Top

ವಿಕೆಟ್ ಹಿಂದೆ ಧೋನಿ ದಾಖಲೆ ಸರಿಗಟ್ಟಿದ ಪಂತ್!

ವಿಕೆಟ್ ಹಿಂದೆ ಧೋನಿ ದಾಖಲೆ ಸರಿಗಟ್ಟಿದ ಪಂತ್!
X

ಭಾರತ ತಂಡದ ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ಪಂತ್ ವಿಕೆಟ್ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಶಕದ ಹಿಂದಿನ ದಾಖಲೆಯನ್ನು ಸರಿಗಟ್ಟಿದ ಸಾಧನೆ ಮಾಡಿದ್ದಾರೆ.

ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಹಾಗೂ ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹಾಗೂ ವೃದ್ಧಿಮಾನ್ ಸಹಾ ಗಾಯಗೊಂಡಿದ್ದರಿಂದ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ರಿಷಭ್ ಪಂತ್, ಒಂದರ ನಂತರ ಒಂದರಂತೆ ದಾಖಲೆಗಳನ್ನು ಬರೆಯುತ್ತಿದ್ದಾರೆ.

ಅಡಿಲೇಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಜೋಶ್ ಹಾಜ್ಲೆವುಡ್ ಕ್ಯಾಚ್ ಪಡೆಯುವ ಮೂಲಕ ಒಂದೇ ಇನಿಂಗ್ಸ್​ನಲ್ಲಿ 6 ವಿಕೆಟ್ ಪಡೆದರು. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅತೀ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಸರಿಗಟ್ಟಿದರು.

2009ರಲ್ಲಿ ವೆಲ್ಲಿಂಗ್ಟನ್​ನಲ್ಲಿ ನಡೆದ ನ್ಯುಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ 6 ಕ್ಯಾಚ್ ಪಡೆದಿದ್ದರು. ರಿಷಭ್ ಪಂತ್ ಮೊಹಮದ್ ಶಮಿ ಎಸೆತದಲ್ಲಿ ರಿಷಭ್ ಪಂತ್ ಕ್ಯಾಚ್ ಪಡೆದು ದಾಖಲೆ ಬರೆಯುವ ಮೂಲಕ ಆಸ್ಟ್ರೇಲಿಯಾದ ಇನಿಂಗ್ಸ್​ಗೆ ತೆರೆ ಎಳೆದರು.

2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್​ನಲ್ಲಿ ನಡೆದ ಟೆಸ್ಟ್ ಧೋನಿಯ ಕೊನೆಯ ಪಂದ್ಯವಾಗಿತ್ತು ರಿಷಭ್ ಪಂತ್​ಗೆ ಇದು ಕೇವಲ 6ನೇ ಟೆಸ್ಟ್ ಆಗಿದ್ದು, ಒಂದು ಶತಕ ಸೇರಿದಂತೆ ಈಗಾಗಲೇ 346 ರನ್ ಕಲೆ ಹಾಕಿದ್ದಾರೆ. ಆದರೆ ವಿಕೆಟ್ ಹಿಂದೆ ದಾಖಲೆ ಬರೆದಿದ್ದು ಇದೇ ಮೊದಲಾಗಿದೆ.

Next Story

RELATED STORIES