Top

ತಮನ್ನಾ ಜಾಗಕ್ಕೆ ಬಂದ ಮೌನಿ.. KGF ರಾಕಿ ಜೊತೆ ಬಾಲಿವುಡ್ ಬ್ಯೂಟಿ ಸ್ಟೆಪ್ಸ್..!

ತಮನ್ನಾ ಜಾಗಕ್ಕೆ ಬಂದ ಮೌನಿ.. KGF ರಾಕಿ ಜೊತೆ ಬಾಲಿವುಡ್ ಬ್ಯೂಟಿ ಸ್ಟೆಪ್ಸ್..!
X

ಕೆಜಿಎಫ್ ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಆದ್ರೆ, ಸಿನಿಮಾ ಶೂಟಿಂಗ್ ಮಾತ್ರ ಇನ್ನೂ ಕಂಪ್ಲೀಟ್ ಆಗಿಲ್ಲ ಅಂದ್ರೆ ನೀವು ನಂಬ್ಲೇಬೇಕು. ಕೆಜಿಎಫ್ ಹಿಂದಿ ವರ್ಷನ್​​ಗಾಗಿ ಇನ್ನೊಂದು ಹಾಡಿನ ಚಿತ್ರೀಕರಣ ಡಿಸೆಂಬರ್ 7 ಮತ್ತು 8ಕ್ಕೆ ನಡೆಯಲಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಈ ಹಾಡಿಗೆ ಬಾಲಿವುಡ್ ಬ್ಯೂಟಿ ಮೌನಿ ರಾಯ್ ಹೆಜ್ಜೆ ಹಾಕಲಿದ್ದಾರೆ. ಕನ್ನಡ ಮತ್ತು ಇನ್ನುಳಿದ ಭಾಷೆಗಳಲ್ಲಿ ತಮನ್ನಾ ಈ ಹಾಡಿಗೆ ಕುಣಿದಿದ್ದಾರೆ.

ಜಾಕಿಶ್ರಾಫ್ , ಸಂಗೀತ ಬಿಜಲಾನಿ ನಟನೆಯ 1989ರ ತ್ರಿದೇವ್ ಚಿತ್ರದ ‘ಗಲಿ ಗಲಿ ಮೇನ್’​ ಹಾಡನ್ನ ಕೆಜಿಎಫ್ ಹಿಂದಿ ಚಿತ್ರದಲ್ಲಿ ಬಳಸಿಕೊಳ್ಳಲಾಗ್ತಿದೆ. ಕನ್ನಡದಲ್ಲಿ ಪರೋಪಕಾರಿ ಚಿತ್ರದ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನ ಬಳಸಿಕೊಂಡು ಶೂಟಿಂಗ್ ಮಾಡಲಾಗಿದೆ. ಹಿಂದಿಯಲ್ಲಿ ಮಾತ್ರ ತಮನ್ನಾ ಬದಲು ಮೌನಿ ರಾಯ್ ಕುಣಿಯಲಿದ್ದು, ಹಾಡು ಕೂಡ ಬದಲಾಗಿದೆ. ಅದ್ದೂರಿ ಸೆಟ್​ನಲ್ಲಿ ಈ ಪಾರ್ಟಿ ಸಾಂಗ್​ ಶೂಟಿಂಗ್​ಗೆ​ ಸಿದ್ಧತೆ ನಡೀತಿದೆ ಅಂತ ಬಾಲಿವುಡ್​ನಲ್ಲಿ ಸುದ್ದಿಯಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ, ನವೆಂಬರ್ 16ಕ್ಕೆ ಕೆಜಿಎಫ್ ಸಿನಿಮಾ ತೆರೆಗೆ ಬರಬೇಕಿತ್ತು. ಒಂದಷ್ಟು ಬದಲಾವಣೆಗಳನ್ನ ಮಾಡಿಕೊಂಡು ದಿಟ್ಟ ಹೆಜ್ಜೆ ಇಡೋದಕ್ಕೆ ಚಿತ್ರತಂಡ ಕೊಂಚ ಸಮಯ ಬಯಸಿತ್ತು. ಅದರಂತೆ ಇದೀಗ ಶೂಟಿಂಗ್ ನಡೆಸಿ, ಒಂದಷ್ಟು ಬದಲಾವಣೆ ಮಾಡ್ಕೊಂಡು ಸಿನಿಮಾ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ. ಅದರಂತೆ ಯಶ್ ಮತ್ತೆ ಗಡ್ಡ ಬಿಟ್ಟು, ರಗಡ್ ಲುಕ್​ನಲ್ಲಿ ಸಿದ್ಧತೆ ನಡೆಸಿದ್ದಾರೆ. ಕ್ಲಾಬ್​ ಮಾದರಿಯ ಸೆಟ್​ನಲ್ಲಿ ಬರೋ ಸ್ಪೆಷಲ್​ ಸಾಂಗ್​ಗೆ ಮೌನಿ, ಯಶ್ ಹೆಜ್ಜೆ ಹಾಕಲಿದ್ದಾರೆ.

Next Story

RELATED STORIES