ರಾಜ್ಯ ಸರ್ಕಾರಕ್ಕೆ, ಬಿಬಿಎಂಪಿಗೆ ಕೋಟಿ ಕೋಟಿ ದಂಡ..!

X
TV5 Kannada7 Dec 2018 7:30 AM GMT
ಕೆಲ ದಿನಗಳ ಹಿಂದಷ್ಟೇ ದೇಶಾದ್ಯಂತ ಸುದ್ದಿ ಮಾಡಿದ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗೆ ದಂಡ ವಿಧಿಸಿದೆ.
ಕೆರೆ ಶುದ್ಧಿ ಮಾಡುವಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಿಫಲವಾದ ಕಾರಣ, ಸರ್ಕಾರಕ್ಕೆ 50ಕೋಟಿ ದಂಡ ಮತ್ತು ಬಿಬಿಎಂಪಿಗೆ 25ಕೋಟಿ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಲ್ಲದೇ ಕೆರೆಯ ಶುದ್ಧೀಕರಣಕ್ಕಾಗಿ ಪ್ರತ್ಯೇಕ ಖಾತೆ ತೆಗೆದು ಅದರಲ್ಲಿ 500 ಕೋಟಿ ರೂ.ಠೇವಣಿ ಇಡಬೇಕೆಂದು ಆದೇಶಿಸಿದೆ. ಒಂದು ವೇಳೆ ಇದರಲ್ಲಿ ವಿಫಲವಾದರೆ, ಈ ದಂಡದ ಜೊತೆಗೆ100 ಕೋಟಿ ರೂಪಾಯಿ ಕಟ್ಟಬೇಕೆಂದು ಎಚ್ಚರಿಕೆ ನೀಡಿದೆ.
ದಂಡವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಟ್ಟುವಂತೆ ಸೂಚಿಸಿದ್ದು, ಈ ಹಣವನ್ನು ಪರಿಸರ ಪುನರುಜ್ಜೀವನಕ್ಕೆ ಬಳಸಿಕೊಳ್ಳುವಂತೆ ಹೇಳಿದೆ.
Next Story