ಮಾಟ ಮಂತ್ರ ನನಗೆ ತಗಲಲ್ಲ ನಿಮಗೆ ರಿವರ್ಸ್​ಆಗುತ್ತೆ: ರೇವಣ್ಣ

ನಮಗೆ ಯಾರೇ ಮಾಟ ಮಂತ್ರ ಮಾಡಿಸಿದರೂ ನಮಗೆ ಅದು ತಗಲಲ್ಲ ಅದು ಅವರಿಗೆ ರಿವರ್ಸ್ ಆಗುತ್ತೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಗುರುವಾರ ಮಾತನಾಡಿದ ಅವರು ಐದು ವರ್ಷ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಪ್ರಶ್ನೇ ಬರಲಿ ಅವಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಸೆಂಬ್ಲಿಯಲ್ಲೇ ಉತ್ತರ ಕೊಡುತ್ತೆನೆ ಎಂದು ಮಾತನಾಡಿದರು.

ಇನ್ನು ಯಾವುದಾದರು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದರೆ ತೋರಿಸಲಿ, ರೇವಣ್ಣ ವರ್ಗವಾಣೆಯಲ್ಲಿ ಎಲ್ಲಿ ಕೈ ಹಾಕಿದ್ದರೇ ಹೇಳಲಿ, ಬೇಕಾದರೆ ಸಿದ್ದರಾಮಯ್ಯ, ಪರಮೇಶ್ವರ್, ಕುಮಾರಸ್ವಾಮೀಯವರನ್ನು ಕೂರಿಸಿ ಕೇಳಲಿ, ಸಿದ್ದರಾಮಯ್ಯ ನವರ ಕಾಲದಲ್ಲಿ ಹಾಕ್ಕಿದ್ದ ಸೂಪರ್ಡೆಂಟ್ ಇಂಜೀನಿಯರ್ ಇರೋದು, ಕಾನೂನು ಬದ್ದವಾಗಿ ಮಾಡಿದ್ದೆನೆ,

ಸಮನ್ವಯ ಸಭೆಯಲ್ಲಿ ನಾನೇಕೆ ಸಿಟ್ಟು ಮಾಡಿಕೊಂಡು ಎದ್ದುಹೋಗಲಿ, ಕೆಲವರು ನನ್ನ ಹೆಸರು ಹೇಳದಿದ್ದರೇ ಹೊಟ್ಟೆ ತುಂಬಲ್ಲಾ, ಕೆಲವರು ಸೂಪರ್ ಮುಖ್ಯಮಂತ್ರಿ ಅಂತಾರೇ , ಅವರ ದಯೇಯಿಂದ ಮುಖ್ಯಮಂತ್ರಿ ಆಗಲಿ ಬಿಡಿ, ನಾನೇನು ಸಿಎಂ ಆಕಾಂಕ್ಷೀಯಲ್ಲ, ಯಾರೇ ಏನೇ ಮಾಡಿಸಿದ್ದರು ನಮಗೆ ತಗಲಲ್ಲ, ಅದು ಅವರಿಗೆ ರಿವರ್ಸ್ ಆಗುತ್ತೆ ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬಿಳಲ್ಲ ಎಂದು ರೇವಣ್ಣ ಹೇಳಿದರು.