ಕುಮಾರಸ್ವಾಮಿ ಕೆಳಗಿಳಿಸಲು ಕೈ ಮುಖಂಡರ ಸಂಚು: ವಿಜಯೇಂದ್ರ

X
TV5 Kannada8 Dec 2018 11:29 AM GMT
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮೂವರು ಕಾಂಗ್ರೆಸ್ ಮುಖಂಡರು ಸಂಚುರೂಪಿಸಿದ್ದಾರೆ ಎಂದು ಬಿಎಸ್ವೈ ಪುತ್ರ ವಿಜಯೇಂದ್ರ ಹೇಳಿದರು.
ಶನಿವಾರ ತುಮಕೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಪರೇಷನ್ ಕಮಲ ಎಂಬ ಬೆದರು ಗೊಂಬೆಯನ್ನು ಇಟ್ಟುಕೊಂಡು ಕಾಂಗ್ರೆಸ್ ನ ಮೂವರು ಹಿರಿಯ ಮುಖಂಡರು ಜೆಡಿಎಸ್ ನವರನ್ನು ಹೆದರಿಸುತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಮೂವರು ಕೈ ಶಾಸಕರಲ್ಲಿ ಒಬ್ಬರು ಸಚಿವರಾಗಿದ್ದರೆ. ಇನ್ನಿಬ್ಬರು ಸಚಿವ ಸ್ಥಾನದ ಆಕಾಂಕ್ಷಿಗಳು. ಇವರೆಲ್ಲರೂ ಶೂಟು ಬೂಟು ಹೊಲಿಸಿಕೊಂಡು ಕುಮಾರಸ್ವಾಮಿಯನ್ನು ಕೆಳಗಿಳಿಸಲು ಕಾಯುತಿದ್ದಾರೆ. ಆದರೆ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯಾವ ಪ್ರಯತ್ನ ಮಾಡುತ್ತಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
Next Story