ಪಬ್​ಜಿ ಗೇಮ್​ ಗೀಳಿಗೆ ಆಸ್ಪತ್ರೆ ಸೇರುತ್ತಿರುವ ಬೆಂಗಳೂರು ಯುವಜನ…

ಬ್ಲೂವೇಲ್ ಸೇರಿದಂತೆ ಹಲವು ಮೊಬೈಲ್ ಗೇಮ್​ಗಳ ಹಾವಳಿಯಿಂದ ತತ್ತರಿಸಿದ್ದ ಬೆಂಗಳೂರಿನ ಜನರು ಇದೀಗ ಪಬ್​ಜಿ ಎಂಬ ಗೇಮ್​ನಿಂದ ನಲುಗುವಂತಾಗಿದೆ.

ಮಾರಣಾಂತಿಕ ಮೊಬೈಲ್ ಗೇಮ್​ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೊಸದಾಗಿ ಕಾಲಿಟ್ಟಿರುವ ಪಬ್​ ಜೀ ಗೇಮ್​ನಿಂದಾಗಿ ಸುಮಾರು 150 ಮಂದಿ ಮಾನಸಿಕ ಅಸ್ವಸ್ಥತೆ ಪ್ರಕರಣಗಳು ನಿಮ್ದಾನ್ಸ್ ಆಸ್ಪತ್ರೆಯಲ್ಲಿ ದಾಖಲಾಗಿವೆ.

ಪಬ್​ ಜೀ ಗೇಮ್ ಹಿಂದೆ ಬಿದ್ದಿದ್ದರಿಂದ ಯುವಕ-ಯುವತಿಯರು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಈ ಗೇಮ್​ಗೆ ಯುವಕರು ಸಿಲುಕುತ್ತಿದ್ದಾರೆ.

ಪ್ರತಿ ತಿಂಗಳು 50ರಿಂದ 60 ಮಂದಿ ಈ ಗೇಮ್​ ಗೀಳಿನಿಂದಾಗಿ ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದಾರೆ. ಇದರಿಂದ ಮಾನಸಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಯುದ್ಧ ಭೂಮಿಯಲ್ಲಿ ಶೂಟ್ ಮಾಡುವ ಈ ಆಟ 8 ತಿಂಗಳ ಹಿಂದೆ ಭಾರತಕ್ಕೆ ಕಾಲಿಟ್ಟಿದೆ. ಭಾರೀ ಜನಪ್ರಿಯ ಪಡೆದ ಈ ಆಟದಿಂದ ಯುವಕರು ಹಿಂಸಾಕೃತ್ಯದಿಂದ ವಿಕೃತ ಸಂತೋಷ ಪಡುವಂತಾಗಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Recommended For You

Leave a Reply

Your email address will not be published. Required fields are marked *