Top

ಬಿಜೆಪಿಗೆ ಹತಾಶೆಯಾಗಿದೆ- ಜಾವ್ಡೇಕರ್ ಹೇಳಿಕೆಗೆ ಡಿಕೆಶಿ ಟಾಂಗ್

ಬಿಜೆಪಿಗೆ ಹತಾಶೆಯಾಗಿದೆ- ಜಾವ್ಡೇಕರ್ ಹೇಳಿಕೆಗೆ ಡಿಕೆಶಿ ಟಾಂಗ್
X

ರಾಜಸ್ಥಾನದ ಜೈಪುರ್‌ನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, 4 ವರ್ಷದ ಹಿಂದೆ 16 ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನ ಗಳಿಸಿತ್ತು. ಆದರೆ ಈಗ ಬರೀ ನಾಲ್ಕು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ರಾಜ್ಯಭಾರ ನಡೆಸುತ್ತಿದೆ. ದೇವಸ್ಥಾನಕ್ಕೆ ಹೋಗೋದು, ಜಾತಿ ಹೇಳೋದು, ಗೋತ್ರಾ ಹೇಳೋದು ಇದೆಲ್ಲ ದೇಶದ ಜನರ ಮನವೊಲಿಸೋಕ್ಕೆ, ವೋಟ್ ಬ್ಯಾಂಕ್‌ಗಾಗಿ ಎಂದು ಪರೋಕ್ಷವಾಗಿ ರಾಹುಲ್‌ಗೆ ಟಾಂಗ್ ನೀಡಿದ್ದಾರೆ.

ಅಲ್ಲದೇ ಕರ್ನಾಟಕ ರಾಜಕೀಯದ ಬಗ್ಗೆ ಮಾತನಾಡಿದ ಜಾವ್ಡೇಕರ್, ಕೆಲ ದಿನಗಳಲ್ಲಿ ಕರ್ನಾಟಕ ಸರ್ಕಾರದಲ್ಲೇ ಭೂಕಂಪ ಸಂಭವಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿಗೆ ಹತಾಶೆಯಾಗಿದೆ. ಕುದುರೆ ವ್ಯಾಪಾರ ಮಾಡ್ತಾ ಇದೀವಿ ಅನ್ನೋದ್ರ ಬಗ್ಗೆ ಹೇಳಿದ್ದಾರೆ. ನಂಬರ್ ಇಲ್ಲದೆ ಆಪರೇಷನ್ ಕಮಲ ಮಾಡಿದ್ದಾರೆ. ರಾಜ್ಯ ನಾಯಕರು ಏನು ಹೇಳ್ತಾ ಇದ್ರೋ ಅದಕ್ಕೆ ರಾಷ್ಟ್ರೀಯ ನಾಯಕರು ಠಸ್ಸೆ ಹೊಡೆದಿದ್ದಾರೆ. ನೀಚ ರಾಜಕಾರಣವನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.

ಅಲ್ಲದೇ ಕುಮಾರಸ್ವಾಮಿ ಸರ್ಕಾರ ಗಟ್ಟಿಯಾಗಿ ಇರುತ್ತೆ. ಬ್ಲ್ಯಾಕ್ ಮೇಲ್‌ಗೆ ನಮ್ಮ ಶಾಸಕರು ಮಣಿಯಲ್ಲ. ಅವರಗಿಂತ ನಾವು ಬುದ್ಧಿವಂತರು ಇಲ್ಲದಿರಬಹುದು. ಆದರೆ ಅವರಿಗಿಂತ ೧% ನಾವು ಯೋಚನೆ ಮಾಡ್ತೀವಿ ಎಂದಿದ್ದಾರೆ.

ಇನ್ನು ಬಿಎಸ್‌ವೈ ಬಗ್ಗೆ ಕಿಡಿಕಾರಿದ ಡಿಕೆಶಿ ಯಡಿಯೂರಪ್ಪ ದೊಡ್ಡ ಆರ್ಟಿಸ್ಟ್, ಈ ಹಿಂದೆಯೂ ಆಪರೇಷನ್ ಕಮಲ ಮಾಡಿ ಗೊತ್ತಿದೆ ಅವರಿಗೆ. ಆಪರೇಷನ್‌ಗೆ ಕೈ ಹಾಕಿ ವಿಫಲರಾಗಿದ್ದಾರೆ. ಇನ್ನು ಆಸೆ ಇಟ್ಕೊಂಡಿದ್ರೆ ನಾವೇನು ಮಾಡೋದಕ್ಕೆ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

Next Story

RELATED STORIES