Top

ಕಾಂಗ್ರೆಸ್ ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತು: ಶೋಭಾ ಕರಂದ್ಲಾಜೆ

ಕಾಂಗ್ರೆಸ್ ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತು: ಶೋಭಾ ಕರಂದ್ಲಾಜೆ
X

ಶಾಸಕ ಶ್ರೀರಾಮುಲು ಪಿ.ಎ ದುಬೈ ಉದ್ಯಮಿ ಜೊತೆ ಆಪರೇಶನ್ ಕಮಲ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಳಿ ನಡೆಸಿದ್ದು, ಕಾಂಗ್ರೆಸ್ ಇಷ್ಟು ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತು. ಕಾಂಗ್ರೆಸ್ ನೇತಾರರು ತಮ್ಮ ಪಕ್ಷದ ಶಾಸಕರನ್ನೇ ನಿಯಂತ್ರಿಸದವರಾಗಿದ್ದಾರೆ. ಅದಕ್ಕಾಗಿ ಈ ಎಲ್ಲಾ ಗಿಮಿಕ್ ಗಳನ್ನು ಮಾಡುತ್ತಿದ್ದಾರೆ‌. ತಮ್ಮ ಪಕ್ಷದಲ್ಲಿನ ಲೋಪಗಳನ್ನು ಮುಚ್ಚಿಕೊಳ್ಳಲು ಹಾಗೂ ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಸಮ್ಮಿಶ್ರ ಸರ್ಕಾರ ಈ ಹುನ್ನಾರ ನಡೆಸಿದೆ ಎಂದರು.

ಸಾಧನಹೀನ ಸರ್ಕಾರ ತನ್ನ ವೈಫಲ್ಯ ಮರೆಮಾಚಲು ಹಾಗೂ ಜನರ ಗಮನ ಬೇರೆಡೆಗೆ ಸೆಳೆಯಲು ಇಂತಹ ಹೀನ ಕೃತ್ಯಕ್ಕೆ ಮುಂದಾಗಿದೆ. ನಕಲಿ ಕಾಂಗ್ರೆಸ್ಸಿಗರು ನಕಲಿ ಆಡಿಯೋ ಸೃಷ್ಟಿಸಿ ನಕಲಿ ದೂರನ್ನು ಕಾಂಗ್ರೆಸ್ಸಿಗರೇ ನೀಡಿದ್ದಾರೆ. ಈ ನಕಲಿ ಕಾಂಗ್ರೆಸ್ಸಿಗರ ‌ದೃಷ್ಕೃತ್ಯವನ್ನು ಅವರಿಗೆ ತಾಕತಿದ್ದರೆ ತನಿಖೆಗೊಳಪಡಿಸಿ ಎಂದು ಆಗ್ರಹಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿಗೆ ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.

Next Story

RELATED STORIES