Top

ಬಿಬಿಎಂಪಿಯಲ್ಲೂ ಆಪರೇಷನ್ ಕಮಲ: ಜೆಡಿಎಸ್​ ಸದಸ್ಯರಿಗೆ ಬಲೆ

ಬಿಬಿಎಂಪಿಯಲ್ಲೂ ಆಪರೇಷನ್ ಕಮಲ: ಜೆಡಿಎಸ್​ ಸದಸ್ಯರಿಗೆ ಬಲೆ
X

ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನ ಹಿನ್ನೆಲೆ ಅವರ ಸ್ಥಾನಕ್ಕೆ ಮರು ಚುನಾವಣೆ ಬುಧವಾರ ನಡೆಯಲಿದೆ ಹೀಗಾಗಿ ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರಿಗೆ ಬಿಜೆಪಿ ಪಕ್ಷದ ಮುಖಂಡರು ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ.

ಜೆಡಿಎಸ್​ನ ದೇವದಾಸ್, ಮಂಜುಳಾ ನಾರಯಣಸ್ವಾಮಿ ಅವರನ್ನು ಬಿಜೆಪಿ ಮುಖಂಡ ಆರ್ ಅಶೋಕ್ ಮನೆಗೆ ವಿಪಕ್ಷ ನಾಯಕರು ಕರೆದೊಯ್ದಿದ್ದಾರೆ ಎನ್ನಲಾಗುತ್ತಾದೆ.

ಸಂಖ್ಯಾ ಬಲ ಕೊರತೆ ಇದರು ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದೆ. ಹಲವು ಅಮಿಷಗಳನ್ನು ಒಡ್ಡಿರುವ ಬಿಜೆಪಿ ನಾಯಕರು. ಹಣ ಹಾಗೂ ಅಧಿಕಾರ ಅಸೆ ತೋರಿಸಿರುವುದರ ಜೊತೆಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತೀದೆ.

ಒಟ್ಟು 260 ಮತದಾರರ ಪಟ್ಟಿ ಸಿದ್ಧ ಪಡಿಸಿದ್ದು, ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತೀದೆ. ಮತದಾನ ಪ್ರಕ್ರಿಯೆ ಕೌನ್ಸಿಲ್ ಸಭೆಯಲ್ಲಿ ನಡೆಯಲಿದೆ. ಇನ್ನು ಪಕ್ಷವಾರು ಮತದಾರರ ಪಟ್ಟಿ ಸಿದ್ದ ಪಡಿಸುತ್ತೀದೆ. ಪ್ರಾದೇಶಿಕ ಚುನಾವಣಾ ಆಯುಕ್ತ ಶಿವಯೋಗಿ ಕಳಸದ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಉಪಮೇಯರ್ ಚುನಾವಣೆ ಮುಗಿದ ಬಳಿಕ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದ್ದು, ಅವಶ್ಯಕತೆ ಇದ್ದರೆ ಬ್ಯಾಲೆಟಿನ್ ಪೇಪರ್ ಮುಖಾಂತರ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ.

Next Story

RELATED STORIES