Top

ಮೃತಪಟ್ಟ ರೈತರ ಮನೆಗೆ ಬರ್ತಿವೆ ಬ್ಯಾಂಕ್ ನೋಟೀಸ್

ಮೃತಪಟ್ಟ ರೈತರ ಮನೆಗೆ ಬರ್ತಿವೆ ಬ್ಯಾಂಕ್ ನೋಟೀಸ್
X

ರೈತರ ಸಾಲ ಮನ್ನಾ ಮಾಡ್ತೀವಿ. ಸಾಲ ಮರುಪಾವತಿಗಾಗಿ ರೈತರಿಗೆ ನೋಟೀಸ್ ನೀಡಿ ಕಿರುಕುಳ ಕೊಡ್ಬೇಡಿ ಅಂತಾ ಸ್ವತಃ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು ಬ್ಯಾಂಕ್ ಸಿಬ್ಬಂದಿ ಮಾತ್ರ ನೋಟಿಸ್ ನೀಡೋದನ್ನು ಬಿಟ್ಟಿಲ್ಲಾ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆ ತಾಲೂಕಿನಲ್ಲೇ ಆರೋಪ ಕೇಳಿಬರುತ್ತೀದೆ.

ಕೊರಟಗೆರೆ ತಾಲೂಕಿನ ತೀತಾ ಗ್ರಾಮದ ಕಾವೇರಿ ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧಿಕಾರಿಗಳು ಒಂದರ ಮೇಲೊಂದರಂತೆ ರೈತರಿಗೆ ನ್ಯಾಯಾಲಯದ ಮೂಲಕ ನೋಟಿಸ್ ನೀಡುತ್ತಿದ್ದಾರೆ. ಇದರಿಂದ ದೊಡ್ಡಸಾಗರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕಕ್ಕೂ ಹೆಚ್ಚು ರೈತರು ಆತಂಕಗೊಂಡಿದ್ದಾರೆ.

ದೊಡ್ಡಸಾಗರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಈರಾನಾಯ್ಕ್, ಲಕ್ಷ್ಮಮ್ಮ ಹಾಗೂ ಪೂಲೇನಹಳ್ಳಿಯ ಲಕ್ಷ್ಮಮ್ಮ ಎಂಬುವವರಿಗೆ ನ್ಯಾಯಾಲಯದ ಮೂಲಕ ನೋಟಿಸ್ ತಲುಪಿದೆ. ಪೂಲೇನಹಳ್ಳಿಯ ಲಕ್ಷ್ಮಮ್ಮ 2006ರಲ್ಲಿ ಟ್ರ್ಯಾಕ್ಟರ್ ಸಾಲ ಮಾಡಿದರು. ಸಾಲ ಕಟ್ಟದಕ್ಕೆ ನಾಲ್ಕು ವರ್ಷದ ಹಿಂದೆಯೇ ಬ್ಯಾಂಕ್ ಸಿಬ್ಬಂದಿ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಈ ನಡುವೆ ಪೂಲೇನಹಳ್ಳಿ ಲಕ್ಷ್ಮಮ್ಮ ಮತ್ತು ಅವರ ಮಗ ನಾರಾಣಪ್ಪ ಸಾವನಪ್ಪಿದ್ದಾರೆ. ಆದರು ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದ ಮೂಲಕ ಲಕ್ಷ್ಮಮ್ಮರ ಮೊಮ್ಮಕ್ಕಳಿಗೆ 2.3 ಲಕ್ಷ ರೂ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿದ್ದಾರೆ.

ಇನ್ನು ಬೋರ್ ಕೊರೆಸುವ ಸಲುವಾಗಿ ಈರಾನಾಯ್ಕ್ 80 ಸಾವಿರ ಸಾಲ ಮಾಡಿದ್ದರು. ಆದರೆ ಇದೀಗ ಈರಾನಾಯ್ಕ್‌ ಕೂಡ ಸಾವಿಗೀಡಾಗಿದ್ದಾರೆ.. ಇಷ್ಟಾದರು ಸಾಲ ಮರುಪಾವತಿ ಮಾಡುವಂತೆ ವಕೀಲರ ಮೂಲಕ ನೋಟಿಸ್ ಕೊಟ್ಟಿದ್ದಾರೆ. ಹೀಗಾಗಿ ಇವತ್ತೋ ನಾಳೆಯೋ ಸಾಲ ಮನ್ನಾ ಆಗುತ್ತೆ ಎದುರು ನೋಡ್ತಿರೋ ರೈತರು ಒಂದು ಕಡೆಯಾದರೆ. ಸಾಲ ಪಡೆದು ಮೃತಪಟ್ಟವರ ಕುಟುಂಬಗಳು ಸಾಕಪ್ಪಾ ಸಾಕು ಸಾಲದ ಶೂಲ ಎನ್ನುತ್ತೀದ್ದಾರೆ.

Next Story

RELATED STORIES