Top

ಅಮ್ಮನಿಗೆ ಪೊರಕೆಯಿಂದ ಹೊಡೆದ ಮಗ.. ವೀಡಿಯೊ ವೈರಲ್

ಅಮ್ಮನಿಗೆ ಪೊರಕೆಯಿಂದ ಹೊಡೆದ ಮಗ.. ವೀಡಿಯೊ ವೈರಲ್
X

ಶೋಕಿ ಜೀವನ ಮಾಡುತ್ತಿದ್ದುದ್ದೂ ಅಲ್ಲದೇ ಅಮ್ಮನ ಎದುರೇ ಸಿಗರೇಟು ಸೇದುತ್ತ ಉದ್ದಟನ ಮೆರೆಯುತ್ತದ್ದ ಮಗನಿಗೆ ಬುದ್ದಿವಾದ ಹೇಳಿ ಎಂದಿದ್ದಕ್ಕೆ ಮಗನೇ ಅಮ್ಮನಿಗೆ ಪೊರಕೆಯಿಂದ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನನ್ನ ಬಗ್ಗೆ ಎಲ್ಲರ ಮುಂದೆ ಮಾತಾಡುತ್ತಿಯಾ ಎಂದು ಇನ್ನು ಮುಂದೆ ಯಾರ ಹತ್ತಿರ ನನ್ನ ಬಗ್ಗೆ ಮಾತನಾಡಿದರೆ ಇನ್ನೂ ಹೊಡೆಯುತ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ 19 ವರ್ಷದ ಜೀವನ್ ಎಂಬಾತ ಈ ಉದ್ಧಟತನ ಮೆರೆದಿದ್ದು, ಮಗನ ದುರಂಹಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವೀಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನನ್ನ ವಿಚಾರ ಬೇರೆಯವರ ಬಳಿ ಮಾತನಾಡಿದರೆ ಇದೇ ತರಹ ಇರುತ್ತೆ ಟ್ರೀಟ್​ಮೆಂಟ್ ಇರುತ್ತದೆ. ನೀನು ಯಾವಾಗೆಲ್ಲಾ ಮಾತಾಡ್ತಿಯೋ ಆವಾಗೆಲ್ಲಾ ಹೀಗೆ ಒಡೆಯುತ್ತಲೇ ಇರುತ್ತೀನಿ ಎಂದು ಜೀವನ್ ಧಮ್ಕಿ ಹಾಕಿದ್ದಾನೆ.

ಅಪ್ರಾಪ್ತ ಯುವತಿಯೊಂದಿಗೆ ಅಸಭ್ಯವಾಗಿ ಫೋಟೋ ತೆಗೆಸಿಕೊಳ್ಳುವುದು, ಅಮ್ಮನ ಮುಂದೆಯೇ ಸಿಗರೇಟ್ ಸೇದುವುದು ಮುಂತಾದ ಕಿಡಿಗೇಡಿ ಕೃತ್ಯಗಳನ್ನು ಮಾಡಿದ್ದಾನೆ. ಮಗ ಹಾದಿ ತಪ್ಪುತ್ತಿರುವುದರಿಂದ ರೋಸಿ ಹೋದ ತಾಯಿ ಮಗನಿಗೆ ಬುದ್ದಿ ಹೇಳುವಂತೆ ಪೊಲೀಸರ ಮುಂದೆ ಮೊರೆ ಹೋಗಿದ್ದಾರೆ.

Next Story

RELATED STORIES