ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ

ಮೀನ ಮತ್ತು ಹರೀಶ್ ಕಳೆದ ಎರಡು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದರು. ಜಾತಿ ಬೇರೆ ಅನ್ನೋ ಕಾರಣಕ್ಕೆ ಮೀನ ಅಣ್ಣ ನವೀನ್ ಹರೀಶ್​ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಗಂಡ ಸತ್ತ ಸುದ್ದಿ ಕೇಳಿ ಮೀನ ಪಾತಾಳಕ್ಕೆ ಇಳಿದು ಹೋಗಿದರು, ಇದೀಗ ಐದು ತಿಂಗಳ ಗರ್ಭಿಣಿ ಮೀನ ನನಗೆ ಬದುಕೇ ಬೇಡ ಅಂತಾ ನಿರ್ಧರಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಬಿದಲೂರಿನಲ್ಲಿ ನಡೆದಿದೆ.

ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಗಿದ್ದಾಳೆ ಡೆತ್​ನೋಟ್​ನಲ್ಲಿ ಅಮ್ಮ ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ.ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ. ಅಪ್ಪ ನಿನ್ನನ್ನು ಬಿಟ್ಟು ಮೋಸ ಮಾಡಿ ಹೋಗುತ್ತಿದ್ದೇನೆ. ಹರೀಷನನ್ನು ಬಿಟ್ಟು ಇರುವ ಪ್ರತಿ ದಿನವೂ ನನಗೆ ನರಕವಾಗುತ್ತಿದೆ.ನಾನು ಹರೀಷನ ಬಳಿ ಹೋಗುತ್ತಿದ್ದೇನೆ.ನೀವೆಲ್ಲರೂ ನನ್ನನ್ನು ಮಗಳಂತೆ ನೋಡಿಕೊಂಡಿದ್ದೀರಿ. ತವರು ಮನೆಯ ನೆನಪನ್ನೇ ಕಳೆದಿದ್ದೀರಿ. ಹರೀಷನನ್ನು ನನ್ನ ತಮ್ಮ ಸಾಯಿಸಿಲ್ಲ. ಅವನ ಸಾವಿನ ಹಿಂದೆ ಯಾರೇ ಇದ್ದರೂ ನಾನು ಬಿಡುವುದಿಲ್ಲ.ಹೀಗೆ ಕರುಣಾಜನಕವಾಗಿ ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಾಳೆ.

ಕಳೆದ 15 ದಿನದಿಂದ ಮೀನಳನ್ನು ಗಂಡನ ಮನೆಯವರು ಕಾಪಾಡಿಕೊಂಡು ಬಂದಿದರು. ಆದರೆ ಗುರುವಾರ ಬೆಳಗ್ಗೆ ಟೈಂ ಸರಿಯಿರಲಿಲ್ಲ. ಪ್ರಕೃತಿ ಕರೆಗೆ ಹೋಗಿ ಬರ್ತೀನಿ ಅಂದವಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾವಿಗೂ ಮುಂಚೆ ಇವಳು ಬರೆದಿಟ್ಟಿರುವ ಡೆತ್ ನೋಟ್ ಬಹಳ ಕರುಣಾಜನಕವಾಗಿದೆ. ಯಾರೂ ಅಂತರ್ಜಾತಿ ವಿವಾಹ ಮಾಡ್ಕೋಬೇಡಿ ಅಂತಾ ಗೋಗರೆದಿದಾಳೆ. ತನ್ನ ಮುದ್ದು ಕಂದಮ್ಮನನ್ನು ಲೋಕಕ್ಕೆ ಪರಿಚಯಿಸುವ ಮೊದಲೇ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.