Top

'ಮಲತಾಯಿ ಧೋರಣೆ ಅಸಹನೆ ಹುಟ್ಟಿಸುತ್ತದೆ': ಯಡಿಯೂರಪ್ಪ

ಮಲತಾಯಿ ಧೋರಣೆ ಅಸಹನೆ ಹುಟ್ಟಿಸುತ್ತದೆ: ಯಡಿಯೂರಪ್ಪ
X

ರಾಜ್ಯದ ಮುಖ್ಯಮಂತ್ರಿ ಆದವರು ತಾಯಿ ಸ್ಥಾನದಲ್ಲಿರಬೇಕೇ ಹೊರತು ಮಲತಾಯಿ ಸ್ಥಾನದಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಹೇಳಿಕೆ ಬಿಡುಗಡೆ ಮೂಲಕ ತಿಳಿಸಿದ್ದಾರೆ.

ನಾಟಿ ಮಾಡಿ ಭತ್ತದ ಕೊಯಿಲು ಮಾಡಲು ಹೋಗಿದ್ದರೆ ಆದರೆ ನೀವು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಾಕಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ, ಜನರಿಗೆ ಕುಡಿಯಲು ನೀರಿಲ್ಲ ಆದರೆ ಮಂತ್ರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ, ಇಂದು ನೀವು ಭತ್ತ ನಾಟಿ ಮಾಡಿ ಕೊಯಿಲಿಗೆ ಬಂದದ್ದು ನೋಡಿದರೆ ಉತ್ತರ ಕರ್ನಾಟಕದ ಬಗ್ಗೆ ಇರುವ ನಿಮ್ಮ ಮಲತಾಯಿ ಧೋರಣೆ ಅಸಹನೆ ಹುಟ್ಟಿಸುತ್ತದೆ ಮತ್ತು ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಮಲತಾಯಿ ಧೋರಣೆ, ಅಸಡ್ಡೆತನದ ಬಗ್ಗೆ ಚರ್ಚಿಸುವುದು ಅನವಶ್ಯಕ ಎನಿಸುತ್ತದೆ ಎಂದು ಪ್ರಕಟಿಸಿದ್ದಾರೆ.

ಒಬ್ಬ ವ್ಯಕ್ತಿ ಒಂದು ಸಲ ತಮ್ಮ ನಿಲುವು, ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ ಎಂದಾದ ಮೇಲೆ ನಿಮ್ಮ ಉತ್ತರ ಕರ್ನಾಟಕ ವಿರೋಧಿ ನಿಲುವಿನ ಬಗ್ಗೆ ಚರ್ಚಿಸೋದು ವ್ಯರ್ಥದ ಮಾತಾಗುತ್ತದೆ ಎಂದು ತಿಳಿಸಿದ್ದಾರೆ.

35.000 ಕೋಟಿ ರೂ ಹಣಕ್ಕೆ ಲೆಕ್ಕ ಪತ್ರ ಇಲ್ಲ ಎಂದು ಸಿ.ಎ.ಜಿ ವರದಿ ತೋರಿಸುತ್ತದೆ. ಆದರೆ ನಿಮ್ಮ ಪಕ್ಷದವರ ಮೇಲೆ ಆಪಾದನೆ ಬಂದರೆ ನಮ್ಮ ಮೇಲೆ ಬೊಟ್ಟು ತೋರಿಸೋದು ರಾಜ್ಯ ರಾಜಕೀಯದಲ್ಲಿ ವಾಡಿಕೆ ಆಗಿ ಬಿಟ್ಟಿದೆಮಾಜಿ ಮುಖ್ಯಮಂತ್ರಿಯೊಬ್ಬರು ನಾವೇನು ಜೈಲಿಗೆ ಹೋಗಿ ಬಂದಿಲ್ಲ ಅಂತಾರೆ. ಕಾನೂನು ಬಲ್ಲವರೇ ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೆ ಹೇಗೆ? ಎಂದು ಯಡಿಯೂರಪ್ಪ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Next Story

RELATED STORIES