗೂ ಆತನ ಪುತ್ರನ ಮೇಲೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಲಕುಂದ್ಲಿ ಗ್ರಾಮದಲ್ಲಿ ನಡೆದಿದೆ, ನಾಗುಂಡಿ ಜಾವಪ್ಪ ಹಾಗೂ ಅವರ ಪುತ್ರ ವಿಜಿ ಎಂಬವರ ಮೇಲೆ ಹಲ್ಲೆ ನಡೆದಿದೆ. ಅರಣ್ಯ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ ನಾಗುಂಡಿ ಜಾವಪ್ಪಗೆ ಸರ್ಕಾರವೇ ಬಗರ್‌ಹುಕುಂ ಹಕ್ಕು ಪತ್ರ ನೀಡಿದೆ. ಹೀಗಿದ್ದರೂ ಗ್ರಾಮಸ್ಥರು ದಂಡ ಕಟ್ಟುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಒಪ್ಪದ ತಂದೆ ಮಗನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

43.ಮಂಗಳೂರಿನಲ್ಲಿ ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ನಗರದ ಲೇಡಿಗೋಷನ್ ಆಸ್ಪತ್ರೆಯ NICUನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ.. ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಆಕ್ಸಿಜನ್ ಯಂತ್ರ ರಿಪೇರಿ ಮಾಡುವ ವೇಳೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.. ತಕ್ಷಣ ಆಸ್ಪತ್ರೆ ಸಿಬ್ಬಂದಿ ಮಕ್ಕಳನ್ನು ರಕ್ಷಿಸಿದ್ದು, NICUನಲ್ಲಿದ್ದ ನಾಲ್ಕು ಶಿಶುಗಳನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.. ಇನ್ನು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

44.ಇತ್ತ ಇನ್ನೊಂದೆಡೆ ಬಿಜೆಪಿ ಕೂಡ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ರೈತರ ವಿಷ್ಯವನ್ನೇ ಅಸ್ತ್ರ ಮಾಡಿಕೊಳ್ಳಲು ಮುಂದಾಗಿದೆ.. ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ತು, ನಾಳೆ ಸುವರ್ಣ ಸೌಧ ಮುಂದೆ ರೈತರ ಬೃಹತ್ ಸಮಾವೇಶಕ್ಕೆ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರು, ದೋಸ್ತಿ ಸರ್ಕಾರ, ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ರೈತರ ಹಿತ ಕಾಪಾಡಲು, ನಾಳೆ ಬೃಹತ್ ಸಮಾವೇಶ ಮಾಡ್ತಿದ್ದೀವಿ. ರಾಜ್ಯ ಸರ್ಕಾರ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಹೇಳಿದ್ರು.

45.ಬೆಳಗಾವಿ ಅಧಿವೇಶನದೊಳಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸೋದಾಗಿ ಮಾತು ನೀಡಿ ಮರೆತ ದೋಸ್ತಿ ಸರ್ಕಾರದ ವಿರುದ್ಧ ಅನ್ನದಾತರು ಮತ್ತೆ ಬೀದಿಗಿಳಿದಿದ್ದಾರೆ. ಬೆಳಗಾವಿಯ ಡಿಸಿ ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದೆ. ಕಬ್ಬಿನ ಬಾಕಿ ಬಿಲ್, ಬೆಲೆ ನಿಗದಿಗೆ ಆಗ್ರಹಿಸಿ ಕರಡಿ ಮಜಲು ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸೋವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಹೇಳಿದ್ರು.

46.ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರದಿಂದ ತಮ್ಮ ವಿದೇಶ ಪ್ರವಾಸ ಆರಂಭಿಸಲಿದ್ದಾರೆ. ಸಿದ್ದರಾಮಯ್ಯ ಮಲೇಷ್ಯಾ ಸಿಂಗಾಪುರಕ್ಕೆ ತೆರಳುತ್ತಿರೋ ಹಿನ್ನೆಲೆ ಕಾಂಗ್ರೆಸ್​ ಶಾಸಕಾಂಗ ಸಭೆ ಮುಂದೂಡಲಾಗಿದೆ. ಡಿಸೆಂಬರ್​ 12ರಂದು ನಡೆಯಬೇಕಾಗಿದ್ದ ಸಿಎಲ್​ಪಿ ಸಭೆ ಡಿಸೆಂಬರ್​​ 18ಕ್ಕೆ ಮುಂದೂಡಲಾಗಿದೆ. ಶಾಸಕಾಂಗ ಸಭೆಗೆ ಕಾಂಗ್ರೆಸ್​ನ ಎಲ್ಲಾ ಶಾಸಕರು ಹಾಜರಿರುವಂತೆ ಪರಮೇಶ್ವರ್​ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ

47.ನಾಳೆಯಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಶುರುವಾಗಲಿದೆ..ಇನ್ನು ಸಿಎಂ ತಾರತಮ್ಯ ನಡೆಗೆ ಮುನಿಸಿಕೊಂಡ 25ಕ್ಕೂ ಹೆಚ್ಚಿನ ಕೈ ಶಾಸಕರು ಕಲಾಪಕ್ಕೆ ಗೈರಾಗ್ತಾರಾ ಎಂಬ ಪ್ರಶ್ನೆ ಮೂಡಿದೆ..ಕ್ಷೇತ್ರಗಳ ಅನುದಾನ ತಾರತಮ್ಯಕ್ಕೆ ಅಸಮಾಧಾನ, ಇನ್ನೊಂದು ಕಡೆ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ..ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆ, 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಾದ ಬಳ್ಳಾರಿಯ ನಾಗೇಂದ್ರ, ಭದ್ರಾವತಿಯ ಸಂಗಮೇಶ್, ರಹೀಂಖಾನ್, ಬಿ.ಸಿ.ಪಾಟೀಲ್, ಆನಂದ್ ಸಿಂಗ್, ಜಾರಕಿಹೊಳಿ ಬ್ರದರ್ಸ್​ ಸೇರಿದಂತೆ ಇನ್ನು ಉಳಿದ ಶಾಸಕರು ಚಳಿಗಾಲ ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ಇದೆ ಇಂದು ಹೇಳಲಾಗಿದೆ..

48.ಸಿದ್ದರಾಮಯ್ಯರನ್ನ ನೆನೆದು ಸ್ಪೀಕರ್​ ರಮೇಶ್​ ಕುಮಾರ್​ ಕಣ್ಣೀರು ಹಾಕಿದ ಘಟನೆ ಕೋಲಾರದ ಕನಕದಾಸ ಜಯಂತಿಯಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ರಮೇಶ್​ ಕುಮಾರ್​​.. .ಬಡವರಿಗಾಗಿ ಸಿದ್ದರಾಮಯ್ಯ ದುಡಿದರೂ ಕೆಲವರು ಕುತಂತ್ರದಿಂದ ಅವರನ್ನ ಚಾಮುಂಡೇಶ್ವರಿಯಲ್ಲಿ ಸೋಲಿಸಿದರು ಅಂತಾ ಭಾವುಕರಾದ್ರು. ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಕುರುಬ ಸಮುದಾಯದವರ ವಿರುದ್ಧ ಗರಂ ಆದ ಪ್ರಸಂಗ ನಡೀತು. ಜಿಲ್ಲಾಡಳಿತ ಜೊತೆಗೂಡಿ ಕುರುಬ ಸಮುದಾಯದವರು ಕನಕಜಯಂತಿ ಆಚರಿಸಿದ್ದಕ್ಕೆ ಸಿದ್ದರಾಮಯ್ಯ ಕೆಂಡಾಮಂಡಲರಾದ್ರು, ನಿಂಗೆ ನಾಚಿಕೆಯಾಗಲ್ವಾ..? ಜನ ಸೇರಿಸೋದು ಹೀಗಾ ಅಂತಾ ಕುರುಬ ಸಮುದಾಯದ ಅಧ್ಯಕ್ಷ ಚಿಕ್ಕಹನುಮಂತಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ರು.

49.ಪರಿಷತ್ ಸಭಾಪತಿ ಸ್ಥಾನಕ್ಕೆ ದೋಸ್ತಿಗಳಲ್ಲೇ ಪೈಪೋಟಿ ಶುರುವಾಗಿದೆ. ಬಸವರಾಜ್​ ಹೊರಟ್ಟಿಯನ್ನ ಪೂರ್ಣಾವಧಿಗೆ ಸಭಾಪತಿ ಸ್ಥಾನಕ್ಕೆ ನೇಮಿಸಲು ಜೆಡಿಎಸ್​ ಪ್ಲಾನ್​ ಮಾಡಿದೆ. ಜೆಡಿಎಸ್​ ತಂತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು..ಎಸ್​.ಆರ್​.ಪಾಟೀಲ್​ರನ್ನ ಸಭಾಪತಿ ಸ್ಥಾನಕ್ಕೆ ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ, ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆದಿನವಾಗಿದ್ರೂ... ಸಮನ್ವಯ ಸಮಿತಿ ಸಭೆಯಲ್ಲಿ ಮಾತ್ರ ದೋಸ್ತಿಗಳಲ್ಲಿ ಒಮ್ಮತ ಮೂಡಿಲ್ಲ. ಸಭಾಪತಿ ಸ್ಥಾನಕ್ಕೆ ಇಬ್ಬರೂ ನಾಮಪತ್ರ ಸಲ್ಲಿಸೋಕೆ ಮುಂದಾಗಿದ್ದು..ಇದರಿಂದ ದೋಸ್ತಿ ಸರ್ಕಾರದಲ್ಲಿ ಭಿನ್ನಮೂತ ಮೂಡುವ ಸಾಧ್ಯತೆ ಇದೆ .ಹೀಗಾಗಿ ಈ ಬಗ್ಗೆ ರಾಹುಲ್​ ಗಾಂಧಿ ಜೊತೆ ಚರ್ಚಿಸಲು ಹೆಚ್​.ಡಿ.ದೇವೇಗೌಡ ಮುಂದಾಗಿದ್ದಾರೆ.

50.ಬೆಳಗಾವಿ ಅಧಿವೇಶನದೊಳಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸೋದಾಗಿ ಮಾತು ನೀಡಿ ಮರೆತ ದೋಸ್ತಿ ಸರ್ಕಾರದ ವಿರುದ್ಧ ಅನ್ನದಾತರು ಮತ್ತೆ ಬೀದಿಗಿಳಿದಿದ್ದಾರೆ. ಬೆಳಗಾವಿಯ ಡಿಸಿ ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದೆ. ಕಬ್ಬಿನ ಬಾಕಿ ಬಿಲ್, ಬೆಲೆ ನಿಗದಿಗೆ ಆಗ್ರಹಿಸಿ ಕರಡಿ ಮಜಲು ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸೋವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಹೇಳಿದರು.

Next Story

RELATED STORIES