Top

ಅಡಿಲೇಡ್ ಟೆಸ್ಟ್​: ಭಾರೀ ಮುನ್ನಡೆಯತ್ತ ಭಾರತ

ಅಡಿಲೇಡ್ ಟೆಸ್ಟ್​: ಭಾರೀ ಮುನ್ನಡೆಯತ್ತ ಭಾರತ
X

ಅಗ್ರ ಕ್ರಮಾಂಕದ ಬ್ಯಾಟ್ಸ್​ ಮನ್ ಗಳ ಎಚ್ಚರಿಕೆಯ ಆಟದಿಂದ ಭಾರತ ತಂಡ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರೀ ಮುನ್ನಡೆಯತ್ತ ಸಾಗಿದೆ.

ಪಂದ್ಯದ ಮೂರನೇ ದಿನವಾದ ಶನಿವಾರ ಆಸ್ಟ್ರೇಲಿಯಾ ತಂಡವನ್ನು ಭಾರತ ಮೊದಲ ಇನಿಂಗ್ಸ್​ನಲ್ಲಿ 235 ರನ್​ಗಳಿಗೆ ಆಲೌಟ್ ಮಾಡಿತು. ಇದರೊಂದಿಗೆ ಮೊದಲ ಇನಿಂಗ್ಸ್​ನಲ್ಲಿ ಭಾರತ 15 ರನ್​ಗಳ ಅಲ್ಪ ಮುನ್ನಡೆ ಪಡೆದ ಭಾರತ ದಿನದಾಂತ್ಯಕ್ಕೆ ಎರಡನೇ ಇನಿಂಗ್ಸ್​ನಲ್ಲಿ 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. ಈ ಮೂಲಕ ಒಟ್ಟಾರೆ 166 ರನ್​ಗಳ ಮುನ್ನಡೆ ಪಡೆದಂತಾಗಿದೆ.

ಮೊದಲ ಇನಿಂಗ್ಸ್​ನಲ್ಲಿ ವಿಫಲವಾಗಿದ್ದ ಆರಂಭಿಕ ಜೋಡಿ ಎರಡನೇ ಇನಿಂಗ್ಸ್​ನಲ್ಲಿ 63 ರನ್ ಪೇರಿಸುವ ಮೂಲಕ ಉತ್ತಮ ಆರಂಭ ಒದಗಿಸಿತು. ರಾಹುಲ್ 67 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 44 ರನ್ ಬಾರಿಸಿ ಔಟಾದರೆ, ಮುರಳಿ ವಿಜಯ್ 53 ಎಸೆತಗಳಲ್ಲಿ 18 ರನ್ ಗಳಿಸಿದರು.

ನಂತರ ಜೊತೆಯಾದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ 3ನೇ ವಿಕೆಟ್​ಗೆ 71 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಸುಸ್ಥಿತಿಯತ್ತ ತಲುಪಿದರು. ದಿನದಾಟದ ಅಂತ್ಯಕ್ಕೆ 104 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 34 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಕೈ ಚೆಲ್ಲಿದರು.

ಮೊದಲ ಇನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದ ಚೇತೇಶ್ವರ್ ಪೂಜಾರ 127 ಎಸೆತಗಳಲ್ಲಿ 4 ಬೌಂಡರಿ ಸೇರಿದ 40 ರನ್ ಬಾರಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಖಾತೆ ತೆರೆದಿದ್ದಾರೆ.

ಸಾವಿರ ರನ್ ಸರರಾದ ಕೊಹ್ಲಿ

ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ 1000 ರನ್ ಪೂರೈಸಿದ ಭಾರತದ ನಾಲ್ಕನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಅಲ್ಲದೇ ಅತೀ ವೇಗವಾಗಿ ಈ ಸಾಧನೆ ಮಾಡಿದ್ದ ಭಾರತದ ಮೂವರು ದಿಗ್ಗಜರ ಸಾಧನೆಯನ್ನು ಹಿಂದಿಕ್ಕಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.

ವಿರಾಟ್ ಕೊಹ್ಲಿಗೂ ಮುನ್ನ ಸಚಿನ್ ತೆಂಡೂಲ್ಕರ್ (1809), ವಿವಿಎಸ್ ಲಕ್ಷ್ಮಣ್ (1236) ಮತ್ತು ರಾಹುಲ್ ದ್ರಾವಿಡ್ (1143) ಸಾವಿರ ರನ್ ಪೂರೈಸಿದ್ದರು. ವಿಶೇಷ ಅಂದರೆ ಕೊಹ್ಲಿ ಕೇವಲ 18 ಇನಿಂಗ್ಸ್​ಗಳಲ್ಲಿ 1000 ರನ್ ಪೂರೈಸುವ ಮೂಲಕ ಈ ದಿಗ್ಗಜರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಇದೀಗ ಏಕದಿನ ಮತ್ತು ಟೆಸ್ಟ್ ಗಳಲ್ಲಿ ಒಂದು ವರ್ಷದಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದರು.

ಇದೇ ವೇಳೆ ಕೊಹ್ಲಿ ವಿದೇಶಗಳಲ್ಲಿ ನಾಯಕನಾಗಿ 2000 ರನ್ ಪೂರೈಸಿದ ಮತ್ತೊಂದು ದಾಖಲೆಗೆ ಪಾತ್ರರಾದರು. ಇದುವರೆಗೂ ಭಾರತದ ಯಾವೊಬ್ಬ ನಾಯಕನೂ ವಿದೇಶದಲ್ಲಿ 2000 ರನ್ ಪೂರೈಸಿರಲಿಲ್ಲ.

  • ಸಂಕ್ಷಿಪ್ತ ಸ್ಕೋರ್
  • ಭಾರತ 250 ಮತ್ತು 2ನೇ ಇನಿಂಗ್ಸ್ 3 ವಿಕೆಟ್​ಗೆ 151 (ರಾಹುಲ್ 44, ಪೂಜಾರ ಅಜೇಯ 40, ಕೊಹ್ಲಿ 34, ಮುರಳಿ 18, ಸ್ಟಾರ್ಕ್​ 18/1).
  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 235 (ಹೆಡ್ 72, ಲಿಯೊನ್ 24, ಸ್ಟಾರ್ಕ್ 15, ಬುಮ್ರಾ 47/3, ಶಮಿ 58/2).

Next Story

RELATED STORIES