ಬಲಪಂಥಿಯರ ನೆಕ್ಸ್ಟ್ ಟಾರ್ಗೇಟ್ ನಾನೇ- ನಿಜಗುಣಾನಂದ ಸ್ವಾಮೀಜಿ

ಬೆಳಗಾವಿ: ಬಲಪಂಥೀಯರಿಗೆ ನೆಕ್ಸ್ಟ್ ಟಾರ್ಗೇಟ್ ನಾನೇ ಎಂದು ನಿಜಗುಣಾನಂದ ಸ್ವಾಮೀಜಿ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ನಡೆದ ಮೌಢ್ಯ ವಿರೋಧಿ ದಿನಾಚರಣೆ ವೇಳೆ ಭಾಷಣ ಮಾಡಿದ ಶ್ರೀಗಳು, ಈ ದೇಶದಲ್ಲಿ ಬುದ್ಧನನ್ನ ಓಡಿಸಿದ ಸಮುದಾಯವಿದೆ. ಬಸವಣ್ಣನವರನ್ನ ಗಡಿ ಪಾರು ಮಾಡಿದ ಸಮುದಾಯವಿದೆ. ಸಾಹಿತಿ ಕಲಬುರ್ಗಿಯನ್ನ ಗುಂಡಿಟ್ಟು ಕೊಂದ ಸಮುದಾಯವಿದೆ. ಗೌರಿ ಲಂಕೇಶ್ ಅವರನ್ನ ಗುಬ್ಬಿಯಂತೆ ಹೊಡೆದು ರೋಡಿನಲ್ಲಿ ಮಲಗಿಸಿದ ಸಮುದಾಯವಿದೆ. ಇನ್ನುಮುಂದೆ ಬಹಳ ಎಚ್ಚರದಿಂದ ಇರಬೇಕು ನಾನು. ಕಾರಣ ಧಾರ್ಮಿಕ ಮುಖಂಡರೊಳಗೆ ಬಹಳ ದೊಡ್ಡ ಟಾರ್ಗೆಟ್ ನಿಜಗುಣಾನಂದ ಸ್ವಾಮೀಜಿ ಎಂದಿದ್ದಾರೆ.
ಅಲ್ಲದೇ, ಬಹಳ ದೊಡ್ಡ ಟಾರ್ಗೆಟ್ ಮಾಡಿದ್ರು ಅದಕ್ಕೆ ನಾನು ಹೆದರುವುದಿಲ್ಲಾ. ಕೊಲ್ಲುವೆನೆಂಬ ಭಾಷೆ ದೇವನದಾರೆ. ಗೆಲುವೆನೆಂಬ ಭಾಷೆ ಭಕ್ತನದು ನೋಡಾ ಎಂಬ ಸಾಲಿಗೆ ನಿಂತವನು ನಾನು.ಅವನು ನಿಜಗುಣಾನಂದ ಸ್ವಾಮಿ ಸ್ವಾಮಿನೋ.. ಕಾಮಿನೋ ಅಂತಾರೆ... ಜಾತ್ರೆಗೆ ಹೋದ್ರೆ ತೇರಿಗೆ ಜನರು ಉತ್ತುತಿ ಬಾಳೆಹಣ್ಣು ಒಗಿತಿರಿಲ್ಲಾ. ಥೆರಿಗೆ ಉತ್ತುತಿ ಬಾಳೆಹಣ್ಣು ಎಸಿಬೇಡಿ. ಥೆರಿಗೆ ಇಸ್ಪೀಟ್ ಎಲೆ ಎಸೀರಿ... ಸರಾಯಿ ಬಾಟಲಿ ಎಸೀರಿ...ಪಾನ್ ಪರಾಗ್ ಎಸೀರಿ...ಗುಟಕಾ ಎಸೀರಿ...ಆ ಕಡೆ ನಿಂತಿರುವ ಪಡ್ಡೆ ಹುಡುಗುರು ಹುಡುಗಿಯರಿಗೆ ಎಸಿತಾರೆ ಏನ್ ಕರ್ಮ ಏನ್ ಜಾತ್ರೆ ಅಂತೇ, ಇದು ನಮ್ಮ ಸಂಸ್ಕೃತಿ ನಮ್ಮ ದೇವರು ಅಂತೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನವನ್ನ ಬದಲಾಯಿಸಲು ಹೊರಟಿರುವ ರಾಜಕಾರಣಿಗಳು, ಪಕ್ಷಗಳು, ಅಂಬೇಡ್ಕರ್ ಸಂವಿಧಾನ ಬದಲಾಯಿಸುತ್ತಾರೆ ಅಂದ್ಮೇಲೆ, ನಮ್ಮಂತವರ ಮೇಲೆ ಗುಂಡು ಹಾಕೋದು ಏನ್ ದೊಡ್ಡ ಮಾತು.. ಇಡೀ ಅಖಂಡ ಭಾರತ ದಲಿತರ ದೇಶವಿದು ಎಂದು ನಿಜಗುಣಾನಂದ ಸ್ವಾಮೀಜಿ ಬಲಪಂಥೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.