ಮಾಜಿ ಶಾಸಕ ಅನಿಲ್ ಲಾಡ್ಗೆ ಜೀವ ಬೆದರಿಕೆ..!

ಬೆಂಗಳೂರು: ಬಳ್ಳಾರಿ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಅನಿಲ್ ಲಾಡ್ಗೆ ಬೆದರಿಕೆ ಕರೆ ಬಂದಿದೆ. ಬಾಂಬೆಯಿಂದ ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆ ಅನಿಲ್ ಲಾಡ್ ದೂರು ದಾಖಲಿಸಿದ್ದಾರೆ.
ಬಳ್ಳಾರಿ ಗಣಿಗಾರಿಕೆ ವಿಚಾರದಲ್ಲಿ ಅನಿಲ್ ಲಾಡ್ಗೆ ಬೆದರಿಕೆ ಕರೆ ಬಂದಿದ್ದು, ಉದ್ಯಮಿ ಆರ್ ಶಿವಕುಮಾರ್ ಎಂಬುವವರಿಂದ ಕರೆ ಬಂದಿದೆ.
ಬಳ್ಳಾರಿಯ ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಅನಿಲ್ ಲಾಡ್ ಮತ್ತು ಉದ್ಯಮಿ ಶಿವಕುಮಾರ್ ನಡುವೆ ಅಗ್ರಿಮೆಂಟ್ ಆಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಸಿಕ್ಕ ಬಳಿಕ ಮಾರಾಟ ಮಾಡುವ ಅಗ್ರಿಮೆಂಟ್ ಆಗಿತ್ತು. ಈಗಾಗಲೇ ಗಣಿಗಾರಿಕೆ ಕೆಲಸಕ್ಕೆ ಅನಿಲ್ ಲಾಡ್ ಸುಮಾರು ಮೂವತ್ತು ಕೋಟಿ ನೀಡಿದ್ದು, ಅನುಮತಿ ಸಿಗದಿದ್ದಲ್ಲಿ ಹಣ ವಾಪಸ್ ನೀಡಬೇಕೆಂದು ಕೂಡ ಅಗ್ರಿಮೆಂಟ್ ಆಗಿತ್ತು.
ಆದ್ರೆ ಹಲವು ಸಬೂಬು ನೀಡಿ ಸತಾಯಿಸುತ್ತಿದ್ದ ಶಿವಕುಮಾರ್, ಮತ್ತೊಮ್ಮೆ ಭೇಟಿಗೆ ಬಂದರೆ ಮರ್ಡರ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಅನಿಲ್ ಲಾಡ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.