ಶಿವಣ್ಣನ ಟಗರಿಗೆ ಸಿಕ್ತು ಅಂತರಾಷ್ಟ್ರೀಯ ಪ್ರಶಸ್ತಿ ಗರಿ..!

ಕನ್ನಡ ಚಿತ್ರರಂಗದ ವರ್ಷದ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಸಿನಿಮಾ ಟಗರು. ಬಾಕ್ಸಾಫೀಸ್​ ಶೇಕ್ ಮಾಡಿ ಶತದಿನೋತ್ಸವ ಆಚರಿಸಿದ, ಟಗರಿನ ಗುಟುರು ಸದ್ದು ಇನ್ನು ಕಡಿಮೆಯಾಗ್ತಿಲ್ಲ. ಇತ್ತೀಚೆಗೆ ತಮಿಳಿಗೆ ರೀಮೇಕ್ ಆಗೋ ವಿಚಾರದಿಂದ ಸದ್ದು ಮಾಡಿದ ಟಗರು ಒನ್ಸ್ ಅಗೇನ್ ಟಾಕ್​ ಆಫ್ ದ ಟೌನ್ ಆಗಿದೆ.

ಶಿವಣ್ಣನ ಖಾಕಿ ಖದರ್​, ಸುಕ್ಕಾ ಸೂರಿ ರಿವರ್ಸ್ ಸ್ಕ್ರೀನ್ ಪ್ಲೇ, ಮಹೇನ್ ಸಿಂಹ ಕ್ಯಾಮರಾ ಕಣ್​ ಚಳಕ, ಚರಣ್​ ರಾಜ್​​ ಮ್ಯೂಸಿಕ್ ಎಲ್ಲಾ ಸೇರಿ ಈ ಆಕ್ಷನ್​ ಎಂಟ್ರಟ್ರೈನರ್ ಬಾಕ್ಸಾಫೀಸ್​​ನಲ್ಲಿ ಮ್ಯಾಜಿಕ್ ಮಾಡಿಬಿಡ್ತು. ದೇಶ ವಿದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡು ಬಾಕ್ಸಾಫೀಸ್​ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಧೂಳೆಬ್ಬಿಸಿತು.

ಕನ್ನಡ ಚಿತ್ರರಂಗದಲ್ಲಿ ಟಗರು ಮಾಡಿದ ಸದ್ದು ಪಕ್ಕದ ರಾಜ್ಯಗಳಿಗೂ ಕೇಳಿಸಿತ್ತು. ಪೊಗರಿನ ಟಗರು ಕಥೆ ಇಷ್ಟವಾಗಿ ಕಾಲಿವುಡ್​ ಫಿಲ್ಮ್​ ಮೇಕರ್ಸ್ ದಾಖಲೆ ಬೆಲೆಗೆ ರೀಮೇಕ್ ರೈಟ್ಸ್ ಖರೀದಿಸಿ, ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.

ಸಿನಿಮಾ ಬಂದೋಗಿ ಆರೇಳು ತಿಂಗಳು ಕಳೆದ್ರೂ, ಟಗರು ಸೌಂಡ್ ಮಾತ್ರ ಕಡಿಮೆ ಆಗ್ತಿಲ್ಲ. ಟಗರು ಹಾಡುಗಳಂತೂ ರಾಜ್ಯದ ಮೂಲೆ ಮೂಲೆಯಲ್ಲಿ ಕೇಳಿಸ್ತಾನೇ ಇದೆ. ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಟಗರು ಸಿನಿಮಾ ಒನ್ಸ್ ಅಗೇನ್ ಸುದ್ದಿಯಲ್ಲಿದೆ. ಈ ವರ್ಷದ ಅತ್ಯುತ್ತಮ ಕನ್ನಡ ಜನಪ್ರಿಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಂಟರ್​ನ್ಯಾಷನಲ್ ಫಿಲ್ಮ್ ಬ್ಯುಸಿನೆಸ್ ಪ್ರಶಸ್ತಿ​ ಮುಡಿಗೇರಿಸಿಕೊಂಡಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಬಿಗ್ ಎಂಟ್ರಟ್ರೈನರ್ ಸಿನಿಮಾ ಆಗಿ ಟಗರು ಹೊರಹೊಮ್ಮಿದೆ.

ಹೈದರಾಬಾದ್​ನಲ್ಲಿ ನಡೆದ ಇಂಟರ್​ನ್ಯಾಷನಲ್ ಫಿಲ್ಮ್ ಬ್ಯುಸಿನೆಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟಗರು ಸಿನಿಮಾ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಾಲಿವುಡ್​​ನಿಂದ ಸಂಜು, ಟಾಲಿವುಡ್​ನಿಂದ ರಂಗಸ್ಥಳಂ, ಕಾಲಿವುಡ್​​ನಿಂದ ಸರ್ಕಾರ್ ಸಿನಿಮಾ ಈ ಪ್ರಶಸ್ತಿ ಬಾಚಿಕೊಂಡಿವೆ.

ಒಟ್ಟಾರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟಗರು ಸಿನಿಮಾ ಸೌಂಡ್ ಮಾಡ್ತಿರೋದು ವಿಶೇಷ. ಇಂತಾದೊಂದು ವಿಭಿನ್ನ ಚಿತ್ರವನ್ನ ನಿರ್ದೇಶಕ ಸೂರಿ ಕೊಟ್ಟಿದ್ದು, ಈ ವಿಭಿನ್ನ ಪ್ರಯತ್ನವನ್ನ ಪ್ರೇಕ್ಷಕರು ಸ್ವೀಕರಿಸಿದ್ದು, ನಿಜಕ್ಕೂ ವಿಶೇಷ. ಮುಂದಿನ ದಿನಗಳಲ್ಲಿ ಟಗರು ಸಿನಿಮಾ ಇನ್ನಷ್ಟು ಪ್ರಶಸ್ತಿಗಳನ್ನ ಬಾಚಿಕೊಳ್ಳೊದ್ರಲ್ಲಿ ಸಂದೇಹವಿಲ್ಲ.
ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5