Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿಅವರನ್ನು ಚೆನ್ನೈನ ಪ್ರತಿಷ್ಠಿತ ರೇಲಾ ಇನ್‌ಸ್ಟಿಟ್ಯೂಟ್‌ ಮೆಡಿಕಲ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದಾರೆ. ಚೆನ್ನೈನ ಡಾ.ಎಲ್.ಎನ್.ಕುಮಾರ್ ಅವರು ವಿಶ್ವದಲ್ಲಿಯೇ ಅತ್ಯುತ್ತಮ ತಜ್ಞ ವೈದ್ಯರಾಗಿದ್ದು, ಅವರ ಬಳಿ ಶ್ರೀಗಳಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ.

2.ಈ ಹಿಂದೆ ಗದ್ದೆಗಿಳಿದು ನಾಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ ಇಂದು ಮತ್ತೆ ಗದ್ದೆಗಿಳಿಯಲಿದ್ದಾರೆ. ರೈತರು ಸಿಎಂರಿದಲೇ ಭತ್ತ ಕಟಾವು ಕಾರ್ಯಕ್ಕೆ ಚಾಲನೆ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಗದ್ದೆಯಲ್ಲಿ ಸಿನಿಮಾ ಸೆಟ್‌ ರೀತಿ ಭತ್ತ ಕಟಾವು ಮಾಡುವ ಪ್ರದೇಶವನ್ನು ಬಣ್ಣ ಬಣ್ಣದ ಸೆಟ್‌ಗಳನ್ನು ಹಾಕಿದ್ದಾರೆ.

3.ಬಿಜೆಪಿ ಶಾಸಕ ಸಿ.ಟಿ.ರವಿ.. ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಹಾಸನದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಸಿ.ಟಿ.ರವಿ, ಸಿಎಂ ಈ ನಡುವೆ ಮಾಧ್ಯಮದವರ ಮೇಲೆ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ ಅನ್ಸುತ್ತೆ. ತಮ್ಮ ಪರ ನ್ಯೂಸ್ ಮಾಡಬೇಕು ಎಂದುಕೊಂಡಿದ್ದಾರೆ. ಜೆಡಿಎಸ್ ಕಾರ್ಯಕರ್ತರೂ ಇದನ್ನೇ ಬಯಸಿದ್ದಾರೆ. ಸಂಯಮವನ್ನು ತೋರಬೇಕು ಎಂದ್ರು

4.ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿರುವ ಘಟನೆ ತುಮಕೂರಿನ ತಿಪಟೂರಿನ ಬನ್ಸಾಲ ಬಳಿ ನಡೆದಿದೆ. ಗಿರೀಶ್, ಯೋಗಿಶ್, ಪ್ರವೀಣ್ ಮೃತ ದುರ್ದೈವಿಗಳು. ಘಟನೆಯಲ್ಲಿ ೃಓರ್ವನಿಗೆ ಗಂಭೀರ ಗಾಯವಾಗಿದ್ದು, ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

5.ಮಹಿಳೆಯರ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಯರ ಬಟ್ಟೆ ಧರಿಸುವ ವಿಕೃತ ಕಾಮಿ ಹಾಸನದಲ್ಲಿ ಪ್ರತ್ಯಕ್ಷನಾಗಿದ್ದಾನೆ. ವಿಕೃತ ಕಾಮಿಯ ವಿಚಿತ್ರ ವರ್ತನೆಯಿಂದ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ. ಇದೇ ವೇಳೆ ಬೈಕ್ ಕದಿಯಲು ಯತ್ನಿಸಿ ಆಗದೇ ಇದಕ್ಕೆ ಬೈಕ್‌ಗೆ ಬೆಂಕಿಯಿಟ್ಟಿದ್ದಾನೆ. ವಿಕೃತ ಕಾಮಿಯ ದೃಶ್ಯಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

6.ಬಾವಿಗೆ ಬಿದ್ದ ಯುವಕನನ್ನು ರಕ್ಷಣೆ ಮಾಡಿರುವ ಘಟನೆ ಬೆಳಗಾವಿಯ ಆನಂದ ನಗರದಲ್ಲಿ ನಡೆದಿದೆ. ಬೆಳಗ್ಗೆ ಸಾಗರ್ ಮನೆ ಬಳಿಯಿದ್ದ ಬಾವಿಗೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಾಗರ್‌ನನ್ನು ರಕ್ಷಿಸಿದ್ದಾರೆ.

7.ಸ್ಥಳೀಯ ಟೋಲ್ ವಿರೋಧಿಸಿ ಉಡುಪಿಯಲ್ಲಿ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಬಂದ್ ಮಾಡಿದ್ದು, ಮಣೂರಿನಿಂದ ಮಾಬುಕಳದವರೆಗೆ ಅಂಗಡಿಗಳನ್ನು ಮುಚ್ಚಿ ಬಂದ್ ಆಚರಿಸಲಾಯ್ತು. ಬಂದ್‌ಗೆ 130ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ವು.

8.ವಿಜಯಪುರ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಮನಗೂಳಿ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಚಿವ ಎಮ್ ಸಿ ಮನಗೂಳಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಯೋಜನೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಬಡವರು ಹಾಗು ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಸಹಾಯಕಾರಿಯಾಗಿದೆ. ಅಮವಾಸೆ ದಿನ ಉದ್ಘಾಟನೆ ಮಾಡಿದರೆ ಅಶುಭ ಎನ್ನುವುದು ಸುಳ್ಳು... ಅಮವಾಸೆ ದಿನ ಒಳ್ಳೆಯ ಕಾರ್ಯ ಮಾಡಿದರೆ ಒಳಿತಾಗಲಿದೆ ಎಂದು ಹೇಳಿದ್ರು

9.ಸಚಿವ ಸಂಪುಟ ವಿಸ್ತರಣೆಯಾಗಲಿ ಬಿಡಲಿ ಡಿಸೆಂಬರ್ 22 ರ ನಂತರ ಸರಕಾರ ಪತನ ಖಚಿತ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದಿದ್ದಾರೆ. ವಿಜಯಪುರದಲ್ಲಿ ಇಂದು ಇಂದಿರಾ ಕ್ಯಾಂಟಿನ್ ಉದ್ಘಾಟನೆ ಬಳಿಕ ಮಾತನಾಡಿದ ಅವ್ರು, ಸಿದ್ದರಾಮಯ್ಯ ಡಿಸೆಂಬರ್ 22ರ ಗಡುವು ನೀಡಿರುವುದು ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಮೋಸ ಮಾಡುವ ತಂತ್ರಗಾರಿಕೆ ಎಂದು ವ್ಯಂಗ್ಯವಾಡಿದ್ರು. ದೇವೇಗೌಡರ ಮನೆತನ ಮೊದಲಿಂದಲೂ ಮುಹೂರ್ತ ನೋಡಿಯೇ ಕೆಲಸ ಮಾಡುತ್ತದೆ. ಮುಂದೆ ಧನುರ್ಮಾಸ ಬರುವುದರಿಂದ ಬೆಳಗಾವಿ ಅಧಿವೇಶನ ಪಾರು ಮಾಡಲು ಈ ತಂತ್ರ ಹೆಣೆಯಲಾಗಿದೆ ಎಂದ್ರು. ಹೆಚ್. ಡಿ. ಕುಮಾರಸ್ವಾಮಿ ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕೂರು, ಚಾಮರಾಜನಗರ, ಬೆಂಗಳೂರಿಗೆ ಮಾತ್ರ ಮುಖ್ಯಮಂತ್ರಿ ಆಗಿದ್ದಾರೆ. ಅವರ ದೃಷ್ಟಿಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಕಾಣುವುದೇ ಇಲ್ಲ. ಉತ್ತರ ಕರ್ನಾಟಕವನ್ನು ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಈ ಭಾಗದ ಜನ ಮತ್ತು ರೈತರು ದಂಗೆ ಏಳುವುದು ನಿಶ್ಚಿತ ಎಂದ್ರು

10.20ಕ್ಕೂ ಹೆಚ್ಚು ಹಾವುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕೊಡಿ ತಾಲೂಕಿನ ಇಂಗಳಿ ಹೊರವಲಯದಲ್ಲಿ ನಡೆದಿದೆ. ರೈತ ಮಹಾದೇವ ಎಂಬುವರ ಹೊಲದಲ್ಲಿ ಹಾವುಗಳು ಸಾವನ್ನಪ್ಪಿವೆ. ಎರಡೂವರೆ ತಿಂಗಳಿಂದ ಪೈಪ್‌ಲೈನ್ ಬಂದ್ ಆಗಿತ್ತು. ಜಮೀನಿಗೆ ನೀರು ಹಾಯಿಸಲು ಪೈಪ್ ತೆಗೆದಾಗ ಸತ್ತ ಹಾವುಗಳು ಸಿಕ್ಕಿವೆ.

11.ಚುಚ್ಚು ಮದ್ದು ನೀಡಿದ ಬಳಿಕ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದ ಕೆ.ಎಂ ದೊಡ್ಡಿ ಸಮೀಪದ ಕಾಡುಕೊತ್ತನಹಳ್ಳಿಯಲ್ಲಿ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಮಂಜುಳಾ ನಿನ್ನೆ ಚುಚ್ಚುಮದ್ದು ನೀಡಿದ್ರು. ಇದ್ರಿಂದ ಅಸ್ವಸ್ಥಗೊಂಡ ಮಗು ಬೆಳಗ್ಗೆ ಸಾವನ್ನಪ್ಪಿದೆ. ವೈದ್ಯರೇ ಕಾರಣ ಅಂತ ಪೋಷಕರು ಪ್ರತಿಭಟನೆ ಮಾಡಿದ್ರು

12.600ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪೋಸ್ಟ್ ಮಾಸ್ಟರ್ ಹಣ ನೀಡದೇ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡಿನ ಹುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೋಸ್ಟ್ ಮಾಸ್ಟರ್ ಪ್ರಭುಸ್ವಾಮಿ ವಂಚನೆ ಮಾಡಿದ್ದಾನೆ. ವೃದ್ದಾಪ್ಯ ವೇತನ, ವಿಧವಾ ವೇತನ ಅಂಗವಿಕಲ ವೇತನ ಮನಸ್ವಿನಿ ಯೋ ಬೆಸ್ಕಾಂ ಜೂನಿಯರ್ ಇಂಜಿನಿಯರ್‌ಗೆ ರೈತನಿಂದ ಕಪಾಳ ಮೊಕ್ಷ ಮಾಡಿರುವ ಘಟನೆ ನಡೆದಿದೆ.

13.ಚಿತ್ರದುರ್ಗ ತಾಲ್ಲೂಕು ಪಂಡ್ರಹಳ್ಳಿ ಗ್ರಾಮದ ಬೆಸ್ಕಾಂ ಕಚೇರಿ ಬಳಿ ಘಟನೆ ನಡೆದಿದ್ದು, ಟ್ರಾನ್ಸ್ ಪರ್ಮರ್ ಆಯಿಲ್ ಲೋಡ್ ಮಾಡಲು ವಿದ್ಯುತ್ ತೆಗೆದಿದ್ದ ಹಿನ್ನೆಲೆ ಗಲಾಟೆಯಾಗಿದೆ. ಈ ವೇಳೆ ಜಗಳ ತಾರಕಕ್ಕೇರಿ ಕಪಾಳ ಮೋಕ್ಷ ಮಾಡಿದ್ದಾರೆ.ಜನೆ ಸೇರಿದಂತೆ ಹಲವು ಯೋಜನೆಗಳ ಹಣಕ್ಕೆ ಕನ್ನ ಹಾಕಿದ್ದಾನೆ.

14.ಆಕಸ್ಮಿಕವಾಗಿ ವಿದ್ಯುತ್ ಅವಘಡ ಸಂಭವಿಸಿ ಮೊಬೈಲ್ ಟವರ್ ಹೊತ್ತಿ ಉರಿದಿರುವ ಘಟನೆ ಮೈಸೂರು ಜಿಲ್ಲೆ ಕೆಆರ್‌ನಗರದಲ್ಲಿ ನಡೆದಿದೆ. ಏರ್ಟೆಲ್ ಹಾಗೂ ಡೊಕೋಮೋ ಕಂಪನಿಗೆ ಸೇರಿದ ಮೊಬೈಲ್ ಟವರ್ ಹೊತ್ತಿ ಉರಿದಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ರು. ಇನ್ನು ಘಟನೆ ಸಂಬಂಧ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

15.ಮುಂಬರುವ ಪ್ರವಾಸದಲ್ಲಿ ಹೊನಲು ಬಳಕಿನ ಟೆಸ್ಟ್ ಪಂದ್ಯ ಆಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐಗೆ ಮನವಿ ಮಾಡಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಕೆವಿನ್ ರೋಬರ್ಟ್, ಹೊನಲು ಬೆಳಕಿನಲ್ಲಿ ಟೆಸ್ಟ್ ಪಂದ್ಯ ವನ್ನ ಪಿಂಕ್ ಚೆಂಡಿನಲ್ಲಿ ಆಡಲು ವಿರೋಧಿಸುತ್ತಿರುವ ಬಿಸಿಸಿಐ ತನ್ನ ನುಲುವನ್ನ ಪರಿಶೀಲಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಬಿಸಿಸಿಐ ನಮ್ಮ ಮನವಿಯನ್ನ ಒಪ್ಪಿದರೆ ಅಡಿಲೇಡ್ ಕ್ರೀಡಾಂಗಣವನ್ನ ಖಾಯಂ ಆಗಿ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಮೀಸಲಿಡಲಾಗುವುದೆಂದು ಹೇಳಿದ್ದಾರೆ

16.ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್​ಶಿಪ್​ಗಳು ರೈಲಿನ ಟಾಯ್ಲೆಟ್​ ರೂಮ್ ಪಕ್ಕ ಸುಮಾರು 36 ಗಂಟೆಗಳ ಕಾಲ ಪ್ರಯಾಣ ಮಾಡಿದ ಶೋಚನೀಯ ಘಟನೆ ನಡೆದಿದೆ. ಮಹಾರಾಷ್ಟ್ರದ ರಾಜ್ಯ ಮಟ್ಟದ ಪುರುಷ ಮತ್ತು ಯುವತಿಯರನ್ನೊಳಗೊಂಡ ಕುಸ್ತಿಪಟುಗಳ ತಂಡ ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿ ನಡೆದ ಕುಸ್ತಿ ಟೂನಿರ್ಯಲ್ಲಿ ಭಾಗವಹಿಸಿ ವಿವಿಧ ವಿಭಾಗದಲ್ಲಿ ಪದಕಗಳನ್ನ ಗೆದ್ದಿತ್ತು. ಬರುವಾಗ ರೈಲಿನ ಟಾಯ್ಲೆಟ್​ ಪಕ್ಕ ಕುಳಿತು ಪ್ರಯಾಣ ಮಾಡಿದ ಬಗ್ಗೆ ಕ್ರೀಡಾಭಿಮಾಣಿಗಳು ಮಹಾರಾಷ್ಟ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

17.ಟೀಂ ಇಂಡಿಯಾದ ಘಾತಕ ವೇಗಿ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಎರಡನೇ ದಿನದಾಟದ ಪಂದ್ಯದಲ್ಲಿ ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಮಿಂಚಿದ್ರು. ಆಸಿಸ್​ಗೆ ಆರಂಭಿಕ ಆಘಾತ ಕೊಟ್ಟ ಡೆಲ್ಲಿ ವೇಗಿ ಆರಂಭದಲ್ಲಿ ಆ್ಯರಾನ್ ಫಿಂಚ್ ಮತ್ತು ನಾಯಕ್ ಟಿಮ್​ ಪೇನ್ ಅವರುಗಳ ವಿಕೆಟ್ ಪಡೆದು ಮಿಂಚಿದ್ರು.

18.ಟೀಮ್​ ಇಂಡಿಯಾ ಬ್ಯಾಟಿಂಗ್​ ಸೆನ್ಸೆಷನ್​, ಪೃಥ್ವಿ ಶಾ ಸದ್ಯ ಗಾಯಗೊಂಡಿದ್ದು ಮೊದಲ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದಾರೆ. ಅಭ್ಯಾಸ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಪೃಥ್ವಿ, ಚೇತರಿಸಿಕೊಳ್ಳುತ್ತಿದ್ದು, ಮೆಲ್ಬೋರ್ನ್​​ನಲ್ಲಿ ನಡೆಯಲಿರುವ ಬಾಕ್ಸಿಂಗ್​​ ಡೇ ಟೆಸ್ಟ್​ ವೇಳೆಗೆ ತಂಡ ಸೇರಿಕೊಳ್ಳುವುದು ಕನ್ಫಾಮ್​ ಎನ್ನಲಾಗುತ್ತಿದೆ. ಸದ್ಯ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿರುವ ಪೃಥ್ವಿ, ಇದೇ 14ರಿಂದ ಪರ್ತ್​​​​ನಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್​ ವೇಳೆಗೆ ಅಂಗಳಕ್ಕಿಳಿಯಲು ಸಜ್ಜಾಗಲಿದ್ದಾರೆ ಎನ್ನಲಾಗುತ್ತಿದೆ

19.ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ಕೊಡಬೇಕು ಅಂತಾ ಹೋರಾಟ ನಡೆದಾಯ್ತು. ಶನಿ ಸಿಂಗ್ನಾಪುರದಲ್ಲೂ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕೊಡಬೇಕು ಅಂತಾ ಹೋರಾಟಗಳು ನಡೆದಾಯ್ತು. ಇದೀಗ ದೆಹಲಿಯಲ್ಲಿ ಹಜರತ್ ನಿಜಾಮುದ್ದೀನ್ ಅಲಿಯಾ ದರ್ಗಾಕ್ಕೂ ಮಹಿಳೆಯರಿಗೆ ಪ್ರವೇಶ ನೀಡ್ಬೇಕು ಅನ್ನೋ ಕೂಗೆದ್ದಿದೆ. ಪುಣೆ ಮೂಲದ ಯುವ ವಕೀಲೆಯೊಬ್ಬರು ದೆಹಲಿ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದಾರೆ

20.ಹೊಸದಾಗಿ ಮದುವೆಯಾಗಿರೋ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಏಷ್ಯಾದ ಸೆಕ್ಸೆಯೆಸ್ಟ್ ವುಮೆನ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿ, ಮತ್ತೆ ಸುದ್ದಿಯಲ್ಲಿದ್ದಾರೆ.. ಯುಕೆ ಮೂಲದ ಈಸ್ಟರ್ನ್ ಐ ವೀಕ್ಲಿ ವಾರ್ಷಿಕ ಸರ್ವೇ ನಡೆಸಿದ್ದು, 50 ಸೆಕ್ಸಿಯೆಸ್ಟ್​ ಏಷಿಯನ್ ಮಹಿಳೆಯರ ಪಟ್ಟಿ ಸಿದ್ಧಪಡಿಸಿದೆ.. ಪಿಗ್ಗಿಯನ್ನು ಹಿಂದಿಕ್ಕಿ ಡಿಪ್ಪಿ ಟಾಪ್​ ಒನ್ ಸೆಕ್ಸಿಯೆಸ್ಟ್ ವುಮೆನ್ ಆಗಿದ್ದಾರೆ. ಇನ್ನು ಪ್ರಿಯಾಂಕಾ ಚೋಪ್ರಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ

21.ದಿ ವಿಲನ್ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ ಜೋಗಿ ಪ್ರೇಮ್​, ಹೊಸ ವರ್ಷಕ್ಕೆ ಮುಂದಿನ ಸಿನಿಮಾ ಅನೌನ್ಸ್ ಮಾಡೋದಾಗಿ ಹೇಳಿದ್ದಾರೆ.. ಪ್ರೇಮ್​ ನಿರ್ದೇಶನದಲ್ಲಿ ಶಿವಣ್ಣ- ಸುದೀಪ್ ಅಭಿನಯದ ದಿ ವಿಲನ್​ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದು ಗೊತ್ತೇಯಿದೆ.. ನಿನ್ನೆ ಸಿನಿಮಾ 50 ದಿನ ಪೂರೈಸಿದ ಸಂಭ್ರಮದಲ್ಲಿ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿರೋ ಪ್ರೇಮ್, ಹೊಸ ವರ್ಷಕ್ಕೆ ಹೊಸ ಸಿನಿಮಾ ಘೋಷಣೆ ಮಾಡೋದಾಗಿ ಬರೆದುಕೊಂಡಿದ್ದಾರೆ.. ದಿ ವಿಲನ್ ನಂತ್ರ ಪ್ರೇಮ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ..

22.ತಮಿಳಿನ ಸೂಪರ್ ಹಿಟ್ 96 ಸಿನಿಮಾವನ್ನ ಕನ್ನಡದಲ್ಲಿ ರೀಮೇಕ್ ಮಾಡೋ ಸುದ್ದಿ ಇತ್ತೀಚೆಗೆ ಹೊರಬಿದ್ದಿತ್ತು.. ಸದ್ದಿಲ್ಲದೇ ಬಸವೇಶ್ವರ ನಗರದ ದೇವಸ್ಥಾನವೊಂದರಲ್ಲಿ ಸಿನಿಮಾ ಮುಹೂರ್ತ ನೆರವೇರಿಸಲಾಗಿದೆ.. ಕನ್ನಡದಲ್ಲಿ ಚಿತ್ರಕ್ಕೆ 99 ಅನ್ನೋ ಟೈಟಲ್​ ಫೈನಲ್ ಮಾಡಿದ್ದು, ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ.. ನಿರ್ಮಾಪಕ ಕೋಟಿ ರಾಮು 99 ಚಿತ್ರಕ್ಕೆ ಹಣ ಹಾಕಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ಧಾರೆ

23.ರಾಜ್ಯಾದ್ಯಂತ ಆರೆಂಜ್ ಮತ್ತು ಭೈರವಗೀತ ಸಿನಿಮಾಗಳು ರಿಲೀಸ್​ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿವೆ.. ಗೋಲ್ಡನ್​ ಸ್ಟಾರ್ ಗಣೇಶ್​ ಕಾಮಿಡಿ, ಆಕ್ಷನ್, ಎಮೋಷನ್ ಪ್ಯಾಕೇಜ್​ ಆರೆಂಜ್ ರುಚಿಗೆ ಖುಷಿಯಾಗಿದ್ದಾರೆ.. 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಆರೆಂಜ್ ಸಿನಿಮಾ ತೆರೆಗಪ್ಪಳಿಸಿದೆ.. ಮತ್ತೊಂದ್ಕಡೆ ರಾಮ್​ ಗೋಪಾಲ್ ವರ್ಮಾ ಸಾರಥ್ಯ ಭೈರವ ಗೀತ ಸಿನಿಮಾದಲ್ಲಿ ಡಾಲಿ ಧನಂಜಯ ಅಬ್ಬರಿಸಿದ್ದಾರೆ..

24.ಕೆಜಿಎಫ್​ ಸಿನಿಮಾದ ಸಲಾಂ ರಾಕಿ ಭಾಯ್ ಸಾಂಗ್ ಟೀಸರ್ ರಿಲೀಸ್​ ಆಗಿ ಧೂಳೆಬ್ಬಿಸಿದೆ.. ರೆಟ್ರೋ ಸ್ಟೈಲ್​ನಲ್ಲಿ ಮುಂಬೈ ಡಾನ್ ಅವತಾರದಲ್ಲಿ ಯಶ್​ ಗಮನ ಸೆಳೆದಿದ್ದಾರೆ.. ಚಿತ್ರದಲ್ಲಿ ಇದು ಯಶ್ ಇಂಟ್ರೋಡಕ್ಷನ್​ ಸಾಂಗ್.. ರವಿಬಸ್ರೂರು ಮ್ಯೂಸಿಕ್​ನ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಗೀಚಿದ್ದು, ರಾಕಿ ಲುಕ್ಸ್​​​, ಮ್ಯಾನರಿಸಂನ ಹೈಲೆಟ್ ಮಾಡಿ ಶೂಟ್ ಮಾಡಲಾಗಿದೆ.. ಸಿಕ್ಕಾಪಟ್ಟೆ ಸ್ಟೈಲಿಶ್ ಮತ್ತು ಕಲರ್​​ಫುಲ್ಲಾಗಿ ಈ ಮಾಸ್ ಸಾಂಗ್ ಮೂಡಿ ಬಂದಿದೆ

25.ವಿಶ್ವ ಮಾರುಕಟ್ಟೆಯಲ್ಲಿ ತನ್ನದೇ ಆದ ಮಾನ್ಯತೆ ಹೊಂದಿರುವ ಒನ್​ಪ್ಲಸ್ ಸ್ಮಾರ್ಟ್​ಫೋನ್ ಸದ್ಯದಲ್ಲೇ 5G ಸಾಮರ್ಥ್ಯದ ಮೊಬೈಲ್ ರಿಲೀಸ್ ಮಾಡಲಿದೆ. ಒನ್​ಪ್ಲಸ್ 5G ಸಾಮರ್ಥ್ಯದ ಮೊಬೈಲ್​ನಲ್ಲಿ ಕ್ವಾಲಕಂ ಸ್ನಾಪ್​ಡ್ರಾಗನ್ 855 ಇರಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. 5Gಯ ವೇಗ ಸದ್ಯದ 4G ವೇಗಕ್ಕಿಂತ 50ರಿಂದ ನೂರು ಪಟ್ಟು ಹೆಚ್ಚಿರಲಿದೆ ಎನ್ನುವುದು ಸಂಸ್ಥೆಯ ಹೇಳಿಕೆ.

26.ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿ ಕ್ರಿಸ್ಟಿಯನ್​ ಮೈಕಲ್​​ನನ್ನು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ಸಿಬಿಐ ವಿಚಾರಣೆ ವೇಳೆ 17 ಲಕ್ಷದ 66 ಸಾವಿರ ರೂಪಾಯಿ ಲಂಚ ನೀಡಿರುವ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಆತನ ಡೈರಿ ಒಳಗೆ Fam ಹಾಗೂ bur ಎಂಬ ಕೋಡ್‌ವರ್ಡ್‌ ಬಳಸಿರುವ ಬಗ್ಗೆ ಮಿಲ್ಯಾನ್ ಕೋರ್ಟ್‌ ವರದಿಯಿಂದ ಬಹಿರಂಗವಾಗಿದೆ.

27.ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಕೃಷಿ ರಫ್ತು ನೀತಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. 2022ರ ವೇಳೆಗೆ ರೈತರ ಆದಾಯದಲ್ಲಿ ದುಪ್ಪಟ್ಟು ಹೆಚ್ಚಳ ಮಾಡುವ ಕೃಷಿ ರಫ್ತು ನೀತಿ ಬಿಲ್​ನ್ನು ​ ಕೇಂದ್ರ ನಿನ್ನೆ ಪಾಸ್ ಮಾಡಿದೆ. ಈ ನೀತಿಯ ಅನ್ವಯ 2022ರ ವೇಳೆಗೆ ರಾಷ್ಟ್ರೀಯ ಮಟ್ಟದಲ್ಲಿ ಕೃಷಿ ರಫ್ತನ್ನ ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ.

28.ಕೇಂದ್ರ ಸಚಿವ ನಿತಿನ್‌ ಗಡ್ಕರಿ ವೇದಿಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಆಹ್ಮದ್‌ ನಗರದಲ್ಲಿರುವ ಮಹಾತ್ಮಾ ಪುಲೆ ಕೃಷಿ ವಿದ್ಯಾಪೀಠದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಎದ್ದು ನಿಂತಾಗ ಸಚಿವ ಗಡ್ಕರಿ ಕುಸಿದು ಬಿದ್ದಿದ್ದಾರೆ. ಕೂಡಲೆ ಪಕ್ಕದಲ್ಲಿದ್ದ ಗಣ್ಯರು ಮತ್ತು ಭದ್ರತಾ ಸಿಬಂದಿಗಳು ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ.

29.16 ವರ್ಷದ ಬಾಲಕಿಯೊಬ್ಬಳ ಮೇಲೆ ತಂದೆ ಸೇರಿ 20 ಮಂದಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ. ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದು, ನವೆಂಬರ್ 13ರಂದು ನಾಲ್ವರು ಕಾಮುಕರು ಈಕೆಯನ್ನು ಸಮೀಪದ ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ನಗ್ನ ದೇಹದ ಫೋಟೊ ತೋರಿಸಿ ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.

30.ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯಲು ಬಂದು ಬೈಕ್‌ಗೆ ಬೆಂಕಿ ಹಾಕಿರುವ ಘಟನೆ ಹಾಸನದ ವಿದ್ಯಾನಗರದ ನೇತಾಜಿ ಶಾಲೆ ಸಮೀಪ ನಡೆದಿದೆ. ಸುನೀಲ್ ಎಂಬುವರಿಗೆ ಸೇರಿದ ಹೋಂಡಾ ಶೈನ್ ಬೈಕ್‌ಗೆ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂದ ಬಡಾವಣೆ ಪೊಲೀಸ್ ಠಾಣಾಯಲ್ಲಿ ಕೇಸ್ ದಾಖಲಾಗಿದೆ.

31.ಪತಂಜಲಿ ಪ್ರೊಡೆಕ್ಟ್ ಬೇಡ ಅಂದಿದಕ್ಕೆ ಕಿರಣಾ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ, ಕಲಬುರಗಿಯಲ್ಲಿ ನಡೆದಿದೆ.. ಪತಂಜಲಿ ಪ್ರೊಡೆಕ್ಟ್ ಬಗ್ಗೆ ಮಾರಾಟಗಾರ ಅಂಗಡಿಯವನಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಫೋನಲ್ಲೇ ಜಗಳವಾಗಿದೆ.. ಇದರಿಂದ ರೊಚ್ಚಿಗೆದ್ದ ಸೇಲ್ಸ್ ಮ್ಯಾನ್ ತನ್ನ ಸ್ನೇಹಿತರ ಜೊತೆ ಅಂಗಡಿಗೆ ಆಗಮಿಸಿ ನನಗೆ ನಿಂದಿಸ್ತಿಯಾ ಅಂತಾ ಹಲ್ಲೆ ಮಾಡಿದ್ದಾನೆ.

32.ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ನಡುವೆ ರಥಯಾತ್ರಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ, ಯಾರಿಂದಲೂ ರಥಯಾತ್ರೆ ತಡೆಯಲು ಸಾಧ್ಯವಿಲ್ಲ. ನಾವು ರಥಯಾತ್ರೆ ನಡೆಸುತ್ತೇವೆ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರುವ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ. ರಥಯಾತ್ರೆ ರದ್ದಾಗಿಲ್ಲ, ದಿನಾಂಕ ಮುಂದೂಡಲಾಗಿದೆ. ರಥಯಾತ್ರೆ ನಡೆಯಲಿದೆ. ನಾವು ಕಾನೂನಿನ ಪ್ರಕಾರವೇ ಯಾತ್ರೆ ಆಯೋಜಿಸುತ್ತೇವೆ. ಯಾತ್ರೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಸಂಚರಿಸಲಿದೆ. ನಾನು ನಾಳೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಈ ಕುರಿತು ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ. ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಕಾರಣ ನೀಡಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿ ಕೋಲ್ಕತ ಹೈಕೋರ್ಟ್‌ಗೆ ಯಾತ್ರೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಬಂಗಾಳದ ಕೊಚ್ಬೀಹಾರ್‌ನಿಂದ ಬಿಜೆಪಿ ನಾಳೆ ಯಾತ್ರೆಯನ್ನು ನಡೆಸುವಂತಿಲ್ಲ ಎಂದು ಆದೇಶಿಸಿತ್ತು. ಬಿಜೆಪಿ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರಿಂದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ.

33.ಛತ್ತೀಸ್‌ಗಡದಲ್ಲಿ ಬಹುತೇಕ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಬಿಜೆಪಿ ನಡುವೆ ನೆಕ್‌ ಟು ನೆಕ್‌ ಫೈಟ್‌ ಇದೆ. ಆದ್ರೆ, ಟುಡೆಸ್ ಚಾಣಾಕ್ಯ ಪ್ರಕಾರ ಕಾಂಗ್ರೆಸ್‌ಗೆ ಅಧಿಕಾರ ಸಿಗುವ ಸಾಧ್ಯತೆ ಇದೆ. ಈ ಸಮೀಕ್ಷೆ ಪ್ರಕಾರ ಬಿಜೆಪಿ 36ರಲ್ಲಿ ಜಯ ಗಳಿಸಿದ್ರೆ, ಕಾಂಗ್ರೆಸ್‌ 50ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ. ಇತರರ 4ರಲ್ಲಿ ಜಯ ಗಳಿಸಲಿದ್ದಾರೆ. ಟೈಮ್ಸ್‌ ನೌ ಪ್ರಕಾರ ಬಿಜೆಪಿ 46, ಕಾಂಗ್ರೆಸ್‌ 35, ಇತರರು 9ರಲ್ಲಿ ಜಯ ಸಾಧಿಸಲಿದ್ದಾರೆ. ಸಿವೋಟರ್‌ ಪ್ರಕಾರ ಬಿಜೆಪಿ 39, ಕಾಂಗ್ರೆಸ್‌ 46, ಇತರರು 5ರಲ್ಲಿ ಗೆಲುವು ದಾಖಲಿಸಿದ್ದಾರೆ. ನ್ಯೂಸ್‌ ನೇಷನ್‌ ಪ್ರಕಾರ ಬಿಜೆಪಿ 40, ಕಾಂಗ್ರೆಸ್‌ 42 ಮತ್ತು 8ರಲ್ಲಿ ಇತರರು ಗೆದ್ದು ಬೀಗಲಿದ್ದಾರೆ. ಜನ್‌ ಕಿ ಬಾತ್ ಪ್ರಕಾರ ಬಿಜೆಪಿ 44, ಕಾಂಗ್ರೆಸ್‌ 40 ಮತ್ತು ಇತರರು 6ರಲ್ಲಿ ಜಯ ಗಳಿಸಲಿದ್ದಾರೆ.

34.ಮೈತ್ರಿ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇವರಿಬ್ಬರೇ ಸಾಕು. ಅಪರೇಷನ್ ಕಮಲವೇನು ಬೇಕಾಗಿಲ್ಲ ಎಂದಿದ್ದಾರೆ ಬಿಜೆಪಿ ಶಾಸಕ ಆರ್.ಅಶೋಕ್. ಚಾಮರಾಜನಗರ ಜಿಲ್ಲಾ ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ಅವರು ಕೊಳ್ಳೆಗಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ. ಅದಕ್ಕಾಗಿಯೇ ಟೆಂಪಲ್ ರನ್ ಮಾಡ್ತಾ ಇರೋದು. ಅವರಿಗೆ ರಾಹು ಕಾಲ ಬಂದಿದೆ ಎಂದು ಛೇಡಿಸಿದ್ದಾರೆ.

35.ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹಾರಾಷ್ಟ್ರದಲ್ಲಿ ನಡೆದ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ಅಹಮದ್ ನಗರದ ರಹುರಿಯಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದ ಸಮಾರಂಭದಲ್ಲಿ ಭಾಗವಹಿಸಿದ್ದ ಗಡ್ಕರಿ ರಾಷ್ಟ್ರಗೀತೆ ಹಾಡುವ ವೇಳೆ ಇತರೆ ಗಣ್ಯರೊಡನೆ ವೇದಿಕೆ ಮೇಲೆ ನಿಂತಿದ್ದಾಗ ಕುಸಿದು ಬಿದ್ದಿದ್ದಾರೆ. ಲೋ ಶುಗರ್‌ ಕಾರಣದಿಂದಾಗಿ ತೀವ್ರ ನಿತ್ರಾಣದಿಂದ ಕಣ್ಣಿಗೆ ಮಂಜು ಕವಿದಂತಾಗಿ ಕುಸಿದಾಗ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಧಾವಿಸಿ ಉಪಚರಿಸಿದರು. ಮಹಾರಾಷ್ಟ್ರ ಗವರ್ನರ್ ಸಿ.ವಿ.ರಾವ್ ಮತ್ತು ಇತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಗಡ್ಕರಿ ಮುಖ್ಯ ಅತಿಥಿಗಳಾಗಿದ್ದರು.

36.ಸಿಎಂ ಕುಮಾರಸ್ವಾಮಿಯ ಟೆಂಪಲ್ ರನ್‌ ಟೀಕಿಸಿರುವ ಬಿಜೆಪಿಯ ಜಗದೀಶ್‌ ಶೆಟ್ಟರ್, ಕುಮಾರಸ್ವಾಮಿ ಅಧಿಕಾರ ಉಳಿಸಿಕೊಳ್ಳಲು ಗುಡಿ ಗುಂಡಾರ ಸುತ್ತುತ್ತಿದ್ದಾರೆ. ಟೆಂಪಲ್ ರನ್ ಬಿಟ್ಟು ರೈತರ ಕಡೆ ಬರಬೇಕೆಂದು ಆಗ್ರಹಿಸಿದ್ದಾರೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದ ಬರೀ ದೇವಸ್ಥಾನ ಸುತ್ತಿವುದೇ ಅವರ ಸಾಧನೆಯಾಗಿದೆ. ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ರೈತರ ಸಾಲಮನ್ನಾ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದ ಅವರು, ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ನಾವು ಯಾರನ್ನೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

37.ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ ಅಧಿಕಾರ ಈ ಬಾರಿ ಕೊನೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿದೆ. 15 ವರ್ಷಗಳ ನಂತರ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಯಾವಾವ ಸಮೀಕ್ಷೆಗಳು ಏನೇನು ಹೇಳಿವೆ ಅಂತ ನೋಡೋದಾದ್ರೆ, ಚಾಣಾಕ್ಯ ಸಮೀಕ್ಷೆ ಪ್ರಕಾರ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಬಿಜೆಪಿ 103 ಕ್ಷೇತ್ರಗಳಲ್ಲಿ ಜಯ ಗಳಿಸಿದ್ರೆ, ಕಾಂಗ್ರೆಸ್‌ 125ರಲ್ಲಿ ಜಯ ದಾಖಲಿಸಲಿದೆ ಅಂತ ತಿಳಿದುಬಂದಿದೆ. ಇತರರು 2ರಲ್ಲಿ ಜಯ ಗಳಿಸಲಿದ್ದಾರೆ. ಟೈಮ್ಸ್‌ ನೌ ಪ್ರಕಾರ ಬಿಜೆಪಿ 126, ಕಾಂಗ್ರೆಸ್‌ 89, ಇತರರು 15ರಲ್ಲಿ ಜಯ ಗಳಿಸಲಿದ್ದಾರೆ. ಟೈಮ್ಸ್‌ ನೌ ಪ್ರಕಾರ ಬಿಜೆಪಿಗೆ ಅಧಿಕಾರಕ್ಕೆ ಮತ್ತೆ ಪ್ರಾಪ್ತವಾಗಿದೆ. ಜನ್ ಕಿ ಬಾತ್‌ ಪ್ರಕಾರ ಬಿಜೆಪಿ 118, ಕಾಂಗ್ರೆಸ್‌ 105 ಮತ್ತು ಇತರುರ 07ರಲ್ಲಿ ಜಯ ಗಳಿಸಲಿದ್ದಾರೆ. ಆ್ಯಕ್ಸಿಸ್‌ ಪ್ರಕಾರ ಬಿಜೆಪಿ 111, ಕಾಂಗ್ರೆಸ್‌ 113 ಮತ್ತು ಇತರರು 06ರಲ್ಲಿ ಜಯ ಸಾಧಿಸಲಿದ್ದಾರೆ. ನೇತಾ ಪ್ರಕಾರ ಬಿಜೆಪಿ 106, ಕಾಂಗ್ರೆಸ್‌ 112 ಮತ್ತು ಇತರರು 12ರಲ್ಲಿ ಜಯದ ನಗೆ ಬೀರಲಿದ್ದಾರೆ. ಎಬಿಪಿ ಸಮೀಕ್ಷೆ ಪ್ರಕಾರ ಬಿಜೆಪಿ 94, ಕಾಂಗ್ರೆಸ್‌ 126 ಮತ್ತು ಇತರರು 10ರಲ್ಲಿ ಜಯ ಸಾಧಿಸಲಿದ್ದಾರೆ. ಎಬಿಪಿ ಪ್ರಕಾರ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಸೀಗಲಿದೆ.

38.ಈಶಾನ್ಯ ಭಾರತದ ರಾಜ್ಯಗಳಲ್ಲಿ ಮಿಜೋರಾಂ ಕಾಂಗ್ರೆಸ್‌ನ ಕೊನೆಯ ನೆಲೆ. ಇದನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಲಿದೆ ಅಂತ ಸಿ ವೋಟರ್‌ ಸಮೀಕ್ಷೆ ಹೇಳಿದೆ. ಆದ್ರೆ, ಬಿಜೆಪಿ ಒಂದೂ ಸೀಟೂ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸಲಿದ್ದಾರೆ. ಕಾಂಗ್ರೆಸ್‌ 16ರಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ. ಇತರರು 06ರಲ್ಲಿ ಜಯ ಗಳಿಸಲಿದ್ದಾರೆ ಅಂತ ಸಮೀಕ್ಷೆ ಹೇಳಿದೆ.

39.ಡಿಸೆಂಬರ್ 11ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಉಭಯ ಸದನಗಳ ಕಲಾಪ ಸುಗಮವಾಗಿ ನಡೆಸುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಡಿಸೆಂಬರ್ 10ರಂದು ಸರ್ವಪಕ್ಷ ಸಭೆ ಕರೆದಿದೆ. ಸೋಮವಾರ ನಡೆಯುವ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಅಜೆಂಡಾವನ್ನು ಪ್ರತಿಪಕ್ಷಗಳ ಮುಂದಿಟ್ಟು, ಸಹಕಾರ ಕೋರಲಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಪೂರ್ಣ ಪ್ರಮಾಣದ ಅಧಿವೇಶನ ಇದಾಗಿದ್ದು, ಡಿಸೆಂಬರ್ 11ರಿಂದ ಜನವರಿ 8ರವರೆಗೆ ನಡೆಯಲಿದೆ. ಚಳಿಗಾಲದ ಅಧಿವೇಶನ ಆರಂಭವಾಗುವ ದಿನವೇ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆ ನಡೆಯುವ ಸಾಧ್ಯತೆ ಇದೆ.

40.ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೇ ಅರಸ್‌ ಅವರಿಗೆ ತೀವ್ರ ಮುಖಭಂಗ ಆಗುವ ಸಾಧ್ಯತೆ ಇದೆ. ಏಕಂದ್ರೆ, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ ಅಧಿಕಾರ ಸಿಗುವ ಅಂಶ ತೆರೆದಿಟ್ಟಿವೆ. ಟೈಮ್ಸ್‌ ನೌ ಪ್ರಕಾರ ಬಿಜೆಪಿ 85, ಕಾಂಗ್ರೆಸ್‌ 105, ಇತರುರ 09 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದಾರೆ. ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ ಬಿಜೆಪಿ 93, ಕಾಂಗ್ರೆಸ್‌ 91, ಇತರರು 15ರಲ್ಲಿ ಜಯದ ಗೆಲುವಿನ ಕೇಕೇ ಹಾಕಲಿದ್ದಾರೆ. ಆ್ಯಕ್ಸಿಸ್‌ ಪ್ರಕಾರ ಬಿಜೆಪಿ 64, ಕಾಂಗ್ರೆಸ್‌ 130 ಮತ್ತು ಇತರರು 05ರಲ್ಲಿ ಜಯ ಗಳಿಸಲಿದ್ದಾರೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ಅಧಿಕಾರದ ಗದ್ದುಗೆ ಸಿಗಲಿದೆ. ನ್ಯೂಸ್ ನೇಷನ್‌ ಪ್ರಕಾರ ಬಿಜೆಪಿ 91, ಕಾಂಗ್ರೆಸ್‌ 101 ಮತ್ತು ಇತರರು 09ರಲ್ಲಿ ಜಯಗಳಿಸಲಿದ್ದಾರೆ. ಬಹುತೇಕ ಸಮೀಕ್ಷೆಗಳ ಪ್ರಕಾರ ಈ ಬಾರಿ ವಸುಂಧರಾ ರಾಜೇ ಅರಸ್‌ ವಿಶ್ರಾಂತಿಗೆ ಜಾರಲಿದ್ದಾರೆ.

41.ಸಂಪುಟ ಸರ್ಕಸ್ ಹಾಗೂ ಚಳಿಗಾಲದ ಅಧೀವೇಶನ ಹಾಗೂ ಇತ್ತೀಚ್ಚಿನ ರಾಜಕೀಯ ಬೆಳವಣಿಗೆಗಳ ಸಂಕಷ್ಟದಿಂದ ಮುಕ್ತಿ ಪಡೆಯಲು ಸಿಎಂ ಕುಮಾರಸ್ವಾಮಿ ಕುಟುಂಬ ಆರಾಧ್ಯದೈವ ಶೃಂಗೇರಿ ಶಾರದಾಂಬೆಯ ಮೋರೆ ಹೋಗಿದೆ. ಕಳೆದ 22 ದಿನಗಳ ಹಿಂದ ಸಚಿವ ಹೆಚ್.ಡಿ.ರೇವಣ್ಣ ಚಾಲನೆ ನೀಡಿದ್ದ ಪ್ರತ್ಯಂಗೀರ ಯಾಗದ ಪೂರ್ಣಾಹುತಿಯಲ್ಲಿ ಇಂದು ಕುಮಾರಸ್ವಾಮಿ ಭಾಗಿಯಾಗಿದ್ರು. ನಿನ್ನೆ ಸಂಜೆ ಶೃಂಗೇರಿಗೆ ಆಗಮಿಸಿದ್ದ ಸಿಎಂ ಶಾರದಾಂಬೆಯ ದರ್ಶನ ಪಡೆದು ಸಂಕಲ್ಪ ಮಾಡಿಕೊಂಡಿದ್ರು. ಅದ್ರಂತೆ ಇಂದು ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಮತ್ತರ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು ಪ್ರತ್ಯಂಗೀರಾ ಯಾಗದ ಪೂರ್ಣಾಹುತಿ ನಡೆಸಿದ್ರು. ನಂತರ ಶೃಂಗೇರಿ ಶ್ರೀಗಳ ಭೇಟಿ ಮಾಡಿ ಆರ್ಶಿವಾದ ಪಡೆದ್ರು.

42.2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಂತಲೇ ಹೇಳಲಾಗ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸುಳಿವು ಸಿಕ್ಕಿದೆ. ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ ಜನರು ಜೈ ಎಂದಿದ್ದಾರೆ. ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ - ಬಿಜೆಪಿ ನಡುವೆ ನೆಕ್‌ ಟು ನೆಕ್‌ ಫೈಟ್‌ ಇದೆ. ತೆಲಂಗಾಣದಲ್ಲಿ ಟೈಮ್ಸ್‌ ನೌ ಪ್ರಕಾರ ಕಾಂಗ್ರೆಸ್‌ 37, ಬಿಜೆಪಿ 7, ಟಿಆರ್‌ಎಸ್‌ 66 ಸ್ಥಾನಗಳಲ್ಲಿ ಜಯ ಗಳಿಸಲಿವೆ ಅಂತ ಸಮೀಕ್ಷೆಯಿಂದ ತಿಳಿದುಬಂದಿದೆ. ಆ್ಯಕ್ಸಿಸ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 27, ಬಿಜೆಪಿ 02, ಟಿಆರ್‌ಎಸ್‌ 85 ಮತ್ತು ಇತರರು 5 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದಾರಂತೆ. ಜನ್‌ ಕಿ ಬಾತ್‌ ಪ್ರಕಾರ ಕಾಂಗ್ರೆಸ್‌ 45, ಬಿಜೆಪಿ 5, ಟಿಆರ್‌ಎಸ್‌ 58 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ. ಸಿ ವೋಟರ್‌ ಪ್ರಕಾರ ಕಾಂಗ್ರೆಸ್‌ 53, ಬಿಜೆಪಿ 05, ಟಿಆರ್‌ಎಸ್‌ 54 ಮತ್ತು ಇತರರ 7 ಕಡೆ ಗೆಲುವು ಸಾಧಿಸಲಿದ್ದಾರೆ. ನ್ಯೂಸ್‌ ನೇಷನ್‌ ಪ್ರಕಾರ ಕಾಂಗ್ರೆಸ್‌ 53, ಬಿಜೆಪಿ 3, ಟಿಆರ್‌ಎಸ್‌ 55 ಮತ್ತು ಇತರರು 8 ಕಡೆ ಗೆಲ್ಲಲಿದ್ದಾರೆ. ನೇತಾ ಪ್ರಕಾರ ಕಾಂಗ್ರೆಸ್‌ 46, ಬಿಜೆಪಿ 06, ಟಿಆರ್‌ಎಸ್‌ 57 ಮತ್ತು ಇತರುರ 08ರಲ್ಲಿ ಜಯ ಸಾಧಿಸಲಿದ್ದಾರೆ. ಬಹುತೇಕ ಸಮೀಕ್ಷೆಯಲ್ಲಿ ಟಿಆರ್‌ಎಸ್‌ ಅಧಿಕಾರಕ್ಕೆ ಹತ್ತಿರ ಇದೆ. ಕಾಂಗ್ರೆಸ್‌ ಟಿಆರ್‌ಎಸ್‌ ಹಿಂಬಾಲಿಸುತ್ತಿದೆ. ಆದ್ರೆ, ಬಿಜೆಪಿ ಒಂದಕಿಯಲ್ಲೇ ಇದೆ.

43.ಸಚಿವ ಸಂಪುಟ ವಿಸ್ತರಣೆಯಾಗಲಿ ಬಿಡಲಿ ಡಿಸೆಂಬರ್ 22ರ ನಂತರ ಸರ್ಕಾರ ಪತನ ಖಚಿತ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಡಿಸೆಂಬರ್ 22ರ ಗಡುವು ನೀಡಿರುವುದು ಕಾಂಗ್ರೆಸ್- ಜೆಡಿಎಸ್ ಶಾಸಕರನ್ನು ಮೋಸ ಮಾಡುವ ತಂತ್ರಗಾರಿಕೆ ಎಂದು ವ್ಯಂಗ್ಯವಾಡಿದ್ರು. ದೇವೇಗೌಡರ ಮನೆತನ ಮೊದಲಿಂದಲೂ ಮುಹೂರ್ತ ನೋಡಿಯೇ ಕೆಲಸ ಮಾಡುತ್ತದೆ. ಮುಂದೆ ಶೂನ್ಯಮಾಸ ಬರುವುದರಿಂದ ಬೆಳಗಾವಿ ಅಧಿವೇಶನ ಪಾರು ಮಾಡಲು ಈ ತಂತ್ರ ಹೆಣೆಯಲಾಗಿದೆ ಎಂದ್ರು.

44.ಎರಡನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಆ್ಯರಾನ್ ಫಿಂಚ್ (0) ಮತ್ತು ಮಾರ್ಕಸ್ ಹ್ಯಾರಿಸ್ (26) ಉತ್ತಮ ಆರಂಭ ಕೊಡುವಲ್ಲಿ ಎಡವಿದ್ರು. ನಂತರ ಅಮೋಘ ಬೌಲಿಂಗ್ ದಾಳಿ ಮುಂದುವರೆಸಿದ ಆರ್​.ಅಶ್ವಿನ್ , ಉಶ್ಮಾನ್ ಖಾವಾಜಾ (28), ಶಾನ್ ಮಾರ್ಷ್​ (2) ವಿಕೆಟ್ ಪಡೆದು ಮಿಂಚಿದ್ರು. ಮಧ್ಯಮ ಕ್ರಮಾಂಕದಲ್ಲಿ ಬಂದ ಹ್ಯಾನ್ಸ್ ಕೊಮ್ (34) , ಮತ್ತು ಪ್ಯಾಟ್​ ಕಮಿನ್ಸ್ (10) ವೇಗಿ ಜಸ್​ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಟ್ರಾವೆಸ್ ಹೆಡ್ ಅಜೇಯ 61, ಮಿಶೆಲ್ ಸ್ಟಾರ್ಕ್ ಅಜೇಯ 8 ರನ್​ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

45.ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಲವ್ ಮೂಡ್ ನಲ್ಲಿ ಇದ್ದರು ಇದೀಗ ಅವರ ನಿಶ್ಚಿತಾರ್ಥಕ್ಕೆ ಅದ್ದೂರಿಯಾಗಿ ಸಕಲ ತಯಾರಿಯನ್ನು ಮಾಡಲಾಗುತ್ತಿದೆ.ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಇದೇ ಡಿಸೆಂಬರ್ 9ಕ್ಕೆ ನಟ ಧ್ರುವ ಸರ್ಜಾ ನಿಶ್ಚಿತಾರ್ಥ ಅದ್ದೂರಿಯಾಗಿ ಬನಶಂಕರಿಯ ಪುಣ್ಯಕ್ಷೇತ್ರ ಶ್ರೀಧರ್ಮಗಿರಿ ದೇವಾಲಯದಲ್ಲಿ ನಡೆಯಲಿದೆ.ಇನ್ನೂ ಹನುಮ ಭಕ್ತನಾಗಿರುವುದರಿಂದ ಧ್ರುವ ಸರ್ಜಾ, ಹನುಮಾನ್ ವಿಗ್ರಹದ ಹಿಂಬದಿಯಲ್ಲಿ ಉಂಗುರ ಬದಲಿಸಿಕೊಳ್ಳಲಿದ್ದಾರೆ.

46.ಯಶ್-ರಾಧಿಕಾ ಮಗಳಿಗೆ ದಿ.ರೆಬೆಲ್ ಸ್ಟಾರ್ ಅಂಬರೀಶ್ ಕಡೆಯಿಂದ ತೊಟ್ಟಿಲೊಂದು ಉಡುಗೊರೆಯಾಗಿ ಬಂದಿದೆ.ತಮ್ಮ ನಿಧನಕ್ಕೂ ಮುನ್ನ 1.50 ಲಕ್ಷ ರೂಪಾಯಿಯ ತೊಟ್ಟಿಲೊಂದನ್ನ ಬುಕ್ ಮಾಡಿದ್ದ ಅಂಬಿ, ಈ ವಿಷಯವನ್ನ ಸುಮಲತಾ ಮತ್ತು ಯಶ್‌ಗೂ ತಿಳಿಸಿರಲಿಲ್ಲ.

47.ರಾಜ್ಯದ ಮುಖ್ಯಮಂತ್ರಿ ಆದವರು ತಾಯಿ ಸ್ಥಾನದಲ್ಲಿರಬೇಕೇ ಹೊರತು ಮಲತಾಯಿ ಸ್ಥಾನದಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಹೇಳಿಕೆ ಬಿಡುಗಡೆ ಮೂಲಕ ತಿಳಿಸಿದ್ದಾರೆ.ನಾಟಿ ಮಾಡಿ ಭತ್ತದ ಕೊಯಿಲು ಮಾಡಲು ಹೋಗಿದ್ದರೆ ಆದರೆ ನೀವು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಾಕಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ, ಜನರಿಗೆ ಕುಡಿಯಲು ನೀರಿಲ್ಲ ಆದರೆ ಮಂತ್ರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ, ಇಂದು ನೀವು ಭತ್ತ ನಾಟಿ ಮಾಡಿ ಕೊಯಿಲಿಗೆ ಬಂದದ್ದು ನೋಡಿದರೆ ಉತ್ತರ ಕರ್ನಾಟಕದ ಬಗ್ಗೆ ಇರುವ ನಿಮ್ಮ ಮಲತಾಯಿ ಧೋರಣೆ ಅಸಹನೆ ಹುಟ್ಟಿಸುತ್ತದೆ ಮತ್ತು ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಮಲತಾಯಿ ಧೋರಣೆ, ಅಸಡ್ಡೆತನದ ಬಗ್ಗೆ ಚರ್ಚಿಸುವುದು ಅನವಶ್ಯಕ ಎನಿಸುತ್ತದೆ ಎಂದು ಪ್ರಕಟಿಸಿದ್ದಾರೆ.

48.ಕೆಲ ದಿನಗಳ ಹಿಂದಷ್ಟೇ ದೇಶಾದ್ಯಂತ ಸುದ್ದಿ ಮಾಡಿದ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗೆ ದಂಡ ವಿಧಿಸಿದೆ.ಕೆರೆ ಶುದ್ಧಿ ಮಾಡುವಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಿಫಲವಾದ ಕಾರಣ, ಸರ್ಕಾರಕ್ಕೆ 50ಕೋಟಿ ದಂಡ ಮತ್ತು ಬಿಬಿಎಂಪಿಗೆ 25ಕೋಟಿ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

49.ಡಿಸೆಂಬರ್ 19ರಿಂದ ರಾಜ್ಯ ರಾಜಕೀಯದಲ್ಲಿ ತಿಕ್ಕಾಟ ಹೆಚ್ಚಾಗಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ರಾಯಚೂರಿನಲ್ಲಿ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕಾನಾಥ್ ಗುರೂಜಿ ಹೇಳಿದ್ದಾರೆ.ಡಿಸೆಂಬರ್ 16ರಿಂದ ಧನುರ್ಮಾಸ ಆರಂಭವಾಗುವುದರಿಂದ ಒಂದೇ ಮನೆಯಲ್ಲಿ ಶನಿ ರವಿ ಇರುವುದರಿಂದ, ಪಕ್ಷದಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ.

50.ಬಳ್ಳಾರಿ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಅನಿಲ್ ಲಾಡ್‌ಗೆ ಬೆದರಿಕೆ ಕರೆ ಬಂದಿದೆ. ಬಾಂಬೆಯಿಂದ ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆ ಅನಿಲ್ ಲಾಡ್ ದೂರು ದಾಖಲಿಸಿದ್ದಾರೆ.ಬಳ್ಳಾರಿ ಗಣಿಗಾರಿಕೆ ವಿಚಾರದಲ್ಲಿ ಅನಿಲ್ ಲಾಡ್‌ಗೆ ಬೆದರಿಕೆ ಕರೆ ಬಂದಿದ್ದು, ಉದ್ಯಮಿ ಆರ್ ಶಿವಕುಮಾರ್ ಎಂಬುವವರಿಂದ ಕರೆ ಬಂದಿದೆ.

Next Story

RELATED STORIES