ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

X
TV5 Kannada7 Dec 2018 9:34 AM GMT
ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಜರಾತ್ನ ಅಹ್ಮದ್ನಗರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ವೇದಿಕೆಯ ಮೇಲೆಯೇ ಕುಸಿದು ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಅಹಮ್ಮದ್ ನಗರದಲ್ಲಿರುವ ಮಹಾತ್ಮ ಪುಲೆ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತೀದ್ದ ಕಾರ್ಯಕ್ರಮದಲ್ಲಿ ಕುಳಿತ ಜಾಗದಲ್ಲೇ ಕುಸಿದು ಬಿದ್ದಿದ್ದಾರೆ, ಇನ್ನೂ ಲೋ ಶುಗರ್ ಲೆವೆಲ್ ಹೆಚ್ಚಾದ ಕಾರಣ ನಿತಿನ್ ಗಡ್ಕರಿಯವರನ್ನು ಕೂಡಲೇ ಆಸ್ಪತ್ರೆಗೆ ದಖಾಲು ಮಾಡಲಾಯಿತು, ತಪಾಸಣೆ ಬಳಿಕ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ವರದಿಯನ್ನು ನೀಡಿದ್ದಾರೆ.
ರಾಷ್ಟ್ರಗೀತೆಗಾಗಿ ಮೊದಲು ನಿತಿನ್ ಗಡ್ಕರಿ ಎದ್ದು ನಿಂತಿದ್ದು, ಅದದ ಬಳಿಕ ಕೆಲವೊತ್ತಿನ ನಂತರ ಕೆಳಗೆ ಬಿದಿದ್ದರೆ. ಗಡ್ಕರಿಯವರು ಕುಸಿದು ಬಿಳುವ ಸಂದರ್ಭದಲ್ಲಿ ಮಹಾರಾಷ್ಟ್ರ ಗವರ್ನರ್ ಆದ ಸಿ ವಿದ್ಯಾಸಾಗರ್ ರಾವ್ ವೇದಿಕೆಯ ಮೇಲಿದ್ದರು.ಇನ್ನೂ ಇದೇ ವೇಳೆ ಪೊಲೀಸ್ ಸಿಬ್ಬಂದಿಗಳು ತಕ್ಷಣ ಹಿಡಿದುಕೊಳ್ಳಲು ಮುಂದಗಿದ್ದಾರೆ.
Next Story