Top

ಯಶ್ ಮಗಳಿಗೆ ಅಂಬಿ ಕಡೆಯಿಂದ ಬಂತು 1.50ಲಕ್ಷ ರೂ. ಗಿಫ್ಟ್

ಯಶ್ ಮಗಳಿಗೆ ಅಂಬಿ ಕಡೆಯಿಂದ ಬಂತು 1.50ಲಕ್ಷ ರೂ. ಗಿಫ್ಟ್
X

ಬೆಂಗಳೂರು: ಯಶ್-ರಾಧಿಕಾ ಮಗಳಿಗೆ ದಿ.ರೆಬೆಲ್ ಸ್ಟಾರ್ ಅಂಬರೀಶ್ ಕಡೆಯಿಂದ ತೊಟ್ಟಿಲೊಂದು ಉಡುಗೊರೆಯಾಗಿ ಬಂದಿದೆ.

ತಮ್ಮ ನಿಧನಕ್ಕೂ ಮುನ್ನ 1.50 ಲಕ್ಷ ರೂಪಾಯಿಯ ತೊಟ್ಟಿಲೊಂದನ್ನ ಬುಕ್ ಮಾಡಿದ್ದ ಅಂಬಿ, ಈ ವಿಷಯವನ್ನ ಸುಮಲತಾ ಮತ್ತು ಯಶ್‌ಗೂ ತಿಳಿಸಿರಲಿಲ್ಲ.

ಆದರೆ ಮೊನ್ನೆಯಷ್ಟೇ ಅಂಬರೀಶ್ ಬಳಸುತ್ತಿದ್ದ ಮೊಬೈಲ್‌ಗೆ ತೊಟ್ಟಿಲು ರೆಡಿ ಎಂಬ ಮೆಸೇಜ್ ಬಂದಿದ್ದು, ಇದನ್ನ ನೋಡಿ ಸುಮಲತಾ ಯಶ್‌ಗೆ ಕಾಲ್ ಮಾಡಿ ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಬಂದಿದೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಟಿವಿ5ಗೆ ಹೇಳಿಕೆ ನೀಡಿರುವ ಆಪ್ತ ಮೂಲಗಳು, ಅಂಬರೀಶ್ ತೊಟ್ಟಿಲು ಆರ್ಡರ್ ಮಾಡಿರೋದು ಖುಷಿಯ ವಿಚಾರ . ಯಶ್ ಮೇಲೆ ಅವರಿಗಿದ್ದ ಪ್ರೀತಿ ಎಂಥದ್ದು ಅನ್ನೋದಕ್ಕೆ ಇದು ಸಾಕ್ಷಿ . ಅದು ಒಂದೂವರೆ ಲಕ್ಷದ್ದು ಅನ್ನೋದಕ್ಕಿಂತ ಹೆಚ್ಚಾಗಿ ಅಂಬಿ ಪ್ರೀತಿ ತುಂಬಿದ ತೊಟ್ಟಿಲಾಗಲಿದೆ. ಈ ತೊಟ್ಟಿಲನ್ನ ಅಂಬಿ ವಿಶೇಷವಾಗಿ ಡಿಸೈನ್ ಮಾಡೋಕ್ಕೆ ಹೇಳಿದ್ದು, ಶ್ರೀ ಕೃಷ್ಣನ ಭಾವಚಿತ್ರ ಸೇರಿದಂತೆ ಡಿಫರೆಂಟ್ ಪೇಂಟಿಂಗ್‌ನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ. ಇನ್ನು ಅಂಬಿ ಒಲವಿನ ಉಡುಗೊರೆ ವಿಷಯ ಕೇಳಿ ಯಶ್ ದಂಪತಿ ಭಾವುಕರಾಗಿದ್ದಾರೆ.

Next Story

RELATED STORIES