Top

ಧ್ರುವ ಸರ್ಜಾ ಎಂಗೇಜ್​ಮೆಂಟ್ ಸಿದ್ಧತೆ ಹೇಗಿದೆ ಗೊತ್ತಾ..?

ಧ್ರುವ ಸರ್ಜಾ ಎಂಗೇಜ್​ಮೆಂಟ್ ಸಿದ್ಧತೆ ಹೇಗಿದೆ ಗೊತ್ತಾ..?
X

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಲವ್ ಮೂಡ್ ನಲ್ಲಿ ಇದ್ದರು ಇದೀಗ ಅವರ ನಿಶ್ಚಿತಾರ್ಥಕ್ಕೆ ಅದ್ದೂರಿಯಾಗಿ ಸಕಲ ತಯಾರಿಯನ್ನು ಮಾಡಲಾಗುತ್ತಿದೆ.

ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಇದೇ ಡಿಸೆಂಬರ್ 9ಕ್ಕೆ ನಟ ಧ್ರುವ ಸರ್ಜಾ ನಿಶ್ಚಿತಾರ್ಥ ಅದ್ದೂರಿಯಾಗಿ ಬನಶಂಕರಿಯ ಪುಣ್ಯಕ್ಷೇತ್ರ ಶ್ರೀಧರ್ಮಗಿರಿ ದೇವಾಲಯದಲ್ಲಿ ನಡೆಯಲಿದೆ.ಇನ್ನೂ ಹನುಮ ಭಕ್ತನಾಗಿರುವುದರಿಂದ ಧ್ರುವ ಸರ್ಜಾ, ಹನುಮಾನ್ ವಿಗ್ರಹದ ಹಿಂಬದಿಯಲ್ಲಿ ಉಂಗುರ ಬದಲಿಸಿಕೊಳ್ಳಲಿದ್ದಾರೆ.

ಅರುಣ್ ಸಾಗರ್ ಕಲಾಕುಂಚದಲ್ಲಿ ಸ್ಪೆಷಲ್ ಸೆಟ್ ತಯಾರಾಗುತ್ತೀದೆ. ಹಚ್ಚ ಹಸಿರಿನ ತಂಗಿನ ಗರಿ ಸೆಟ್ ನಲ್ಲಿ ಅದ್ದೂರಿಯಾಗಿ ಪ್ರೇರಣ ಶಂಕರ್ ಮತ್ತು ಅದ್ದೂರಿ ಹುಡುಗ ಧ್ರುವ ಸರ್ಜಾ ಎಂಗೇಜ್ಮೆಂಟ್ ನಡೆಯಲಿದೆ. ಇನ್ನೂ ಬಹದ್ದೂರ್ ಗಂಡಿನ ನಿಶ್ಚಿತಾರ್ಥ ಸೆಟ್ ಗೆ ನಟ ಅರ್ಜುನ್ ಸರ್ಜಾ, ಮತ್ತು ವರ ಧ್ರುವ ಸರ್ಜಾ ಭೇಟಿ ನೀಡಿದ್ದರು.

Next Story

RELATED STORIES