Top

7 ವರ್ಷದ ಈ ಬಾಲಕನ ಆದಾಯ ಯಾವ ಕೋಟ್ಯಾಧಿಪತಿಗೂ ಕಡಿಮೆ ಇಲ್ಲ!

7 ವರ್ಷದ ಈ ಬಾಲಕನ ಆದಾಯ ಯಾವ ಕೋಟ್ಯಾಧಿಪತಿಗೂ ಕಡಿಮೆ ಇಲ್ಲ!
X

ಜಗತ್ತಿನ ಅತ್ಯಂತ ಶ್ರೀಮಂತ ಪಟ್ಟಿಯನ್ನು ಆಗೊಮ್ಮೆ- ಈಗೊಮ್ಮೆ ಬಿಡುಗಡೆ ಮಾಡುವ ಫೋರ್ಬ್ಸ್ ನಿಯತಕಾಲಿಕ 2018ರ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 7 ವರ್ಷದ ಬಾಲಕ ಸ್ಥಾನ ಪಡೆದಿದ್ದಾನೆ!

2018ರ ಯೂಟ್ಯೂಬ್​ ಅತೀ ಹೆಚ್ಚು ಆದಾಯ ಕೊಡುವ ಸ್ಟಾರ್​ಗಳ ಪಟ್ಟಿಯಲ್ಲಿ 7 ವರ್ಷದ ಬಾಲಕ ರಿಯಾನ್ ಸ್ಥಾನ ಪಡೆದಿದ್ದಾನೆ. ಈತನ ಟಾಯ್ಸ್ ರಿವ್ಯೂ (ಆಟಿಕೆಗಳ ಪರಾಮರ್ಶೆ) ಕಾರ್ಯಕ್ರಮ ಅತ್ಯಂತ ಜನಪ್ರಿಯತೆ ಪಡೆದಿದ್ದು, ಯೂ ಟ್ಯೂಬ್​ನಲ್ಲಿ ಅತೀ ಹೆಚ್ಚು ಆದಾಯ ಗಳಿಸುತ್ತಿದ್ದಾನೆ.

ರಿಯಾನ್ ಅವರ ಟಾಯ್ಸ್ ರಿವ್ಯೂ ಚಾನೆಲ್ ಪ್ರತಿ ವರ್ಷ 22 ದಶಲಕ್ಷ ಡಾಲರ್ ಅಂದರೆ ಸರಿ ಸುಮಾರು 154.54 ಕೋಟಿ ರೂ. ಆದಾಯ ಗಳಿಸಿದ್ದಾರೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಅಮೆರಿಕ ಮೂಲದ ರಿಯಾನ್ ಈ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.

2ನೇ ಸ್ಥಾನದಲ್ಲಿ ಸೋದರರಾದ ಜಾಕ್ ಮತ್ತು ಲೋಗನ್ ಪಾಲ್ ಆದಾಯ 21.5 ಕೋಟಿ ರೂ. ಆಗಿದೆ.

Next Story

RELATED STORIES