Top

`ಆಪರೇಷನ್ ಕಮಲ ಮಾಡುತ್ತೇವೆ, ಯಾರೂ ಬಂದರೂ ಸ್ವಾಗತ'

`ಆಪರೇಷನ್ ಕಮಲ ಮಾಡುತ್ತೇವೆ, ಯಾರೂ ಬಂದರೂ ಸ್ವಾಗತ
X

ಆಪರೇಷನ್ ಕಮಲ ಮಾಡುತ್ತೇವೆ. ಕಾಂಗ್ರೇಸ್, ಜೆಡಿಎಸ್ ಶಾಸಕರು ಬಂದರೆ ಕರೆದುಕೊಳ್ಳುತ್ತೇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ್ ಕೆ.ಎಸ್. ಈಶ್ವರಪ್ಪ ಹೇಳುವ ಮೂಲಕ ಆಪರೇಷನ್ ಕಮಲದ ವದಂತಿಗೆ ಪುಷ್ಠಿ ನೀಡಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮದ ಜೊತೆ ಮಂಗಳವಾರ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಯವರು ಸರ್ಕಾರದ ಬಗ್ಗೆ ಅಸಮಾಧಾನ ಇದೆ ಅಂತ ಹೇಳಿದ್ದಾರೆ. ಕಾಂಗ್ರೇಸ್, ಜೆಡಿಎಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಸಚಿವ ಸಂಪುಟವರೆಗೂ ಸರ್ಕಾರ ಇದ್ದರೆ ಸಂಪುಟ ವಿಸ್ತರಣೆ ಆಗುತ್ತೆ. ಸಂಪುಟ ವಿಸ್ತರಣೆ ಆದ ತಕ್ಷಣ ಸರ್ಕಾರ ಬೀಳುವುದು ಖಚಿತ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ಯಾವುದೇ ಆಪರೇಷನ್ ಮಾಡುತ್ತಿಲ್ಲ. ಅವರ ಶಾಸಕರೇ ಬರುತ್ತಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಅಂತಿದ್ದಾರೆ. ಸಿದ್ದರಾಮಯ್ಯ ಅವರು ಬಿಜೆಪಿ ಸಿದ್ದಾಂತಗಳನ್ನು ಒಪ್ಪಿಕೊಂಡು ಬಂದರೆ ಅವರನ್ನೂ ಸ್ವಾಗತಿಸುತ್ತೇವ ಎಂದು ಈಶ್ವರಪ್ಪ ನುಡಿದರು.

ಸಿದ್ದರಾಮಯ್ಯನವರಿಗೆ ಈಗ ಉದ್ಯೋಗ ಇಲ್ಲ. ಅಧಿಕಾರ ಕಳೆದುಕೊಂಡು ಹುಚ್ಚನಂತೆ ಮಾತಾಡ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೊತರು. ಸಿಎಂ ಸ್ಥಾನ ಕಳೆದುಕೊಂಡರು. ಈಗ ಅವರಿಗೆ ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಬಾಬರಿ ಮಸೀದಿ ಮತ್ತೆ ಕಟ್ತೀವಿ ಅಂತ ಕಾಂಗ್ರೇಸ್ ನವರು ಹೇಳ್ತಾ ಬಂದಿದ್ದಾರೆ. ಮತ್ತೆ ಈಗ ಕಾಂಗ್ರೇಸ್ ನವರು ಹಿಂದುತ್ವ, ರಾಮಮಂದಿರ ಅಂತ ಮಾತಾಡ್ತೀದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ನವರು ಬಾಬರಿ ಮಸೀದಿ ಕೆಡವುತ್ತೇವೆ ಎಂದು ಘೋಷಿಸಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.

Next Story

RELATED STORIES