Top

ತಂದೆತನದ ಸುಂದರ ಅನುಭವ ಹಂಚಿಕೊಂಡ ರಾಕಿಂಗ್ ಸ್ಟಾರ್

ತಂದೆತನದ ಸುಂದರ ಅನುಭವ ಹಂಚಿಕೊಂಡ ರಾಕಿಂಗ್ ಸ್ಟಾರ್
X

ಹೆಣ್ಣುಮಗುವಿನ ತಂದೆಯಾಗಿರುವ ಸಂತಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್, ಮಗಳ ಆರೈಕೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಮಗಳು ಹುಟ್ಟಿದ್ದಾಳೆ ಎಂಬ ವಿಷಯ ತಿಳಿದ ತಕ್ಷಣ, ಆನಂದಬಾಷ್ಪ ಸುರಿಸಿದ ಯಶ್, ತಮ್ಮೆಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡಿ, ಮಗಳ ಬಳಿಯೇ ಇದ್ದರು.

ಈಗಾಗಲೇ ಯಶ್ ತಮ್ಮ ಮಗಳೊಂದಿಗೆ ಇರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ರೆ ಇಲ್ಲೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯಶ್, ತಮ್ಮ ಸುಂದರವಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಯಶ್ ಮುದ್ದಿನ ಮಗಳು, ಯಶ್‌ರ ಕೈ ಬೆರಳುಗಳನ್ನ ಹಿಡಿದಿದ್ದಾಳೆ.

ನನ್ನ ಬೆರಳುಗಳನ್ನು ಬಿಗಿ ಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ. ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ ಮೇಲಂತೂ, ಅವಳ ಪ್ರೀತಿ ನೂರ್ಮಡಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

Next Story

RELATED STORIES