34 ವರ್ಷಗಳ ಹಿಂದೆ ನಡೆದ ಪ್ರಕರಣ: ಆರೋಪಿಯ ಬಂಧನವಾಗಿದ್ದು ಈಗ..!

ಬೆಳಗಾವಿ: ಭಾರೀ ವಿಚಿತ್ರ ಮತ್ತು ಅಪರೂಪದ ಘಟನೆಗೆ ಕಿತ್ತೂರು ಪೊಲೀಸರು ಸಾಕ್ಷಿಯಾಗಿದ್ದು, 34 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣದ ಆರೋಪಿಯನ್ನು ಇಂದು ಬಂಧಿಸಲಾಗಿದೆ.1984ರಲ್ಲಿ ನಡೆದ ಪ್ರಕರಣದ ಆರೋಪಿ ಇಂದು ಅರೆಸ್ಟ್ ಆಗಿದ್ದಾನೆ.

1984ರಲ್ಲಿ ಶ್ರೀಗಂಧದ ಮರಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಿತ್ತೂರು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಲಾರಿ ಓಡಿಸುತ್ತಿದ್ದ ಚಂದ್ರಕಾಂತ್ ಸೂರ್ಯವಂಶಿ ಪರಾರಿಯಾಗಿದ್ದ. ಆದರೆ ಇದೀಗ ಚಂದ್ರಕಾಂತ್(61) ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದಿದ್ದು, ಆತನನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

1984ರಿಂದ 2018ರವರೆಗೆ ಆರೋಪಿ ಚಂದ್ರಕಾಂತ್ ನಾಪತ್ತೆ ಎಂದು ಹೇಳಿದ್ದು, 34ವರ್ಷಗಳಿಂದ ಒಂದು ಪ್ರಕರಣದ ಬಗ್ಗೆ ಇಷ್ಟೊಂದು ಆಸಕ್ತಿವಹಿಸಿ, ಇನ್ಸ್‌ಪೆಕ್ಟರ್ ರಾಘವೇಂದ್ರ ಹವಾಲ್ದಾರ್ ಆರೋಪಿಯನ್ನು ಬಂಧಿಸಿದ್ದು, ಇದೊಂದು ಅಪರೂಪದ ಪ್ರಕರಣವಾಗಿದೆ.