Top

ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮಾಡಿದ ಬಾದಾಮಿ ರೈತ..!

ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮಾಡಿದ ಬಾದಾಮಿ ರೈತ..!
X

ಬಾಗಲಕೋಟೆ: ಬಾದಾಮಿ ಜಿಲ್ಲೆಯ ರೈತನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮಾಡುವ ಮೂಲಕ ತಮ್ಮ ಕಷ್ಟ ತೋಡಿಕೊಂಡಿದ್ದಾರೆ.

ಸಿದ್ದರಾಮಯ್ಯರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ರೈತನೋರ್ವ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಟ್ವಿಟರ್‌ ಮೊರೆ ಹೋಗಿದ್ದಾರೆ.

ಖದ್ದು ಭೇಟಿಯಾಗಿ ಸಿದ್ದರಾಮಯ್ಯ ಹತ್ತಿರ ಸಮಸ್ಯೆ ಹೇಳಿಕೊಳ್ಳಬೇಕೆಂದರೆ, ಅವರು ಕ್ಷೇತ್ರದಲ್ಲಿ ಸಿಗದ ಕಾರಣ, ರೈತ ಟೋಪಣ್ಣ ಟ್ವೀಟ್ ಮಾಡುವ ಮೂಲಕ ತಮ್ಮ ಕಷ್ಟ ತೋಡಿಕೊಂಡಿದ್ದಾರೆ.

ಕೊಳವೆಬಾವಿಗೆ ವಿದ್ಯುತ್ ಸಂಪರ್ಕಕ್ಕೆ ಟಿಸಿ ಅಳವಡಿಸುವಂತೆ ಟ್ವೀಟ್ ಮಾಡಿದ್ದು, "ನಮ್ಮ ಬೋರವೆಲ್‌ಗೆ ಕರೆಂಟ್ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ. ರೈತನ ನೋವು ನಿಮಗೆ ಕಾಣಿಸುತ್ತಿಲ್ಲವೇ??'' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಈ ಟ್ವೀಟನ್ನ ಹಾಲಿ ಸಿಎಂ ಹೆಚ್‌ಡಿಕೆ, ಡಿಸಿ, ಸಿಇಓಗೂ ಟ್ವೀಟ್ ಟ್ಯಾಗ್ ಮಾಡಿದ್ದಾರೆ.

ಇಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಕಿಸಲಾಗಿದ್ದು, 6 ತಿಂಗಳಾದರೂ ವಿದ್ಯುತ್ ಸಂಪರ್ಕಕ್ಕೆ ಇನ್ನೂ ಟಿಸಿ ಅಳವಡಿಸಲಾಗಿಲ್ಲ. ಈ ಕಾರಣಕ್ಕಾಗಿ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

Next Story

RELATED STORIES