ಕುತೂಹಲಕಾರಿ ಭವಿಷ್ಯ ನುಡಿದ ದ್ವಾರಕಾನಾಥ ಗುರೂಜಿ

X
TV5 Kannada7 Dec 2018 5:19 AM GMT
ರಾಯಚೂರು: ಡಿಸೆಂಬರ್ 19ರಿಂದ ರಾಜ್ಯ ರಾಜಕೀಯದಲ್ಲಿ ತಿಕ್ಕಾಟ ಹೆಚ್ಚಾಗಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ರಾಯಚೂರಿನಲ್ಲಿ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕಾನಾಥ್ ಗುರೂಜಿ ಹೇಳಿದ್ದಾರೆ.
ಡಿಸೆಂಬರ್ 16ರಿಂದ ಧನುರ್ಮಾಸ ಆರಂಭವಾಗುವುದರಿಂದ ಒಂದೇ ಮನೆಯಲ್ಲಿ ಶನಿ ರವಿ ಇರುವುದರಿಂದ, ಪಕ್ಷದಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ.
ಇನ್ನು ಈ ಕಾರಣದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದ್ದು, ಕುಮಾರಸ್ವಾಮಿಗೆ ಕಾಂಗ್ರೆಸ್ಸಿಗರು ಕೆಲಸ ಮಾಡಲು ಬಿಡಬೇಕೆಂದು ಹೇಳಿದ್ದು, ಇಲ್ಲವಾದಲ್ಲಿ ಎರಡೂ ಪಕ್ಷಗಳು ಎಚ್ಚರಿಕೆಯಿಂದ ಇರಬೇಕೆಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೇ ಡಿ.ಕೆ.ಶಿವಕುಮಾರ್ ಸದ್ಯದ ನಕ್ಷತ್ರಕ್ಕೆ ಸಂಬಂಧಿಸಿದಂತೆ ದಿನಗಳು ಸರಿಯಿಲ್ಲ, ಆದ್ರೆ ಮುಂದೆ ಸಿಎಂ ಆಗ್ತಾರೆ. ಆದ್ರೆ ಅವರು ತಿದ್ದಿಕೊಳ್ಳುವ ಕೆಲಸ ಮಾಡಬೇಕು. ಸದ್ಯದ ಪರೀಸ್ಥಿತಿ ತೊಂದರೆಯಲ್ಲಿದ್ದಾರೆ, ಆದ್ರೂ ಅದನ್ನು ಮೆಟ್ಟಿ ಬಳ್ಳಾರಿ ಚುನಾವಣೆ ಗೆದ್ದಿದಾರೆ. ಪ್ರಸ್ತುತ ಎಲ್ಲಾ ತೊಂದರೆಗಳು ದೂರ ಆಗಿವೆ ಎಂದು ಭವಿಷ್ಯ ನುಡಿದಿದ್ದಾರೆ.
Next Story