Top

ತಮಿಳು ಚಿತ್ರರಂಗಕ್ಕೆ ಮಂಡ್ಯ ಹೈದ ನಿನಾಸಂ ಸತೀಶ್

ತಮಿಳು ಚಿತ್ರರಂಗಕ್ಕೆ ಮಂಡ್ಯ ಹೈದ ನಿನಾಸಂ ಸತೀಶ್
X

ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ.ಕನ್ನಡ ಸಿನಿಮಾಗಳು ನ್ಯಾಷನಲ್​ ಲೆವೆಲ್​ನಲ್ಲಿ ಸದ್ದು ಮಾಡ್ತಿದ್ರೆ, ನಮ್ಮ ಸ್ಟಾರ್ಸ್ ಪರಭಾಷಾ ಚಿತ್ರರಂಗದಲ್ಲಿ ಕಮಾಲ್ ಮಾಡ್ತಿದ್ದಾರೆ. ಕನ್ನಡದ ಅಪ್ಪಟ ರಂಗಭೂಮಿ ಪ್ರತಿಭೆ ನೀನಾಸಂ ಸತೀಶ್​, ಸ್ಯಾಂಡಲ್‌ವುಡ್​ನಲ್ಲಿ ಧೂಳೆಬ್ಬಿಸಿ, ಈಗ ಪಕ್ಕದ ಕಾಲಿವುಡ್​​ಗೆ ಎಂಟ್ರಿ ಕೊಡ್ತಿದ್ದಾರೆ.

ಅ‘ಯೋಗ್ಯ’ನಾಗಿ ಬಾಕ್ಸಾಫೀಸ್​ ಶೇಕ್ ಮಾಡಿದ ಸತೀಶ್

ತಮಿಳು ಚಿತ್ರರಂಗಕ್ಕೆ ದಾಪುಗಾಲಿಟ್ಟ ಅಭಿನಯ ಚತುರ

ಅಯೋಗ್ಯ ಸಿನಿಮಾ ಮೂಲಕ ಭರ್ಜರಿ ಹಿಟ್ ಕೊಟ್ಟ ನೀನಾಸಂ ಸತೀಶ್ ಅಭಿಮಾನಿಗಳಿಗೊಂದು ಸಿಹಿಸುದ್ದಿ ಕೊಟ್ಟಿದ್ದಾರೆ. ಬ್ಯೂಟಿಫುಲ್ ಮನಸುಗಳು, ಟೈಗರ್​ ಗಲ್ಲಿ ಅಯೋಗ್ಯ ಹೀಗೆ ಸಾಲು ಸಾಲು ಸಿನಿಮಾಗಳನ್ನ ಗೆದ್ದ ಸತೀಶ್​, ಅಯೋಗ್ಯ ಸಿನಿಮಾ ಸಕ್ಸಸ್​ ಎಂಜಾಯ್ ಮಾಡೋ ಸಮಯದಲ್ಲೇ ಕಾಲಿವುಡ್​ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಸತೀಶ್ ಚೊಚ್ಚಲ ತಮಿಳು ಚಿತ್ರಕ್ಕೆ ವೇದಿಕೆ ಸಜ್ಜಾಗಿದೆ.

ತಿರುಮನುಂ ಎನ್ನುಮ್ ನಿಖಾ ಅನ್ನೋ ತಮಿಳು ಸಿನಿಮಾ ನಿರ್ದೇಶಿಸಿ ಗೆದ್ದಿರೋ ಅನೀಶ್ ನಿರ್ದೇಶನದ ಹೊಸ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದ್ರ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದ ಸತೀಶ್, ಇದೀಗ ಆ ಸಿನಿಮಾ ಹೊಸ ಅಪ್​ಡೇಟ್ಸ್ ಕೊಟ್ಟಿದ್ದಾರೆ. ಸಿನಿಮಾ ಫಸ್ಟ್ ಲುಕ್ ಲಾಂಚ್​ ವಿದೇಶದಲ್ಲಿ ನಡೀತಿರೋದು ವಿಶೇಷ.

ಸ್ವಿಜ್ಜರ್​ಲ್ಯಾಂಡ್​ನಲ್ಲಿ ಸತೀಶ್​ ತಮಿಳು ಸಿನಿಮಾ ಫಸ್ಟ್ ಲುಕ್ ಲಾಂಚ್

ಕಾಲಿವುಡ್​ನಲ್ಲಿ ಹೇಗಿರಲಿದೆ ಗೊತ್ತಾ ಮಂಡ್ಯ ಹೈದನ ಖದರ್..?

ಇದೇ ಶನಿವಾರ ನೀನಾಸಂ ಸತೀಶ್ ಅಭಿನಯದ ಚೊಚ್ಚಲ ತಮಿಳು ಸಿನಿಮಾ ಫಸ್ಟ್ ಲುಕ್ ಲಾಂಚ್ ಆಗಲಿದೆ. ಸ್ವಿಜ್ಜರ್​ಲ್ಯಾಂಡ್​ನಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಅಪಾರ ತಮಿಳು ಪ್ರೇಕ್ಷಕರ ಸಮ್ಮುಖದಲ್ಲಿ ಫಸ್ಟ್ ಲುಕ್​ ಲಾಂಚ್ ಮಾಡ್ತಿರೋದು ವಿಶೇಷ.

ಚಿತ್ರಕ್ಕೆ ಪಗೆವನಕ್ಕು ಅರುಳ್ವೈ ಅನ್ನೋ ಟೈಟಲ್​ ಫೈನಲ್​ ಮಾಡಿದೆ ಚಿತ್ರತಂಡ. ಸತೀಶ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಲೂಸಿಯಾ. ಈ ಸಿನಿಮಾದಲ್ಲಿ ಅವ್ರ ಅಭಿನಯ ನೋಡಿ ಮೆಚ್ಚಿದ ಅನೀಶ್, ತಮ್ಮ ಪಗೆವನಕ್ಕು ಅರುಳ್ವೈಚಿತ್ರದ ನಾಯಕನ ಪಾತ್ರಕ್ಕೆ ಸತೀಶ್​ ಸರಿಯಾದ ಆಯ್ಕೆ ಅಂತ ನಿರ್ಧರಿಸಿದ್ರಂತೆ. ಅದರಂತೆ ಕಥೆ ಹೇಳಿ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ದೊಡ್ಡ ಬ್ಯಾನರ್​ನಲ್ಲಿ ನಿರ್ಮಾಣವಾಗಲಿರೋ ಈ ಚಿತ್ರದಲ್ಲಿ ಸತೀಶ್​​ ಮಿಂಚು ಹರಿಸಲಿದ್ದಾರೆ.

ರಂಗಭೂಮಿ ಪ್ರತಿಭೆಯಾಗಿರೋ ಸತೀಶ್​ಗೆ ಯಾವ್ದೆ ಪಾತ್ರ ಆದ್ರೂ, ನೀರು ಕುಡಿದಷ್ಟೇ ಸಲೀಸು. ಗಿಬ್ರನ್ ಪಗೆವನಕ್ಕು ಅರುಳ್ವೈ ಚಿತ್ರಕ್ಕೆ ಮ್ಯೂಸಿಕ್ ಮಾಡಲಿದ್ದಾರೆ. ಗಿಬ್ರನ್​, ಅನೀಶ್​, ಸತೀಶ್​ ಸ್ವಿಜ್ಜರ್​ಲ್ಯಾಂಡ್​ನಲ್ಲಿ ನಡೆಯೋ ಫಸ್ಟ್ ಲುಕ್ ಲಾಂಚ್​ನಲ್ಲಿ ಭಾಗವಹಿಸಲಿದ್ದಾರೆ. ಮಂಡ್ಯ ಹೈದ ಸತೀಶ್​, ಸ್ಯಾಂಡಲ್​ವುಡ್​ನಲ್ಲಿ ಅಬ್ಬರಿಸಿ ಕಾಲಿವುಡ್​ಗೆ ಎಂಟ್ರಿಕೊಡ್ತಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.

ಸತೀಶ್​ ಅಭಿನಯದ ಅಯೋಗ್ಯ ಸಿನಿಮಾ ಇತ್ತೀಚೆಗೆ ಶತದಿನೋತ್ಸವ ಆಚರಿಸಿಕೊಂಡಿದೆ.ಇದ್ರ ಬೆನ್ನಲ್ಲೇ ಗೋಧ್ರ, ಚಂಬಲ್, ರಾಮನು ಕಾಡಿಗೆ ಹೋದನು ಅನ್ನೋ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕನ್ನಡದಲ್ಲಿ ಬ್ಯುಸಿಯಾಗಿರುವಾಗಲೇ ಕಾಲಿವುಡ್ ಪ್ರವೇಶಿಸಿ, ಸದ್ದು ಮಾಡೋಕೆ ಹುಮ್ಮಸ್ಸಿನಲ್ಲಿರುವ ಸತೀಶ್‌ಗೆ ನಮ್ಮ ಕಡೆಯಿಂದ ಆಲ್​ ದ ಬೆಸ್ಟ್ .

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES