Top

ಎರಡನೇ ದಿನ  ಟೀಂ ಇಂಡಿಯಾ ಬೌಲರ್​ಗಳ ಮೆರೆದಾಟ

ಎರಡನೇ ದಿನ  ಟೀಂ ಇಂಡಿಯಾ ಬೌಲರ್​ಗಳ ಮೆರೆದಾಟ
X

ಅಡಿಲೇಡ್​​: ಟೀಂ ಇಂಡಿಯಾ ಬೌಲರ್​ಗಳ ಸಂಘಟಿತ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್​ ನಷ್ಟಕ್ಕೆ 191 ರನ್​ ಗಳಿಸಿದೆ.

ಎರಡನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಆ್ಯರಾನ್ ಫಿಂಚ್ (0) ಮತ್ತು ಮಾರ್ಕಸ್ ಹ್ಯಾರಿಸ್ (26) ಉತ್ತಮ ಆರಂಭ ಕೊಡುವಲ್ಲಿ ಎಡವಿದ್ರು. ನಂತರ ಅಮೋಘ ಬೌಲಿಂಗ್ ದಾಳಿ ಮುಂದುವರೆಸಿದ ಆರ್​.ಅಶ್ವಿನ್ , ಉಶ್ಮಾನ್ ಖಾವಾಜಾ (28), ಶಾನ್ ಮಾರ್ಷ್​ (2) ವಿಕೆಟ್ ಪಡೆದು ಮಿಂಚಿದ್ರು. ಮಧ್ಯಮ ಕ್ರಮಾಂಕದಲ್ಲಿ ಬಂದ ಹ್ಯಾನ್ಸ್ ಕೊಮ್ (34) , ಮತ್ತು ಪ್ಯಾಟ್​ ಕಮಿನ್ಸ್ (10) ವೇಗಿ ಜಸ್​ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಟ್ರಾವೆಸ್ ಹೆಡ್ ಅಜೇಯ 61, ಮಿಶೆಲ್ ಸ್ಟಾರ್ಕ್ ಅಜೇಯ 8 ರನ್​ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಟೀಂ ಇಂಡಿಯಾ ಪರ ಆರ್​.ಅಶ್ವಿನ್ 3, ಇಶಾಂತ್ ಶರ್ಮಾ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು. ಇದಕ್ಕೂ ಮುನ್ನ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 250 ರನ್​ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಪಡೆಯಬೇಕಿದ್ದಲ್ಲಿ ಇನ್ನು 59 ರನ್​ಗಳ ಕೊರತೆ ಅನುಭವಿಸುತ್ತಿದೆ.

Next Story

RELATED STORIES