Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಶಸ್ತ್ರಚಿಕಿತ್ಸೆ ಬಳಿಕ ಸಿದ್ದಗಂಗಾ ಶ್ರೀಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದ್ದು ಲವಲವಿಕೆಯಿಂದ ಮಾತಾಡ್ತಿದ್ದಾರೆ. ಪ್ರಜ್ಞೆ ಬರ್ತಿದ್ದಂತೆ ಮಾತಾಡಿದ ಶ್ರೀಗಳು, ನರ್ಸ್‌ಗಳ ಬಳಿ ಕಿರಿಯ ಶ್ರೀಗಳ ಬಗ್ಗೆ ವಿಚಾರಿಸಿದ್ದಾರೆ.. ನಾನು ಎಲ್ಲಿದ್ದೀನಿ.. ಎಲ್ಲಿಗೆ ಕರೆದುಕೊಂಡು ಬಂದಿದ್ದೀರಿ ಎಂದು ಶ್ರೀಗಳು ಕಿರಿಯ ಶ್ರೀಗಳನ್ನ ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಶ್ರೀಗಳು ಲವಲವಿಕೆಯಿಂದ ಇದ್ದು, ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ.

2.ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಇನ್ನು 10 ದಿನಗಳ ಕಾಲ ICUನಲ್ಲೇ ಇರಲಿದ್ದಾರೆ. ಇನ್ನು ಇಂದು ಸಂಜೆ ಸಚಿವ ಡಿಕೆ ಶಿವಕುಮಾರ್​​​ ಚೆನ್ನೈಗೆ ತೆರಳುತ್ತಿದ್ದು, ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆ. ಲಿವರ್​​​ ಇನ್ಫೆಕ್ಶನ್​​​ನಿಂದ ಶಿವಕುಮಾರ್ ಶ್ರೀಗಳು ಬಳಲುತ್ತಿದ್ದು, ಡಾ.ಮೊಹಮ್ಮದ್ ರೇಲಾ ಚಿಕಿತ್ಸೆ ನೀಡಿದ್ದಾರೆ.

3.ಬೆಳಗಾವಿ ಡಿಸಿ ಕಚೇರಿ ಮುಂದೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಕಬ್ಬು ಬೆಂಬಲ ಬೆಲೆಗೆ ಆಗ್ರಹಿಸಿ ಅನ್ನದಾತರು ಬೀದಿಗಿಳಿದಿದ್ದು, ಚಳಿಗಾಲದ ಅಧಿವೇಶನಕ್ಕೆ ಹೋರಾಟದ ಬಿಸಿ ತಟ್ಟಲಿದೆ. ಇನ್ನು ರೈತ ಮಹಿಳೆ ಜಯಶ್ರೀ ಗರಣ್ಣಗೆ ಅನಾಮದೇಯ ಪತ್ರದಲ್ಲಿಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ..ಸಿಎಂ ಅವರಿಗೆ ನಾಲಾಯಕ್ ಎಂದು ಹೇಳಿದ್ದಕ್ಕೆ ಪತ್ರದಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ.

5.ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸ ಹಿನ್ನೆಲೆ ಬೆಳಗಾವಿ ಅಧಿವೇಶನಕ್ಕೆ ಗೈರಾಗಲಿದ್ಧಾರೆ. ಪೂರ್ವ ನಿಗಧಿ ಕಾರ್ಯಕ್ರಮವಾದ್ದರಿಂದ ಪುತ್ರ ಯತೀಂದ್ರ ಜೊತೆ ವಿದೇಶಿ ಪ್ರವಾಸ ಹೋಗ್ತಾ ಇದ್ದು, ಅಧಿವೇಶನಕ್ಕೆ ಗೈರಾಗುತ್ತಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯರನ್ನೇ ಫಾಲೋ ಮಾಡುವ ಬೆಂಬಲಿಗ ಶಾಸಕರುಗಳೂ ಅಧಿವೇಶನಕ್ಕೆ ಗೈರಾಗುತ್ತಾರಾ ಎಂಬ ಪ್ರಶ್ನೆಗಳು ಮೂಡಿದ್ದು. ಬೆಳಗಾವಿ ಅಧಿವೇಶನ ಯಶಸ್ವಿಯಾಗುತ್ತಾ ಎಂಬ ಅನುಮಾನ ಮೂಡಿದೆ.

6.ಇಂದು ಅಂಬರೀಶ್ ಹಾಗೂ ಸುಮಲತಾ ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಂಡ್ಯದ ಗಂಡು ದಿವಂಗತ ಅಂಬರೀಶ್ ತವರು ಮನೆಗೆ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್ ಭೇಟಿ ನೀಡಿದ್ರು. ಮದ್ವೆಯಾದ ಬಳಿಕ ಬೆಂಗಳೂರಿನ ಮನೆಯಲ್ಲೇ ಅಂಬಿ ಜೊತೆ ವಾಸವಾಗಿದ್ದ ಸುಮಲತಾ, ಬಹಳ ವರ್ಷಗಳ ಬಳಿಕ ಮಂಡ್ಯಕ್ಕೆ ಭೇಟಿ ನೀಡಿದ್ರು.. ಇನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹಾ ಸುಮಲತಾ, ಅಭಿಷೇಕ್ ಜೊತೆ ಆಗಮಿಸಿದರು.

7.ಬೆಳಗಾವಿ ಅಧಿವೇಶನಕ್ಕೆ ಸರ್ಕಿಟ್ ಹೌಸ್‌ನಲ್ಲಿ ತಂಗಬೇಕಿದ್ದ ಸಿಎಂ ಕುಮಾರಸ್ವಾಮಿ ವಾಸ್ತು ದೋಷ ಹಿನ್ನೆಲೆಯಲ್ಲಿ ವಾಸ್ತವ್ಯ ಸ್ಥಳ ಬೇರೆಡೆಗೆ ಬದಲಾಯಿಸಿದ್ದಾರೆ. ಸರ್ಕಿಟ್ ಗೆಸ್ಟ್ ಹೌಸ್‌ನಿಂದ ವಿಟಿಯು ಗೆಸ್ಟ್‌ ಹೌಸ್‌ಗೆ ಸಿಎಂ ಶಿಫ್ಟ್ ಆಗಿದ್ದು, ಸ್ಥಳ ಬದಲಾವಣೆಯಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ. ಪ್ರತಿ ಅಧಿವೇಶನ ಸಮಯದಲ್ಲೂ ಮುಖ್ಯಮಂತ್ರಿಗಳು ಸರ್ಕಿಟ್ ಹೌಸ್‌ನಲ್ಲೇ ವಾಸ್ತವ್ಯ ಮಾಡಿದ್ದಾರೆ.

8.ಕಾಂಗ್ರೆಸ್‌ನ ಟ್ರಬಲ್ ಶೂಟರ್, ಸಚಿವ ಡಿಕೆ ಶಿವಕುಮಾರ್ ಜನ ಸಾಮಾನ್ಯರಂತೆ ಪಾನಿಪುರಿ ಸೇವಿಸಿದ್ರು.. ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದ ಡಿಕೆಶಿ ಬೃಂದಾವನ ವೀಕ್ಷಣೆ ವೇಳೆ ಪಾನಿಪುರಿ ಸೇವಿಸಿದ್ರು.. ಪಕ್ಷದ ಹಲವು ಮುಖಂಡರು ಡಿಕೆಶಿಗೆ ಸಾಥ್ ನೀಡಿದ್ರು...

9.ಮೈಸೂರು ಜಿಲ್ಲೆ ಹುಣಸೂರಿನ ನೇಗತ್ತೂರು ಗ್ರಾಮದಲ್ಲಿ ಉರುಳಿಗೆ ಸಿಲುಕಿದ ಹುಲಿಯನ್ನು ಸೆರೆಹಿಡಿಯಲಾಗಿದೆ. ನಾಗರಹೊಳೆಯಿಂದ ಬಂದ ಹುಲಿ ಬೇಟೆಗಾರ ಹಾಕಿದ್ದ ಉರುಳಿಗೆ ಸಿಲುಕಿತ್ತು. ಬಳಿಕ ಅರಣ್ಯಾಧಿಕಾರಿಗಳು ಹುಲಿಗೆ ಅರವಳಿಕೆ ಮದ್ದು ನೀಡಿ, ಬಲರಾಮ ಆನೆ ಬಳಸಿ ಸೆರೆಹಿಡಿದು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.

10.ಉರುಳಿಗೆ ಬಿದ್ದ ಕರಡಿ ರಕ್ಷಣೆ ಮಾಡಿರುವ ಘಟನೆ ನುಗು ಜಲಾಶಯದ ಬಳಿ ಬಿರುವಾಳು ಗ್ರಾಮದ ಹೊರವಲಯದಲ್ಲಿ ನಡೆದಿದೆ. 5 ವರ್ಷದ ಗಂಡು ಕರಡಿ ಉರುಳಿಗೆ ಸಿಲುಕಿ ನರಳಾಡುತ್ತಿತ್ತು. ಬಳಿಕ ವೈದ್ಯ ನಾಗರಾಜು, ಸಿಬ್ಬಂದಿ ಅಕ್ರಂ ಪಾಷಾಷ ಕರಡಿಯನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಯಡಿಯಾಳ ಅರಣ್ಯಕ್ಕೆ ಕರಡಿಯನ್ನು ರವಾನೆ ಮಾಡಿದರು.

11.ಕೇಬಲ್ ದುರಸ್ತಿ ವೇಳೆ ವಿದ್ಯುತ್ ತಂತಿ ತಗುಲಿ ಯುವಕನ ನರಳಾಡಿದ ಘಟನೆ ನಡೆದಿದೆ. ತುಮಕೂರು ಹೊರವಲಯದ ಶಿರಾಗೇಟ್‌ನಲ್ಲಿ ದುರ್ಘಟನೆ ನಡೆದಿದ್ದು, ಸೋಯಬ್ ಎಂಬ ಯುವಕನಿಗೆ ವಿದ್ಯುತ್​ ತಂತಿ ತಗುಲಿದೆ. ಸುಮಾರು 15 ನಿಮಿಷಗಳ ಕಾಲ ಕಂಬದಲ್ಲೆ ಯುವಕ ನರಳಾಡಿದ್ದು, ಬಳಿಕ ಕ್ರೇನ್ ಮೂಲಕ ಕೆಇಬಿ ಸಿಬ್ಬಂದಿ ಯುವಕನನ್ನ ರಕ್ಷಿಸಿದ್ದಾರೆ.

12.ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಕೆಂಚಮ್ಮನ ಹೊಸಕೋಟೆ ಸುತ್ತಮುತ್ತ 300ಕ್ಕೂ ಹೆಚ್ಚು ಕಾಡಾನೆ ಬೀಡು ಬಿಟ್ಟಿವೆ. ಆನೆಗಳಿಗೆ ಹೆದರಿ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಅರಣ್ಯಾಧಿಕಾರಿಗಳ ವಾಹನದಲ್ಲೇ ಮಕ್ಕಳನ್ನು ಶಾಲೆಗೆ ಸಿಬ್ಬಂದಿ ಕರೆತಂದಿದ್ದಾರೆ. ಇನ್ನು ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

13.ಮೈಸೂರಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಬರೋಬ್ಬರಿ 5 ಕೆ.ಜಿ ತೂಕದ ಮಗುವಿಗೆ ತಾಯಿ ರಾಜೇಶ್ವರಿ ಜನ್ಮ ನೀಡಿದ್ದಾರೆ. ತಿಲಕ್​​​ ನಗರದ ನಿವಾಸಿ ಸಿದ್ದರಾಜು ದಂಪತಿಗೆ ಭಾರೀ ತೂಕದ ಮಗು ಜನಿಸಿದ್ದು, ಎಲ್ಲರನ್ನ ತಬ್ಬಿಬ್ಬಾಗಿಸಿದೆ. ವೈದ್ಯಾಧಿಕಾರಿಗಳು ಸೀಸರಿನ್ ಮೂಲಕ ಮಗುವನ್ನು ಹೊರತೆಗೆದಿದ್ದಾರೆ.

14.ಉಡಗಳಾಯ್ತು..ಇದೀಗ ಗಿಳಿಗಳ ಅಕ್ರಮ ಸಾಗಾಟ ಜಾಲ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಗಂಗಾವಳಿ ನದಿ ತಟದಲ್ಲಿ ಬೆಳಕಿಗೆ ಬಂದಿದೆ. ಆನ್​ಲೈನ್​ನಲ್ಲಿ ಕೆಂಪು ಮೂತಿ ಗಿಳಿಗಳಿಗೆ ಭಾರೀ ಬೇಡಿಕೆ ಇದ್ದು, 5 ರಿಂದ 10 ಸಾವಿರ ಬೆಲೆಗೆ ಗಿಳಿಗಳು ಮಾರಾಟವಾಗ್ತಿದೆ. ಹೀಗಾಗಿ ಗಂಗಾವಳಿ ನದಿ ತಟದ ಕಾಂಡ್ಲಾ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಳಿ ಇರೋದ್ರಿಂದ ಗಿಳಿಗಳಿಗೆ ಬಲೆ ಹಾಕಲಾಗಿದೆ.

15.ಪಿಯುಸಿ ಮಾರ್ಕ್​​ ಕಾರ್ಡ್​​​​ ನೀಡೋದಾಗಿ ನಂಬಿಸಿದ್ದ ಇನ್ಸ್​ಟಿಟ್ಯೂಟ್​​ವೊಂದು, ವಿದ್ಯಾರ್ಥಿಗಳಿಗೆ ಮೋಸ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಗಂಗಾನಗರದಲ್ಲಿರುವ ಸ್ಪಾರ್ಕ್ ಇನ್ಸ್ಟಿಟ್ಯೂಟ್, ಮಾರ್ಕ್ ಕಾರ್ಡ್ ನೀಡದೇ ಸತಾಯಿಸುತ್ತಿದ್ದು, ಸುಮಾರು 150 ರಿಂದ 200 ವಿದ್ಯಾರ್ಥಿಗಳಿಗೆ ಮೋಸ ಮಾಡಲಾಗಿದೆ. ಸೆಕೆಂಡ್ ಪಿಯುಸಿ ಎಕ್ಸಾಂ ಮಾರ್ಕ್ಸ್​​​​ ಕಾರ್ಡ್ ನೀಡೋದಾಗಿ ಪ್ರತಿ ಅಭ್ಯರ್ಥಿಗಳಿಂದ 18 ರಿಂದ 20 ಸಾವಿರ ಫೀಸ್ ಪಡೆದುಕೊಂಡು.

16.ಬುಲಂದಶಹರದಲ್ಲಿ ಇತ್ತೀಚೆಗೆ ನಡೆದ ಪೊಲೀಸ್​ ಇನ್ಸ್​​ಪೆಕ್ಟರ್​ ಸುಭೋದ್ ಕುಮಾರ್​​​ ಸಿಂಗ್​ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಇನ್ಸ್​​ಪೆಕ್ಟರ್​ ಸುಭೋದ್​ ಹತ್ಯೆ ಮಾಡಿದ ಆರೋಪದ ಮೇಲೆ ಜಮ್ಮುವಿನ ಸೊಪೋರ್​​​ನಲ್ಲಿ ಜಿತೇಂದ್ರ ಮಲಿಕ್​ ಎನ್ನುವ ಯೋಧನನ್ನು ಬಂಧಿಸಲಾಗಿದೆ.

17.ಆರ್​ಬಿಐ ಹಣ ಲೂಟಿ ಆರೋಪದ ಮೇಲೆ ಅರುಣ್​ ಜೇಟ್ಲಿ ವಿರುದ್ಧ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಎಂ.ಎಲ್​.ಶರ್ಮಾಗೆ ಸುಪ್ರೀಂಕೋರ್ಟ್​ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಹಿಂದೆ ದೆಹಲಿ ಮೂಲದ ಶರ್ಮಾ, ಜೇಟ್ಲಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ರಿಸರ್ವ್​ ಬ್ಯಾಂಕ್​ ಆಫ್​​ ಇಂಡಿಯಾದ ಬಂಡವಾಳ ಮೀಸಲು ಹಣವನ್ನ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

18.ಕೇಂದ್ರ ಸರ್ಕಾರ ಮುಖ್ಯ ಆರ್ಥಿಕ ಸಲಹೆಗಾರರಾಗಿ ಡಾ.ಕೃಷ್ಣಮೂರ್ತಿ ಸುಬ್ರಹ್ಮಣ್ಯನ್​ರನ್ನ ನೇಮಕ ಮಾಡಿದೆ. ಮೂರು ವರ್ಷಗಳವರೆಗೆ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಲಿರುವ ಡಾ.ಕೃಷ್ಣಮೂರ್ತಿ, ಹೈದ್ರಾಬಾದ್​ನ ಇಂಡಿಯನ್​ ಸ್ಕೂಲ್​ ಆಫ್​ ಬ್ಯುಸಿನೆಸ್​​ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸ್ತಿದರು.

19.ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾ ಕಚೇರಿಗಳ ಮೇಲೆ ದಾಳಿ ನಡೆಸಿರುವುದರ ಕುರಿತು ಕಾಂಗ್ರೆಸ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್​ ಸುರ್ಜೆವಾಲಾ, ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತವಾಗಿದ್ದಕ್ಕೆ ಮೋದಿ ಸರ್ಕಾರ ಹೀಗೆ ಮಾಡ್ತಿದೆ ಅಂತಾ ಹರಿಹಾಯ್ದಿದ್ದಾರೆ.

20.ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಮದುವೆ ಸಂಭ್ರಮ ಜೋರಾಗಿದ್ದು, ಪ್ರೀ-ವೆಡ್ಡಿಂಗ್ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದೆ. ಹೀಗಾಗಿ ರಾಜಸ್ಥಾನದ ಉದಯಪುರದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಸುಮಾರು 5100 ಮಂದಿಗೆ ಸ್ವತಃ ಮುಖೇಶ್​ ಅಂಬಾನಿ, ನಿಶಾ ಅಂಬಾನಿ, ಇಶಾ ಅಂಬಾನಿ, ಭಾವಿ ಅಳಿಯ ಆನಂದ್​ ಪಿರಮಾಲ್​ ಊಟ ಬಡಿಸಿದ್ದು ವಿಶೇಷವಾಗಿತ್ತು.

21.ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್‌ ಫೀವರ್ ಶುರುವಾಗಿದೆ. ಮೊನ್ನೆ ತಾನೇ ಸಲಾಂ ರಾಖಿ ಭಾಯ್‌ ಲಿರಿಕಲ್ ಸಾಂಗ್‌ ರಿವಿಲ್ ಆಗಿತ್ತು. ಆದ್ರೀಗ ಪ್ರೋಮೋ ಸಾಂಗ್ ರಿಲೀಸ್ ಆಗಿದ್ದು, ಯಶ್‌ ರಗಡು ಲುಕ್‌ಗೆ ಅಭಿಮಾನಿಗಳು ಮತ್ತಷ್ಟು ಫಿದಾ ಆಗಿದ್ದಾರೆ. ಇನ್ನು ‘KGF’ ಪ್ರೋಮೋ ಸಾಂಗ್‌ಗೆ ಯು-ಎ ಸರ್ಟಿಫಿಕೇಟ್ ಸಿಕ್ಕಿದೆ.

22.ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನ್ಮಾ ಟ್ರೇಲರ್‌ಗೆ ಬಾಹುಬಲಿ ಯಂಗ್ ರೆಬಲ್ ಸ್ಟಾರ್ ಫಿದಾ ಆಗಿದ್ದಾರೆ. ನಿನ್ನೆ ಮುಂಬೈನಲ್ಲಿ ಸ್ವತಃ ಪ್ರಭಾಸ್, ರಾಕಿಂಗ್ ಸ್ಟಾರ್ ಯಶ್ ಅವ್ರನ್ನ ಭೇಟಿ ಮಾಡಿದ್ರು.. ಇಬ್ಬರು ಸ್ಟಾರ್‌ಗಳು ಒಟ್ಟಿಗೆ ಡಿನ್ನರ್ ಸಹ ಮಾಡಿದ್ರು... ಇನ್ನು ಇದೇ ವೇಳೆ ಯಶ್ ಸಿನ್ಮಾ ಕೆಜಿಎಫ್‌ಗೆ ಪ್ರಭಾಸ್ ವಿಶ್ ಮಾಡಿ, ಆಲ್‌ ದಿ ಬೆಸ್ಟ್ ಹೇಳಿದರು.

23.ನಟ ಧ್ರುವ ಸರ್ಜಾ ನಾಳೆನಿಶ್ವಿತಾರ್ಥ ಮಾಡಿಕೊಳ್ತಾ ಇರೋದು ಎಲ್ರಿಗೂ ತಿಳಿದಿರೋ ವಿಷ್ಯ. ತಮ್ಮ ಬಾಳ ಸಂಗಾತಿಯಾಗ್ತಿರೋ ಪ್ರೇರಣಾಗಾಗಿ ಬಹದ್ದೂರ್​ ಹುಡ್ಗ ದುಬಾರಿ ಬೆಲೆಯ ಡೈಮಂಡ್​ ರಿಂಗ್​ ಖರೀದಿಸಿದ್ದಾರೆ. ಬರೋಬ್ಬರಿ 24 ಲಕ್ಷ ಮೌಲ್ಯದ ಡೈಮಂಡ್​ ರಿಂಗ್​ ಇದಾಗಿದೆ

24.ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಎನ್‌ಸಿ ಅಯ್ಯಪ್ಪ ಮತ್ತು ನಟಿ ಅನು ಪೂವಯ್ಯ ಮದುವೆ ಡೇಟ್ ಫಿಕ್ಸ್​ ಆಗಿದೆ.. ಜನವರಿ 19 ಮತ್ತು 20ಕ್ಕೆ ಕೊಡಗಿನ ವಿರಾಜಪೇಟೆಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಲಿದೆ. ಕಳೆದ ಮೇ ತಿಂಗಳಿನಲ್ಲಿ ಅಯ್ಯಪ್ಪ ಮತ್ತು ನಟಿ ಅನು ಪೂವಮ್ಮ ನಿಶ್ಚಿತಾರ್ಥ ಬೆಂಗಳೂರಿನ ಕೊಡವ ಸಮಾಜದಲ್ಲಿ ಸರಳವಾಗಿ ನೆರವೇರಿತ್ತು.

25.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರಕ್ಕೆ ರಾಘವಿ ಯ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.. ಎಂ.ಡಿ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರಕ್ಕೆ ಸಂದೇಶ್ ನಾಗರಾಜ್​ ಬಂಡವಾಳ ಹಾಕ್ತಿದ್ದಾರೆ.. ಕೊಡಗಿನ ಕುವರಿ ರಾಘವಿ ಮೂಲತ: ಮಾಡೆಲಿಂಗ್ ಕ್ಷೇತ್ರದವರು.. ಕನ್ನಡ ಹುಡುಗಿಗೆ ಅವಕಾಶ ನೀಡ್ಬೇಕು ಅಂತ ರಾಘವಿ ಅವ್ರನ್ನ ಚಿತ್ರಕ್ಕೆ ನಾಯಕಿಯಾಗಿ ಆರಿಸಿಕೊಂಡಿದೆ ಚಿತ್ರತಂಡ.. ಶೀಘ್ರದಲ್ಲೇ ಒಡೆಯ ಸಿನಿಮಾ ಚಿತ್ರೀರಕರಣ ಶುರುವಾಗಲಿದೆ.

26.ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿಯ ಅದ್ಭುತ ಸಿನಿಮಾಗಳ ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಸಿನಿಮಾ ಟೀಸರ್ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿರೋ ಚೊಚ್ಚಲ ಸಿನಿಮಾ ಇದು. ಜಯತೀರ್ಥ ನಿರ್ದೇಶನದ ಈ ಈ ಪೀರಿಯಡ್​ ಡ್ರಾಮಾಗೆ ಜಯತೀರ್ಥ ಆ್ಯಕ್ಷನ್ ಕಟ್ ಹೇಳಿದ್ದು, ರಿಷಬ್ ಚಿತ್ರದಲ್ಲಿ ಡಿಟೆಕ್ಟೀವ್ ಆಗಿ ಬಣ್ಣ ಹಚ್ಚಿದ್ದಾರೆ.

27.ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಚಿತ್ರೀಕರಣ ಮೈಸೂರು ಅರಮನೆಯಲ್ಲಿ ನಡೆಯಲಿದೆ.. ಸುರೇಂದರ್ ರೆಡ್ಡಿ ನಿರ್ದೇಶನದ ಬಹುಕೋಟಿ ವೆಚ್ಚದ ಐತಿಹಾಸಿಕ ಸಿನಿಮಾ ಇದು.. ಚಿರಂಜೀವಿ ಜೊತೆ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ನಯನತಾರಾ ಸೇರಿ ಭಾರಿ ತಾರಾಗಣ ಚಿತ್ರದಲ್ಲಿದೆ.. ಐತಿಹಾಸಿಕ ಕಥೆ ಆಗಿರೋದ್ರಿಂದ ಅರಮನೆ, ಕೋಟೆ ಕೊತ್ತಲುಗಳಲ್ಲಿ ಶೂಟಿಂಗ್ ನಡಿತಿದ್ದು, ಮೈಸೂರು ಅರಮನೆಯಲ್ಲಿ ಸೋಮವಾರ ಶೂಟಿಂಗ್ ಶುರುವಾಗಲಿದೆ.

28.ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ಯಾವಗ್ಲೂಅಗ್ರಿಸಿವ್ ಆಗಿರುತ್ತಿದ್ದ ಕೊಹ್ಲಿ ಸ್ಟಪ್ಸ್​ ಹಾಕಿ ಅಭಿಮಾನಿಗಳು ಅಚ್ಚರಿಪಡುವಂತೆ ಮಾಡಿದ್ದಾರೆ. ಕೊಹ್ಲಿ ಡ್ಯಾನ್ಸ್ ಮಾಡಲು ತಂಡದ ಬೌಲರ್​ಗಳು ನೀಡಿದ ಪ್ರದರ್ಶನ ಕಾರಣ ಎಂದು ತಿಳಿದು ಬಂದಿದೆ. ವಿಡಿಯೊವನ್ನ ಕ್ರಿಕೆಟ್​ ಆಸ್ಟ್ರೇಲಿಯಾ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಿದೆ.

29.ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ 87 ರನ್​ಗಳ ಅಂತರದಿಂದ ಹೀನಾಯ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 179 ರನ್​ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಕೇವಲ 91 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೂರ್ನಿಯಲ್ಲಿ ಕರ್ನಾಟಕ ಮೊದಲ ಸೋಲು ಅನುಭವಿಸಿತು. ಸೌರಾಷ್ಟ್ರ 6 ಪೂರ್ಣ ಅಂಕಗಳನ್ನ ಪಡೆಯಿತು.

30.ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಕುರಿತು ಟೀಂ ಇಂಡಿಯಾ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ರಹಸ್ಯ ಬಿಚ್ಚಿಟ್ಟಿದ್ದಾರೆ. ಚಾಕಲೇಟ್​ ಮಿಲ್ಕ್​​ ಶೇಕ್​ ಮತ್ತು ಐಸ್​ ಬಾತ್​​​ ಶತಕ ಬಾರಿಸಲು ಕಾರಣ ಎಂದಿದ್ದಾರೆ. ಪಂದ್ಯದ ನಡುವೆ ಶೀಘ್ರವಾಗಿ ಚೇತರಿಸಿಕೊಳ್ಳುವುದಕ್ಕೆ ಈ ಎರಡು ವಿಧಾನಗಳು ನನಗೆ ಸಹಾಯ ಮಾಡಿವೆ ಎಂದಿದ್ದಾರೆ.

31.ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಪಟ್ಟಿಗೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಅಡಿಲೇಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ 34 ರನ್​ಗಳಿಸಿದ ಕೊಹ್ಲಿ ಆಸೀಸ್ ನೆಲದಲ್ಲಿ 1000 ರನ್ ಮೈಲಿಗಲ್ಲು ತಲುಪಿದ್ರು. ಈ ಮೂಲಕ ಅತಿಕಡಿಮೆ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಹಾಗೂ ಒಟ್ಟಾರೆ ನಾಲ್ಕನೇ ಭಾರತೀಯ ಬ್ಯಾಟ್ಸ್​​ಮನ್​,ಎಂಬ ಕೀರ್ತಿಗೆ ಭಾಜನರಾದರು.

32.ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅರಸ್‌ ಅವರ ದೇಹದ ಆಕಾರದ ಬಗ್ಗೆ ಟೀಕೆ ಮಾಡಿದ್ದ ಲೋಕತಾಂತ್ರಿಕ ಜನತಾ ದಳ ಮುಖಂಡ ಶರದ್ ಯಾದವ್‌ ಇದೀಗ ಕ್ಷಮೆ ಕೋರಿದ್ದಾರೆ. ಡಿಸೆಂಬರ್‌ 5ರಂದು ಅಲ್ವಾರ್‌ನಲ್ಲಿ ನಡೆದ ಪ್ರಚಾರದ ಸಂದರ್ಭದಲ್ಲಿ, ವಸುಂಧರಾ ವಿಶ್ರಾಂತಿ ತೆಗೆದುಕೊಳ್ಳಲಿ, ಅವರು ತುಂಬಾ ಸುಸ್ತಾಗಿದ್ದಾರೆ. ಅಲ್ಲದೆ, ಅವರು ತುಂಬಾ ದಪ್ಪಾಗಾಗಿದ್ದಾರೆ ಅಂತ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ವಸುಂಧರಾ ರಾಜೇ ಅರಸ್‌ ಕೂಡ ಕಿಡಿಕಾರಿದ್ದರು. ಇದೀಗ ಕ್ಷಮೆ ಕೋರಿರುವ ಶರದ್‌ ಯಾದವ್, ಅವರಿಗೆ ನೋವುಂಟು ಮಾಡಬೇಕೆಂದು ಆ ರೀತಿ ಹೇಳಿಲ್ಲ. ತಮಾಷೆಗಾಗಿ ಹೇಳಿದ್ದೆ. ನಾವು ಅವರ ಹೇಳಿಕೆ ಗಮನಿಸಿದ್ದೇನೆ. ಅವರ ಕುಟುಂಬದೊಂದಿಗೆ ನಾನು ತುಂಬಾ ಹಿಂದಿನಿಂದಲೂ ನಿಕಟ ಸಂಬಂಧ ಹೊಂದಿದ್ದೇನೆ. ಅವರಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ. ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಅಲ್ಲದೆ, ಅವರಿಗೆ ಪತ್ರ ಕೂಡ ಬರೆಯುತ್ತೇನೆ ಎಂದು ಹೇಳಿದ್ದಾರೆ. ನಾನು ಅವರನ್ನು ಭೇಟಿಯಾಗಿದ್ದಾಗಲೂ ನೀವು ತುಂಬಾ ದಪ್ಪಾಗುತ್ತಿದ್ದೀರಾ ಅಂತ ಹೇಳಿದ್ದೆ ಎಂದು ತಿಳಿಸಿದ್ದಾರೆ.

33.ಸ್ವಂತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕಠಿಣ ಸವಾಲು ಎದುರಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊರರಾಜ್ಯಗಳಲ್ಲಿ ಬಿಜೆಪಿ ಪಾಲಿನ ತಾರಾ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ. ಮಿಜೋರಾಂ ಹೊರತುಪಡಿಸಿ ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗಿಂತಲೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಯೋಗಿ ಕಾಣಿಸಿಕೊಂಡಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‌ಗಡ, ತೆಲಂಗಾಣ, ರಾಜಸ್ಥಾನ ವಿಧಾನಸಭೆ ಚುನಾವಣೆ ವೇಳೆ ಮೋದಿ 31 ಹಾಗೂ ಶಾ 56 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ, ಇದೇ ವೇಳೆ ಯೋಗಿ ಭಾಗವಹಿಸಿದ ಚುನಾವಣಾ ರ‍್ಯಾಲಿ ಸಂಖ್ಯೆ ಬರೋಬ್ಬರಿ 74. ಅವರು ಮಧ್ಯಪ್ರದೇಶದಲ್ಲಿ 17, ಛತ್ತೀಸ್‌ಗಡದಲ್ಲಿ 23, ತೆಲಂಗಾಣದಲ್ಲಿ 8, ರಾಜಸ್ಥಾನದಲ್ಲಿ 26 ಬಾರಿ ಕಾಣಿಸಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ ಅವರು ಹೆಚ್ಚು ರ‍್ಯಾಲಿಗಳಲ್ಲಿ ಭಾಗವಹಿಸಿರುವುದು ಅವರ ಜನಪ್ರಿಯತೆ ಸೂಚಿಸುತ್ತದೆ ಎಂದಿರುವ ಉತ್ತರ ಪ್ರದೇಶ ಬಿಜೆಪಿ ಘಟಕದ ವಕ್ತಾರ ಚಂದ್ರಮೋಹನ್‌, ‘ಇದು ಅವರ ಮಾದರಿ ಸರ್ಕಾರಕ್ಕೆ ದೊರೆತ ಯಶಸ್ಸು’ ಎಂದಿದ್ದಾರೆ.

34.ಗೋ ಹತ್ಯೆ ನಡೆದಿದೆ ಎಂದು ಆರೋಪಿಸಿ ಉತ್ತರಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ವಿಧಿಸಲಾಗಿದೆ. ಬುಲಂದ್‌ಶಹರ್‌ನ ಹಿರಿಯ ಎಸ್‌ಎಸ್‌ಪಿ ಕೃಷ್ಣ ಬಹದೂರ್‌ ಸಿಂಗ್‌, ಡಿಎಸ್‌ಪಿ ಸತ್ಯಪ್ರಕಾಶ್‌ ಶರ್ಮಾ ಹಾಗೂ ಚಿಂಗರ್‌ವಾಟಿ ಪೊಲೀಸ್‌ ಠಾಣಾಧಿಕಾರಿ ಸುರೇಶ್‌ ಕುಮಾರ್‌ ವರ್ಗಾವಣೆ ಆಗಿದ್ದಾರೆ. ಗಲಭೆ ಸಂದರ್ಭ ವಿವಿಧ ಸ್ಥಳಗಳಲ್ಲಿ ಸೆರೆಯಾಗಿರುವ ವಿಡಿಯೊ ದೃಶ್ಯಾವಳಿ ಆಧಾರವಾಗಿಟ್ಟುಕೊಂಡು ನಿನ್ನೆ ಐವರನ್ನು ಬಂಧಿಸಲಾಗಿದೆ. ಸಯನಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸುಬೋಧ್‌ ಸಿಂಗ್‌ ಸಾವಿನ ಸಂಬಂಧ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

35.ಒಂದು ವೇಳೆ ಕೇಂದ್ರ ಅಥವಾ ಉತ್ತರಪ್ರದೇಶ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೆ, ಆ ಸರ್ಕಾರವನ್ನೇ ಉರುಳಿಸುತ್ತೇನೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ನನ್ನ ವಿರೋಧಿಸುವ ಪಕ್ಷಗಳಾಗಿವೆ. ಅವರಿಗೆ ನನ್ನನ್ನು ವಿರೋಧಿಸುವ ಧೈರ್ಯ ಇದೆಯೇ? ಒಂದು ವೇಳೆ ಅವರು ಹಾಗೆ ಮಾಡಿದರೆ, ನಾನು ಸರ್ಕಾರವನ್ನೇ ಬೀಳಿಸುತ್ತೇನೆ ಎಂದಿದ್ದಾರೆ. ನನಗೆ ಪರಿಚಯವಿರುವ ಕೆಲವು ಮುಸ್ಲೀಮರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಬಗ್ಗೆ ಯಾವ ತಕರಾರು ಇಲ್ಲ. ಹಿಂದೂಗಳಿಗೆ ಸೇರಿದ್ದ ಆ ಭೂಮಿಯನ್ನು ಮೊಘಲ್‌ ದೊರೆ ಬಾಬರ್‌ ವಶಪಡಿಸಿಕೊಂಡಿದ್ದ ಎನ್ನುವುದನ್ನು ಸುನ್ನಿ ವಕ್ಫಾ ಮಂಡಳಿಯೂ ಒಪ್ಪಿದೆ ಎಂದು ಹೇಳಿದ್ದಾರೆ. ಸಂವಿಧಾನದ ಪ್ರಕಾರ ನನಗೆ ಪ್ರಾರ್ಥನೆ ಸಲ್ಲಿಸುವ ಹಕ್ಕು ಇರುವುದರಿಂದ ನ್ಯಾಯಾಲಯ ನನ್ನ ಮನವಿ ಕೇಳಲು ಸಮ್ಮತಿಸಿದೆ. ಇಲ್ಲಿ ರಾಮನ ಜನನವಾಗಿತ್ತು ಎನ್ನುವುದು ನಮ್ಮ ನಂಬಿಕೆ. ಇಲ್ಲಿ ದೊಡ್ಡ ರಾಮಮಂದಿರ ನಿರ್ಮಿಸಲು ಬಯಸುತ್ತೇವೆ. ಆದರೆ, ಮುಸ್ಲೀಮರು ತಮ್ಮ ಜಾಗ ಕೇಳುತ್ತಿದ್ದಾರೆ. ಇದು ಮೂಲಭೂತ ಹಕ್ಕಲ್ಲ. ಹೀಗಾಗಿ ಅವರ ಸಾಮಾನ್ಯ ಆಸ್ತಿ ಹಕ್ಕಿಗಿಂತ ನನ್ನ ಮೂಲಭೂತ ಹಕ್ಕಿಗೆ ಹೆಚ್ಚು ಪ್ರಧಾನ್ಯ ನೀಡಬೇಕೆಂದು ನಾನು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇನೆ ಅವರು ಹೇಳಿದ್ದಾರೆ.

36.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂಡೆ ತರ ಇದ್ದು, ಯಾರೂ ಅಲುಗಾಡಿಸಲು ಆಗಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬರ ವೀಕ್ಷಣೆಗೆ ಬಿಜೆಪಿ ಟೀಂ ಹೋಗಿಲ್ಲ. ಅಲ್ಲಿ ಹೋಗಿ ಭತ್ತದ ತೆನೆ ಹಿಡಿದುಕೊಂಡು, ಸರ್ಕಾರ ಬಿದ್ದೋಗುತ್ತೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ಬೀಳಿಸುವ ತಾಕತ್‌ ಬಿಜೆಪಿಗೆ ಇಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ. ಐವರು ಬಿಜೆಪಿ ಎಂಎಲ್‌ಎಗಳೇ ನಮ್ಮ ಕಡೆ ಬರೋಕೆ ರೆಡಿ ಇದಾರೆ. ಈಗಾಗಲೇ ಮುಖ್ಯಮಂತ್ರಿ ಜೊತೆಯೂ ಮಾತಾಡಿದಾರೆ. ಅವರು ಯಾರು ಅಂತ ಗುಟ್ಟು ಬಿಟ್ಟುಕೊಡಲ್ಲ. ಬಂದ ಮೇಲೆ ಗೊತ್ತಾಗುತ್ತೆ ಎಂದು ಬಿಜೆಪಿಯ ಅಪರೇಷನ್ ಕಮಲಕ್ಕೆ ತಿರುಗೇಟು ನೀಡಿದ್ದಾರೆ. ಭಾಯಿಯೋ.. ಬೆಹನೋ.. ಅನ್ನೋ ಅದೇ ಭಾಷಣ ಕೇಳಿ ಕೇಳಿ ಜನರು ಬೇಸತ್ತಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಮೋದಿ ಏನೂ ಸಾಧನೆ ಮಾಡಿಲ್ಲ. ಪಂಚ ರಾಜ್ಯಗಳ ಚುನಾವಣೆ ಸಮೀಕ್ಷೆ ಹೊರ ಬಿದ್ದಿದ್ದು, ಬಿಜೆಪಿಗೆ ಹಿನ್ನಡೆಯಾಗಿರೋದು ಗೊತ್ತಾಗಿದೆ ಎಂದು ಹೇಳಿದರು.

37.ದೇಶದಲ್ಲಿ ಇಂಧನ ದರಗಳು ಇಳಿಕೆಯ ಪಥದಲ್ಲಿ ಸಾಗುತ್ತಿದೆ. ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ಜನರು ಎರಡು ತಿಂಗಳಿನಿಂದ ಕೊಂಚ ನಿರಾಳರಾಗಿದ್ದಾರೆ. ದೇಶದಾದ್ಯಂತ ಶನಿವಾರ ತೈಲ ಬೆಲೆ 20ರಿಂದ 35 ಪೈಸೆ ಕಡಿಮೆಯಾಗಿದೆ. ಇಂಧನ ದರಗಳು ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂ ಏರುಮುಖವಾಗಿ ಸಾಗುತ್ತಿತ್ತು. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಕ್ಟೋಬರ್‌ ಆರಂಭದಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಜೊತೆಗೆ ತೈಲ ಕಂಪನಿಗಳು ಸಬ್ಸಿಡಿ ಘೋಷಿಸಿತ್ತು. ಅದಾದ ನಂತರ ಇಂಧನ ದರಗಳು ಇಳಿಮುಖವಾಗಿ ಸಾಗುತ್ತಿವೆ. ರಾಷ್ಟ್ರದ ರಾಜಧಾನಿಯಲ್ಲಿ ಅಕ್ಟೋಬರ್‌ 4ರಂದು ಲೀಟರ್‌ ಪೆಟ್ರೋಲ್‌ಗೆ ಅತಿ ಹೆಚ್ಚು 84 ರೂಪಾಯಿ ಇದ್ದ ದರಕ್ಕೆ ಹೋಲಿಸಿದರೆ ಇಂದು ಅಂತ್ಯಕ್ಕೆ 70 ರೂಪಾಯಿ 70 ಪೈಸೆ ಆಗಿದೆ. ಎರಡು ತಿಂಗಳಲ್ಲಿ ಒಟ್ಟು 13 ರೂಪಾಯಿ ಇಳಿಕೆಯಾಗಿದೆ. ಇನ್ನು ಡೀಸೆಲ್‌ ದರ 65 ರೂಪಾಯಿ 30 ಪೈಸೆಯಷ್ಟು ಆಗಿದೆ. ಮುಂಬೈನಲ್ಲಿ 90ರ ಗಡಿ ದಾಟಿದ್ದ ಪ್ರತಿ ಲೀಟರ್‌ ಪೆಟ್ರೋಲ್‌ ದರ ಇಂದು 76 ರೂಪಾಯಿ 28 ಪೈಸೆ ಆಗಿದೆ. ಎರಡು ತಿಂಗಳಲ್ಲಿ ಬರೋಬ್ಬರಿ 15 ರೂಪಾಯಿ 8 ಪೈಸೆ ಇಳಿಕೆಯಾಗಿದೆ. ಶುಕ್ರವಾರದ ಅಂತ್ಯಕ್ಕೆ 68 ರೂಪಾಯಿ 59 ಪೈಸೆ ಇದ್ದ ಡೀಸೆಲ್‌ ಬೆಲೆ ಇಂದು 20 ಪೈಸೆ ಕಡಿತಗೊಂಡಿದೆ. ಕೋಲ್ಕತ್ತದಲ್ಲಿ ಇಂದು ಪ್ರತಿ ಲೀಟರ್‌ ಪೆಟ್ರೋಲ್‌ 72 ರೂಪಾಯಿ 75 ಪೈಸೆ ಹಾಗೂ ಡೀಸೆಲ್‌ 67 ರೂಪಾಯಿ 3 ಪೈಸೆಗೆ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಂಡುಬರುತ್ತಿರುವುದರಿಂದ ಇಂಧನ ದರಗಳು ಕಡಿಮೆಯಾಗುತ್ತಿವೆ.

38.ಇಟಲಿಯ ಕರಾವಳಿ ಭಾಗ ಅಂಕೊನಾದಲ್ಲಿರುವ ನೈಟ್‌ಕ್ಲಬ್‌ವೊಂದರಲ್ಲಿ ಬೆಳಗಿನ ಜಾವ ಕಾಲ್ತುಳಿತ ಉಂಟಾಗಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಹತ್ತಾರು ಜನ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕೊರಿನಾಲ್ಡೊದ ಬ್ಲೂ ಲಾಂಟರ್ನ್‌ ಕ್ಲಬ್‌ನ ಆಯೋಜಿಸಲಾಗಿದ್ದ ಹಾಡುಗಾರ ಫೆರಾ ಎಬಾಸ್ಟಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಕ್ಲಬ್‌ನ ಒಳಗೆ ದುರ್ವಾಸನೆ ಹರಡುತ್ತಿದ್ದಂತೆ ಗೊಂಗಲ ಸೃಷ್ಟಿಯಾಗಿದ್ದು, ಕಾಲ್ತುಳಿದ ಉಂಟಾಗಿದೆ. ದುರ್ವಾಸನೆ ಬೀರುವ ವಸ್ತು ಸಿಂಪಡಿಸಿರುವುದರಿಂದ, ಕ್ಲಬ್‌ನ ಒಳಗೆ ಇರಲಾಗದೆ ಜನರು ಹೊರ ಹೋಗಲು ಪ್ರಯತ್ನಿಸುತ್ತಿದ್ದಂತೆ ಕಾಲ್ತುಳಿತ ಉಂಟಾಗಿದೆ. ಬೆಳಗಿನ ಜಾವ ಸುಮಾರು 1 ಗಂಟೆಗೆ ಈ ಅವಗಢ ಸಂಭವಿಸಿದೆ. ಸಂಗೀತ ಕಾರ್ಯಕ್ರಮ ಶುರುವಾಗುವುದನ್ನು ಎದುರು ನೋಡುತ್ತ ನಾವೆಲ್ಲ ಕುಣಿಯುತ್ತ ಸಂಭ್ರಮಿಸುತ್ತಿದ್ದೆವು. ಇದೇ ಸಮಯದಲ್ಲಿ ದುರ್ವಾಸನೆ ಮೂಗಿಗೆ ಬಡಿಯಿತು. ನಾವು ತುರ್ತು ನಿರ್ಗಮನದ ಕಡೆಗೆ ಓಡಿದೆವು. ಆದರೆ, ಅದು ಮುಚ್ಚಲಾಗಿತ್ತು. ಬೌನ್ಸರ್‌ಗಳು ಒಳಗೆ ಮರಳುವಂತೆ ಹೇಳಿದರು’ ಎಂದು ಗಾಯಗೊಂಡಿರುವ 16 ವರ್ಷದ ಬಾಲಕ ಮಾಧ್ಯಮಕ್ಕೆ ತಿಳಿಸಿದ್ದಾರೆ.

39.ಸಿಎಜಿ ವರದಿ ಕುರಿತು ಕುಮಾರಸ್ವಾಮಿ ಅವರು ಸದನ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು ಅಂತ ಬಿಜೆಪಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಸಿಜಿಎ ವರದಿ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಉತ್ತರಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ವಿಷಯಾಂತರ ಮಾಡುವಂತೆ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ.ಬಿಜೆಪಿ ಇದ್ದಾಗ ವ್ಯತ್ಯಾಸ ಆಗಿಲ್ವಾ ಎಂದಿದ್ದಾರೆ ವ್ಯತ್ಯಾಸ ಆಗಿದ್ದರೆ ನೀವು ಮುಖ್ಯಮಂತ್ರಿ ಆಗಿದ್ದಾಗ ಕ್ರಮ ಕೈಗೊಳ್ಳಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

40.ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಬಸ್‌ವೊಂದು ರಸ್ತೆ ಬದಿಯಲ್ಲಿ ಜಾರಿ ಕಮರಿಗೆ ಉರುಳಿದೆ. ಈ ಅಪಘಾತದಲ್ಲಿ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಲೊರಾನ್‌ನಿಂದ ಪೂಂಚ್‌ ಕಡೆಗೆ ಸಾಗುತ್ತಿದ್ದ ಬಸ್‌ ಪ್ಲೆರಾ ಬಳಿ ದುರಂತಕ್ಕೆ ಈಡಾಗಿದೆ. ಶ್ರೀನಗರದಿಂದ ಪೂಂಚ್‌ 175 ಕಿ.ಮೀ. ದೂರದಲ್ಲಿದೆ. ಪೂಂಚ್‌ನಿಂದ ಪ್ಲೆರಾ 30 ಕಿ.ಮೀ. ಅಂತರದಲ್ಲಿದೆ. ಕಮರಿಗೆ ಜಾರಿರುವ ಬಸ್‌ ಕೆಳಗಿನ ನದಿ ತೀರಕ್ಕೆ ಬಂದು ಬಿದ್ದಿದ್ದು, ಬಹುತೇಕ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಡಿ ಉಪ ವಿಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

41.ಸಿಲಿಕಾನ್ ವ್ಯಾಲಿ ಅಂತೆಲ್ಲಾ ಕರೆಸಿಕೊಳ್ತಿರೋ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ವಿಪರೀತವಾಗ್ತಿದೆ. ಇದ್ರಿಂದ ಮನುಷ್ಯರು ಜೀವಿಸೋದೇ ಕಷ್ಟವಾಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರ್ಬೇಕಾದ್ರೆ ಪಕ್ಷಿಗಳ ವಿಚಾರದಲ್ಲಿ ಇನ್ನೂ ಶೊಚನೀಯ...ಮಲೀನವಾಗ್ತಿರೋ ಇಂಥ ಪರಿಸ್ಥಿತಿಯಲ್ಲೂ ಸಿಲಿಕಾನ್ ಸಿಟಿಯಲ್ಲಿ ದೇಶ ವಿದೇಶಗಳ ಪಕ್ಷಿಗಳು ಜೀವಿಸೋಕೆ ಉತ್ತಮ ವಾತಾವರಣ ಇದೆ ಅನ್ನೋದಕ್ಕೆ ಯಡಿಯೂರು ಕೆರೆ ಸೂಕ್ತ ಉದಾಹರಣೆ.. ಈ ಕೆರೆಯಲ್ಲಿ ದೇಶ ವಿದೇಶಗಳ ಪಕ್ಷಿಗಳ ಜತೆ ಇದೀಗ ಪರಿಸರ ಸ್ನೇಹಿ ಬೊಟಿಂಗ್ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ.

42.ಸಿಂಹದ ಹೃದಯ ಇರೋ ಒಬ್ಬ ಎಕ್ಸ್ಟಾಡಿನರ್ ಜಂಟಲ್ ಮೆನ್ ನನ್ನು ಕಳೆದುಕೊಂಡಿದ್ದೇನೆ ಎಂದು ಸುಮಲತಾ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ನಟ ಅಂಬರೀಶ್ ಬದುಕಿದ್ದರೆ ಇವತ್ತು ತಮ್ಮ ಇಪ್ಪತ್ತೇಳನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಡಿಸೆಂಬರ್ ಎಂಟು ಅಂಬರೀಶ್ ಸುಮಲತಾ ಸಪ್ತಪದಿ ತುಳಿದ ದಿನ.

43.ರಾಜ್ಯಾದ್ಯಂತ ಸರ್ಕಾರಿ ಶಾಲೆಯಲ್ಲಿ ಬೈಸಿಕಲ್ ವಿತರಣೆ ಮಾಡದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆಯಂತೆ ಶಿಕ್ಷಣ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಿಗೂ ನವಂಬರ 28 ರಂದೇ ಆದೇಶ ರವಾನೆ ಮಾಡಲಾಗಿದೆ. ಆದ್ರೆ ಇದಾಗಿ 10 ದಿನ ಕಳೆಯುತ್ತಾ ಬಂದ್ರೂ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಸೈಕಲ್ ವಿತರಣೆ ಕೆಲಸ ಇನ್ನೂ ನಡೆಯುತ್ತಿದ್ದು, ಸಿಎಂ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ನವನಗರದ 13 ನೇ ಸೆಕ್ಟರ್ನ ಆರ್ಎಂಎಸ್ಎ ಶಾಲೆಯಲ್ಲಿ ಮಕ್ಕಳಿಗೆ ವಿತರಣೆಯಾಗಬೇಕಾದ ಸೈಕಲ್ಗಳ ತಯಾರಿ ಮಾಡಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಸೈಕಲ್ಗಳನ್ನ ಬಾಗಲಕೋಟೆಗೆ ತಂದಿದ್ದು, ಈಗಲೂ ರವಾನೆಯಾಗಬೇಕಿರೋ ಸೈಕಲ್ ಜೋಡಣೆ ನಡೆಯುತ್ತಿದೆ.

44.ಚಳಿಗಾಲ ಅಧಿವೇಶನ ಹಿನ್ನೆಲೆ ಬೆಳಗಾವಿ ಸುವರ್ಣ ಸೌಧ ಮುಂದೆ ವಾಟಾಳ ನಾಗರಾಜ್ ಹೇಳಿಕೆ ನಿಡಿರುವಂತದ್ದು ಉತ್ತರ ಕರ್ನಾಟಕ ಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ ಸಮಸ್ಯೆಗಳು ಸದನದಲ್ಲಿ ಚರ್ಚೆ ಆಗಬೇಕು ಉತ್ತರ ಕರ್ನಾಟಕ ಅನ್ಯಾಯ ನಿವಾರಿಸಲು ಪ್ರತ್ಯೇಕ ಡಿಸಿಎಂ ನೇಮಕ ಮಾಡಿ ಉತ್ತರ ಕರ್ನಾಟಕ ಕ್ಕೆ ಪ್ರತ್ಯೇಕ ಉಪಮುಖ್ಯಮಂತ್ರಿ ನೇಮಕ ಮಾಡಬೇಕು ಉತ್ತರ ಕರ್ನಾಟಕ ಉಪ ಮುಖ್ಯಮಂತ್ರಿ ಅಧಿಕಾರಿವನ್ನ ಬೆಳಗಾವಿ ಸುವರ್ಣ ಸೌಧದಿಂಲೇ ನಡೆಸಬೇಕು ಸಿಎಂ ಸೇರಿ ಯಾವೊಬ್ಬ ಸಚಿವರು ಜನರ ಸಮಸ್ಯೆ ಗೆ ಸ್ಪಂದಿಸುತ್ತಿಲ್ಲಾ. ಇವರೇಲ್ಲರೂ ವಿಮಾನದಲ್ಲಿ ಓಡಾಡುತ್ತಿದ್ದಾರೆ.ಯಾರೊಬ್ಬರು ನೆಲದ ಮೇಲೆ ಓಡಾಡುತ್ತಿಲ್ಲಾ ಸಿಎಂ, ಸಚಿವರಿಗೆ ಮೇಲೆ ಹಾರಾಟ ನಡೆಸಲು ಏನ ರೋಗ ಬಂದಿದೇಯಾ ಹಾಗಿದ್ರೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಅನುಮತಿ ನೀಡಬೇಕು ದೋಸ್ತಿ ಸರ್ಕಾರದ ವಿರುದ್ಧ ವಾಟಾಳ್ ವಾಗ್ದಾಳಿ ನಡೆಸಿದರು.

45.ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುವುದೇ ವ್ಯರ್ಥ. ಅಧಿವೇಶನದ ಬಂದಿದೆ ಎಂದು ಅದರ ರಿನೊವೇಷನ್ ಗೆ ಸರ್ಕಾರ 30 ಕೋಟಿ ಖರ್ಚು ಮಾಡಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ಅಧಿವೇಶನ ಎಂದಾಕ್ಷಣ ಸರ್ಕಾರ ಸುವರ್ಣ ಸೌಧದ ಕಡೆ ಗಮನ ಹರಿಸ್ತಾರೆ. ಅಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಕೂಡ ಚರ್ಚೆ ಕೂಡ ನಡೆಯುವುದಿಲ್ಲ. ಸುವರ್ಣ ಸೌಧ ನಿರ್ಮಿಸುವ ಬದಲು ಅದೇ ಹಣದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೆ ಲಕ್ಷಾಂತರ ಸೂರಿಲ್ಲದವ್ರಿಗೆ ಸೂರು ಸಿಗತಿದ್ವು ಎಂದ್ರು. ಸಿಎಂ ಅವ್ರಿಗೆ ಮಂಡ್ಯ ಮೈಸೂರು ಹಾಸನ ಎಂದ್ರೆ ಸಾಕ ತಕ್ಷಣ ಸ್ಪಂದಿಸ್ತಾರೆ. ಆದ್ರೆ ಉತ್ತ ರ ಕರ್ನಾಟಕ ಭಾಗ ಅಂದ್ರೆ ಅವ್ರಿಗೆ ತಾತ್ಸಾರ. ಇಲ್ಲಿ ರೈತ ಸಾಲಕ್ಕೆ ನಲುಗಿ ದಯಾಮರಣ ಅರ್ಜಿ ಕೊಟ್ರೂ ಈತ್ತ ಸಿಎಂ ನೋಡುತ್ತಿಲ್ಲ. ಹೀಗೆ ಆದ್ರೆ ಜನ್ರು ದಂಗೆ ಎಳ್ತಾರೆಂದ್ರು. ಈಗಲಾದ್ರೂ ಉತ್ತರ ಕರ್ನಾಟಕ ಭಾಗದ ಶಾಸಕ್ರು ಸಂಸದರ ಸಭೆ ಕರೆದು ಈ ಭಾಗದ ಸಮಸ್ಯೆ ಆಲಿಸಬೇಕೆಂದು ಯತ್ನಾಳ, ಸಿಎಂ ಅವ್ರಿಗೆ ಸಲಹೆ ನೀಡಿದ್ರು. ಉತ್ಸವಗಳಿಂದ ಸರ್ಕಾರಕ್ಕೆ ಲಾಭ ವಾಗುತ್ತದೆ. ಅದ್ರಿಂದ ಪ್ರವಾಸೋದ್ಯಮ ಬೆಳೆಯು ತ್ತದೆ. ಬರಗಾಲದ ನೆಪ ಹೇಳಿ ನವರಸಪುರ ಉತ್ಸವ ಕೈ ಬಿಡಬೇಡಿ ಎಂದು ಜಿಲ್ಲಾಡಳಿತಕ್ಕೆ ಹೇಳಿದ್ದೇನೆ ಎಂ ದ್ರು. ೧೫ ದಿವಸ ಅಧಿವೇಶನ ನಡೆಸಲು ಕೋಟ್ಯಾಂತ ರ ರೂಪಾಯಿ ಖರ್ಚು ಮಾಡವದರಿಂದ ಪ್ರಯೋಜ ನವಿಲ್ಲ. ನೂರಾರು ಕೋಟಿ ಲೂಟಿ ಮಾಡಲು ಬೆಳಗಾವಿ ಅಧಿವೇಶನ ಮಾಡಲಾಗುತ್ತಿದೆ.

46.ಇದಕ್ಕಿದ್ದಂತೆ ನಡುರಾತ್ರಿಯಲ್ಲಿ ಇಲ್ಲಿ ಭಯಾನಕ ಸ್ಪೋಟ ಆಗುತ್ತೆ....ಇನ್ನು ಬೆಳಗಿನ ಹೊತ್ತು ಕೇಳ್ಲೇ ಬೇಡಿ ಗಾಳಿಯಲ್ಲಿ ತೂರಿಬರೋ ಕಲ್ಲುಗಳು ಯಾರ ಪ್ರಾಣ ತೆಗೆಯುತ್ತೋ ಹೇಳೋಕೆ ಆಗೋಲ್ಲ.... ಇದಕ್ಕೆ ಹೆದರಿರೋ ಅನ್ನದಾತ ತನ್ನ ಜಮೀನಿಗೆ ಹೋಗೋದನ್ನೇ ಬಿಟ್ಟಿದ್ದಾನೆ...ಎರಡು ವರ್ಷಗಳಿಂದ ಕಾಡ್ತಿರೋ ಅಕ್ರಮ ಗಣಿಗಾರಿಕೆಯಿಂದ ಹೆದರಿರೋ ರೈತ ಕುಟುಂಬ ನಮಗೆ ರಕ್ಷಣೆ ಕೊಡಿ ಅಂತಾ ಬೊಬ್ಬೆ ಹೊಡೆದ್ರೂ ಕ್ಯಾರೆ ಅನ್ನೋರು ಇಲ್ದೀರಾ ಆಗಿದಾರೆ...ಇಷ್ಟಕ್ಕೂ ಇದು ಎಲ್ಲಿ ಅಂತೀರಾ.....ರಾಜಧಾನಿ ಬೆಂಗಳೂರು ಪಕ್ಕದಲ್ಲೇ ಇರೋ ದೇವನಹಳ್ಳಿಯಲ್ಲಿ. ರೈತ ನಾರಾಯಣಸ್ವಾಮಿ ಕುಟುಂಬ ಬಲಾಡ್ಯ ಗಣಿ ಮಾಲೀಕ ಗೋಪಾಲ್ ದೌರ್ಜನ್ಯಕ್ಕೆ ನಲುಗಿ ಹೋಗಿದಾರೆ. ಇರೋ ಎರಡು ಎಕರೆ ಭೂಮಿಯಲ್ಲಿ ಬೆಳೆ ತಗೋಳೋಕೆ ಆಗ್ದೆ ಕಣ್ಣೀರಿಡ್ತಿದಾರೆ.

47.ಮಾಜಿ ಸಚಿವ ವಿನಯ್ ಕುಲಕರ್ಣಿ ಗೂಂಡಾಗಿರಿ ಮಾಡಿ ನನ್ನ ಮುರುಘಾಮಠದ ಫೀಠಾಧಿಪತಿ ಸ್ಥಾನವನ್ನು ತೆರೆವುಗೊಳಿಸಿದ್ದರು ಎಂದು ಮಠದ ಮಾಜಿ ಫೀಠಾಧಿಪತಿ ಶಿವಯೋಗಿ ಶ್ರೀಗಳು ಗಂಭೀರವಾದ ಆರೋಪವನ್ನು ಮಾಡಿದ್ದರು. ಇದಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡದ್ದಕ್ಕೆ ಸದ್ಯದ ಫೀಠಾಧಿಪತಿ ಮಲ್ಲಕಾರ್ಜುನ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ಮಠದ ವಿಷಯದಲ್ಲಿ ರಾಜಕೀಯ ಮಾಡಬೇಡಿ. ನಿಮ್ಮ ರಾಜಕೀಯ ಏನಿದ್ದರೂ ಮಠದ ಹೊರಗಿರಲಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಫೀಠಾಧಿಪತಿ ಶಿವಯೋಗಿ ಶ್ರೀಗಳಿಗೆ ಯಾರು ಕೂಡ ಒತ್ತಾಯ ಮಾಡಿಲ್ಲ. ಶಿವಯೋಗಿ ಶ್ರೀಗಳು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಎಂಟು ವರ್ಷದ ಹಿಂದೆ ನಡೆದ ಘಟನೆ. ಇದೀಗ ಕಾಣದ ಕೈಗಳು ಇದಕ್ಕೆ ಪುಷ್ಠಿ ನೀಡಿ, ಮಠದ ಹೆಸರನ್ನು ಕೆಡೆಸುವ ಹುನ್ನಾರ ನಡೆದಿದೆ. ಈಗಾಗಲೇ ಶೀವಯೋಗಿ ಶ್ರೀಗಳ ಜೀವನೋಪಾಯಕ್ಕೆ ಜಮೀನು ನೀಡಲು ಆಡಳಿತ ಮಂಡಳಿ ಸಿದ್ದವಿದೆ ಎನ್ನುವ ಮೂಲಕ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ವಿನಯ್ ಕುಲಕರ್ಣಿ ಪರ ಬ್ಯಾಟಿಂಗ್ ಮಾಡಿದ್ದಾರೆ.

48.ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಲಮನ್ನಾ ಯೋಜನೆಯ ರುಣಮುಕ್ತ ಪ್ರಮಾಣ ಪತ್ರ ಕಾರ್ಯಕ್ರಮಕ್ಕೆ ಸರ್ಕಾರ ಇವತ್ತು ಚಾಲನೆ ಕೊಟ್ಟಿತು..ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸಿದ್ರು.. ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ರೈತರಿಗೆ ಪ್ರಮಾಣ ಪತ್ರ ವಿತರಿಸಿದ್ರು.. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈಗಾಗಲೇ ರಾಜ್ಯದಲ್ಲಿನ ಸಹಕಾರಿ ಬ್ಯಾಂಕಲ್ಲಿರೋ 21 ಲಕ್ಷ ರೈತರು ತಮ್ಮ ದಾಖಲಾತಿಗಳೊಂದಿಗೆ ಬ್ಯಾಂಕಲ್ಲಿ ನೊಂದಣಿ ಮಾಡಿಸಿದ್ದು ಹಂತಹಂತವಾಗಿ ಎಲ್ಲರ ರುಣ ತೀರಿಸಿಲಾಗುವುದು ಅಂದ್ರು..ಹೀಗಾಗಿ ಪ್ರಾಯೋಗಿಕ ಹಂತದಲ್ಲಿ ಮೊದಲು ಸೇಡಂ ಆಯ್ಕೆ ಮಾಡಿಕೊಂಡಿದ್ದು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿನ 1200 ರೈತರಿಗೆ ಪ್ರಮಾಣಪತ್ರ ಸಿದ್ದಪಡಿಸಿದ್ದು 24 ರೈತರಿಗೆ ಇವತ್ತು ಪ್ರಮಾಣ ಪತ್ರ ನೀಡಿದ್ದೇವೆ ಅಂದ್ರು..ಸಹಕಾರಿ ಬ್ಯಾಂಕ್ 1 ಲಕ್ಷ ಮತ್ತುವಾಣಿಜ್ಯ ಬ್ಯಾಂಕಲ್ಲಿನ ಗರಿಸ್ಟ 2 ಲಕ್ಷ ಮೊತ್ತದ ಸಾಲ ಮನ್ನಾವ್ಯಾಪ್ತಿಗೆ ಬರುತ್ತೆ ಅಂತ ಹೇಳಿದ್ರು...ಇದೇವೇಳೆ ಪ್ರಿಯಾಂಕ್ ಖರ್ಗೆ ಮಾತನಾಡಿ ರೈತರ ವಿರೋಧಿ ಸರ್ಕಾರ ಅಂತ ಟೀಕಿಸೋರಿಗೆ ಇದೇ ಕಾರ್ಯಕ್ರಮ ಉತ್ರ ಕೊಟ್ಟಂತಾಗಿದೆ ನಮ್ಮದು ರೈತಪರ ಸರ್ಕಾರ ಎಂದರು.

49.ಕೆಸಿ ವ್ಯಾಲಿ ಯೋಜನೆಯ ಎರಡನೇ ಹಂತದಲ್ಲಿ ಕೋಲಾರ ಮತ್ತು ಮಾಲೂರು ಕೆರೆಗಳಿಗೆ ನರಸಾಪುರ ಕೆರೆಯಿಂದ ಪಂಪ್ ಮಾಡುವ ಪಂಪ್ ಹೌಸ್ಗೆ ಇಂದು ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸ್ವೀಕರ್ ರಮೇಶ್ ಕುಮಾರ್ ಚಾಲನೆ ನೀಡಿದರು, ಸಂಸದ ಕೆಚ್ ಮುನಿಯಪ್ಪ, ಶಾಸಕರಾದ ಶ್ರೀನಿವಾಸಗೌಡ ,ಎಸ್ ಎನ್ ನಾರಾಯಣಸ್ವಾಮಿ, ಕೆವೈ ನಂಜೇಗೌಡ ಉಪಸ್ಥಿತರಿದ್ದು , ಸ್ವೀಕರ್ ರಮೇಶ್ ಕುಮಾರ ಬೃಹತ್ ಮೋಟಾರ್ ಸ್ವಿಚ್ ಆನ್ ಮಾಡುವ ಮೂಲಕ ಕೋಲಾರ ,ಮಾಲೂರು ಕೆರೆಗಳಿಗೆ ನೀರುಹರಿಸುವ ಯೋಜನೆಗೆ ಚಾಲನೆ ನೀಡಿದರು. ಜೊತೆಗೆ ಕೆಸಿ ವ್ಯಾಲಿ ಮೂಲಕ ಲಕ್ಮೀಸಾಗರ ಕೆರೆಗೆ ಹರಿಯುತ್ತಿರುವ ೧೧೦ ಎಮ್ ಎಲ್ ಡಿ ನೀರಿನ ಜೊತೆಗೆ ಮತ್ತೆ ೭೦ ಎಮ್ ಎಲ್ ಡಿ ಹೆಚ್ಚುವರಿಯಾಗಿ ನೀರು ಹರಿಸುವುದ್ದಕ್ಕೆ ಚಾಲನೆಯನ್ನೂ ಸಹ ಇದೇ ಸಂದರ್ಭದಲ್ಲಿ ನೀಡಲಾಯಿತು. ಬಳಿಕ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಜಿಲ್ಲೆಯ ೧೨೬ ಕೆರೆಗಳಿಗೆ ನೀರು ತುಂಬುವ ಮಹತ್ವದ ಯೋಜನೆ ಇದಾಗಿದ್ದು ಈ ಯೋಜನೆಯಿಂದ ಬರಗಾಲದಿಂದ ಬೇಸತ್ತಿದ್ದಾರೆ ರೈತರಿಗೆ ಹೆಚ್ಚು ಉಪಯೋಗ ವಾಗಿವೆ ಯೋಜನೆ ಕೆಸಿ ವ್ಯಾಲಿ ಯೋಜನೆಯಾಗಿದೆ ಎಂದರು.

50.ಈಜಲು ತೆರಳಿದ್ದ ಪ್ರವಾಸಿಗ ಸಮುದ್ರಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 26 ವರ್ಷದ ರಘುವೀರ್ ಮೃತಪಟ್ಟ ಪ್ರವಾಸಿಗನಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಘುವೀರ್ ಸ್ನೇಹಿತರ ಜೊತೆ ಪ್ರವಾಸಕ್ಕೆ ಆಗಮಿಸಿದ ವೇಳೆಯಲ್ಲಿ ಅಪ್ಸರಕೊಂಡ ಸಮುದ್ರದಲ್ಲಿ ಈಜಲು ಮುಂದಾಗಿದ್ದ. ಸ್ನೇಹಿತರೆಲ್ಲಾ ವಾಪಾಸ್ ಹೊರಟರು ಈಜಾಡುವಾಗ ಅಲೆಗಳ ರಭಸಕ್ಕೆ ಸಿಲುಕಿ ರಘುವೀರ್ ಮೃತಪಟ್ಟಿದ್ದಾನೆ. ಈ ಸಂಭಂದ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES