ಅನೌನ್ಸ್ ಆಯ್ತು ನಟಸಾರ್ವಭೌಮ ಸಿನಿಮಾ ರಿಲೀಸ್ ಡೇಟ್

ಪವನ್ ಒಡೆಯರ್-ಪುನೀತ್​ ರಾಜ್​​ಕುಮಾರ್ ಜೋಡಿಯ ಮೋಸ್ಟ್​​ಎಕ್ಸ್​​ಪೆಕ್ಟೆಡ್ ಸಿನಿಮಾ ನಟಸಾರ್ವಭೌಮ. ಈ ಆಕ್ಷನ್ ಎಂಟ್ರಟ್ರೈನರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಟೀಸರ್​ ರಿಲೀಸ್​ಗೆ ತಯಾರಿ ನಡೀತಿದೆ. ನಟಸಾರ್ವಭೌಮನ ದರ್ಬಾರ್​ ನೋಡೋಕೆ ಫ್ಯಾನ್ಸ್ ಕಾಯ್ತಿದ್ದು, ಸದ್ಯ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

ಡಾ. ರಾಜ್​ಕುಮಾರ್​​ ಅವರ ಬಿರುದನ್ನ ಟೈಟಲ್ ಮಾಡಿ ಪವನ್ ಒಡೆಯರ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾ ನಟಸಾರ್ವಭೌಮ.ಈ ಚಿತ್ರದಲ್ಲಿ ಪುನೀತ್ ರಾಜ್​​ಕುಮಾರ್ ಮೀಡಿಯಾ ಸ್ಟಿಲ್ ಫೋಟೋಗ್ರಫರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಜ್ಯೂನಿಯರ್ ನಟಸಾರ್ವಭೌಮನಿಗೆ ನಾಯಕಿಯರಾಗಿ ನಟಿಸಿದ್ದಾರೆ.

ನಟಸಾರ್ವಭೌಮನ ಎಂಟ್ರಿಗೆ ಪವರ್​ಫುಲ್ ಮುಹೂರ್ತ ಫಿಕ್ಸ್
ಗಣರಾಜ್ಯೋತ್ಸವ ಸಂಭ್ರಮದಲ್ಲಿ ನಟಸಾರ್ವಭೌಮ ದರ್ಬಾರ್
ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಈ ವೇಳೆಗೆ ಸಿನಿಮಾ ತೆರೆಗೆ ಬರ್ಬೇಕಿತ್ತು. ಶೂಟಿಂಗ್ ತಡವಾಗಿದ್ರಿಂದ, ರಿಲೀಸ್ ಸಹ ತಡವಾಗ್ತಿದ್ದು, ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಹೊಸ ವರ್ಷದ ಆರಂಭದಲ್ಲಿ ಪರಭಾಷೆಯ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿವೆ ಆ ನಂತರ ನಟಸಾರ್ವಭೌಮನ ದರ್ಬಾರ್ ಶುರುವಾಗಲಿದೆ.

ಬಾಲಿವುಡ್​ನ ಮಣಿಕರ್ಣಿಕಾ, ಟಾಲಿವುಡ್​ನ ಮಹಾನಾಯಕಡು ಸಿನಿಮಾಗಳು ಗಣರಾಜ್ಯೋತ್ಸವದ ಸಂಭ್ರಮದಲ್ಲೇ ತೆರೆಗೆ ಬರ್ತಿದ್ದು, ನಟಸಾರ್ವಭೌಮ ಎರಡೂ ಸಿನಿಮಾಗಳಿಗೆ ಸವಾಲ್ ಹಾಕಲಿದ್ದಾನೆ. ಆರ್ಮುಗ ರವಿಶಂಕರ್, ಚಿಕ್ಕಣ್ಣ, ಬಿ. ಸರೋಜಾದೇವಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಈ ವಾರ ನಟಸಾರ್ವಭೌಮ ಟೀಸರ್ ರಿಲೀಸ್ ಆಗೋ ಸಾಧ್ಯತೆಯಿದೆ.

ಜನವರಿ 24ಕ್ಕೆ ಗಣರಾಜ್ಯೋತ್ಸವ ವೀಕೆಂಡ್ ಟಾರ್ಗೆಟ್ ಮಾಡಿ ಸಿನಿಮಾ ರಿಲೀಸ್​ಗೆ ಚಿಂತನೆ ನಡೀತಿದ್ದು, ನಟಸಾರ್ವಭೌಮ ರಿಲೀಸ್​ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಮ್ರಾನ್ ಮ್ಯೂಸಿಕ್​ನಲ್ಲಿ ನಟಸಾರ್ವಭೌಮ ಸಾಂಗ್ಸ್ ಸಿದ್ಧವಾಗಿದ್ದು, ಡಿಸೆಂಬರ್​ ಅಂತ್ಯಕ್ಕೆ ಆಡಿಯೋ ಲಾಂಚ್ ಆಗಲಿದೆ. ನಟಸಾರ್ವಭೌಮ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸೋದು ಗ್ಯಾರೆಂಟಿ.
ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *