Top

ಕೇಂದ್ರ ನೆರವು ನೀಡದಿದ್ದರೂ ನಾವೇ ಸಾಲಮನ್ನಾ ಮಾಡುತ್ತೇವೆ: ಸಿಎಂ

ಕೇಂದ್ರ ನೆರವು ನೀಡದಿದ್ದರೂ ನಾವೇ ಸಾಲಮನ್ನಾ ಮಾಡುತ್ತೇವೆ: ಸಿಎಂ
X

ಕೇಂದ್ರ ಸರ್ಕಾರ ನೆರವು ನೀಡದಿದ್ದರು ನಾವೇ ಸಾಲಮನ್ನಾ ಮಾಡುತ್ತೆವೆ ನಾವು ಕೇಂದ್ರಕ್ಕೆ ಅಂಟಿಕೊಂಡು ನಿಂತಿಲ್ಲ, ಬ್ಯಾಂಕ್ ಗಳ ಜೊತೆ ನಿರಂತರ ಸಭೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶೇ 50 ರಷ್ಟು ಕೇಂದ್ರ ನೀಡಬೇಕೆಂದು ಕೇಳಿದ್ದೇವೆ, ಎರಡು ಭಾರಿ ಭೇಟಿ ನೀಡಿದಾಗಲೂ ಶೇ 50 ಹೊರೆಹೊರುವಂತೆ ರಿಕ್ವೆಸ್ಟ್ ಮಾಡಿದ್ದೇವೆ. ಆದರೂ ಕೇಂದ್ರ ಅದರ ಬಗ್ಗೆ ಗಮನಹರಿಸುತ್ತಿಲ್ಲ, ಹೀಗಿದ್ದರೂ ನಾವು ಕೇಂದ್ರಕ್ಕೆ ಅಂಟಿಕೊಂಡು ನಿಂತಿಲ್ಲ.ಬ್ಯಾಂಕ್ ಗಳ ಜೊತೆ ನಿರಂತರ ಸಭೆ ನಡೆಯುತ್ತಿದೆ ಎಂದರು.

ಸರ್ಕಾರ ಮುಖ್ಯಕಾರ್ಯದರ್ಶಿಗಳ ಸಭೆ ನಡೆಸುತ್ತಲೇ ಇದ್ದಾರೆ. 21 ಲಕ್ಷ ಖಾತೆದಾರರು ಸಾಲ ಪಡೆದಿದ್ದಾರೆ. 2 ಲಕ್ಷದ 24 ಸಾವಿರ ಎನ್ ಪಿ ಪಡೆಯಲಾಗಿದೆ.

16 ರಿಂದ 17 ಲಕ್ಷ ರೈತರ ಸಾಲ ಪಾವತಿಗೆ ನಿರ್ಧಾರ.25 ಸಾವಿರ ಬೋನಸ್ ಕೊಡುವ ಬಗ್ಗೆಯೂ ಮಾಹಿತಿ ಕಲೆಹಾಕಿದ್ದೇವೆ. ಸಾಲದ ಮೊದಲ ಕಂತು ಶೀಘ್ರದಲ್ಲೇ ಬಿಡುಗಡೆ ಮಾಡ್ತೇವೆ.6500 ಕೋಟಿ ಈ ವರ್ಷದ ಬಜೆಟ್ ನಲ್ಲೇ ಇಟ್ಟಿದ್ದೇವೆ. ನಾವು ರೈತರ ಕಮಿಟ್ ಮಾಡಿಕೊಂಡಿದ್ದೇವೆ.ಕೇಂದ್ರ ಕೊಡಲಿ,ಬಿಡಲಿ ನಾವು ಸಾಲಮನ್ನಾ ಮಾಡ್ತೇವೆ ಸಿಎಂ ಕುಮಾರಸ್ವಾಮಿ ಹೇಳಿದರು.

ಮೊದಲ ಕಂತು ಬಿಡುಗಡೆ ಮಾಡುತ್ತೇವೆ ಹಂಪಿ ಉತ್ಸವ ಆಚರಣೆ ವಿಚಾರ ಹಂಪಿ ಉತ್ಸವ ಮಾಡಲ್ಲ ಅಂತ ಆದೇಶ ಮಾಡಿಲ್ಲ,ಉತ್ಸವ ಮಾಡೋಕೆ ನಮಗೆ ಸಮಸ್ಯೆಯಿಲ್ಲ ಸಂಸದ ಉಗ್ರಪ್ಪ ನವರು ಮನವಿ ಮಾಡಿದ್ದಾರೆ ಜನರ ಆಶಯಗಳಿಗೆ ನಾವು ವಿರುದ್ಧವಾಗಿಲ್ಲ ಸರಳವಾಗಿ ಆಚರಿಸಲು ಹೇಳಿದ್ದೇನೆ.

ಟವೆಲ್ ಹಾಕಿ‌ಭಿಕ್ಷೆ ಎತ್ತೋರು ಹಿಂದೆ ಏನ್ ಮಾಡಿದರು ಅನ್ನೋದು ಗೊತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಪಡಿತರ ವ್ಯವಸ್ಥೆಗೆ ಧಾನ್ಯ ಖರೀದಿ ಮಾಡಿದ್ದೇವೆ. ಧಾನ್ಯ ಖರೀದಿಸಿದ ಬೆಂಬಲ ಬೆಲೆ ನೀಡಿಲ್ಲ ರಾಜ್ಯಕ್ಕೆ ಬರಬೇಕಾದ ಅನುದಾನ ನೀಡಿಸುವಂತೆ ಮನವರಿಕೆ ಮಾಡಿದ್ದೇವ .1450 ಕೋಟಿ ಹಣ ಕೇಂದ್ರದಿಂದ ಬರಬೇಕಿದೆ. ರಾಜ್ಯದ ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಶೇ50 ರಷ್ಟು ನಾವೇ ಹಣ ನೀಡುತ್ತೇವೆ. ಯೋಜನೆಯ ಭೂಸ್ವಾಧೀನಕ್ಕೂ ನಾವೇ ಹಣ ನೀಡುತ್ತೇವೆ. ಇದರ ಬಗ್ಗೆ ಕೇಂದ್ರದ ಜೊತೆ ಓಡಂಬಡಿಕೆ ಮಾಡಿಕೊಂಡಿದ್ದೇವೆ.ಆದರೆ ಕೇಂದ್ರ ಯೋಜನೆಗೆ ಹಣ ಬಿಡುಗಡೆ ಮಾಡ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Next Story

RELATED STORIES