Top

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ
X

ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯ ಆರೊಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ.ರವೀಂದ್ರ ಅವರು ಮಠಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು.

ರಾತ್ರಿ ಸುಮಾರು 12ಗಂಟೆಗೆ ಬಂದ ವೈದ್ಯರು ಮಧ್ಯರಾತ್ರಿ ಒಂದು ಗಂಟೆವರೆಗೂ ತಪಾಸಣೆ ನಡೆಸಿದ ಬಳಿಕ. ಯಾವುದೇ ರೀತಿಯ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆ ಸಂಜೆ ಸಿದ್ದಗಂಗಾ ಮಠದ ರಾಗಿ ಹೊಲದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸ್ವಾಮೀಜಿಯವರು ಕೆಲಕಾಲ ಅಸ್ವಸ್ಥರಾಗಿದ್ದು ಕೂಡ ಕಂಡುಬಂದಿತು. ಹೀಗಾಗಿ ಮಠದ ಡಾಕ್ಟರ್​ ಪರಮೇಶ್​ ವೈದ್ಯರ ತಂಡ ಮಠಕ್ಕೆ ದೌಡಾಯಿಸಿ ಅವರ ಆರೋಗ್ಯದ ಕುರಿತು ತಪಾಸಣೆ ನಡೆಸಿದರು. ಇದಾದ ಬಳಿಕ ಬಿಜಿಎಸ್​ ಆಸ್ಪತ್ರೆ ವೈದ್ಯರು ತೆರಳಿ ತಪಾಸಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಇದೀಗ ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಶ್ರೀಗಳು ಚೇತರಿಸಿಕೊಳ್ಳುತ್ತೀದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಭಕ್ತಾಧಿಗಳು ಆತಂಕ ಪಡುವ ಅವಶ್ಯಕತೆ ಇಲ್ಲಾಎದೆಬಡಿತ ಕೂಡಾ ತಹಬದಿಗೆ ಬಂದಿದೆ. ಈಗಾಗಲೇ ಶ್ರೀಗಳು ಎದ್ದು ದಿನಚರಿ ಆರಂಭವಿಸಿದ್ದಾರೆ. ಬಿಜಿಎಸ್ ಆಸ್ಪತ್ರೆಗೆ ಶಿಪ್ಟ್ ಮಾಡುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲಾ ಎಂದು ಕಿರಿಯ ಶ್ರೀ ಸಿದ್ದಲಿಂಗಸ್ವಾಮಿಜಿ ಹೇಳಿದರು.

Next Story

RELATED STORIES