Top

ಕೆಜಿಎಫ್ ಸಿನಿಮಾದ ಫಸ್ಟ್ ಲಿರಿಕಲ್ ವೀಡಿಯೋ ಸಾಂಗ್​ ರಿಲೀಸ್​

ಕೆಜಿಎಫ್ ಸಿನಿಮಾದ ಫಸ್ಟ್ ಲಿರಿಕಲ್ ವೀಡಿಯೋ ಸಾಂಗ್​ ರಿಲೀಸ್​
X

ತೆರೆಮೇಲೆ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಆರ್ಭಟಕ್ಕೆ ದಿನಗಣನೆ ಶುರುವಾಗಿದೆ. ಅಪ್ಪಟ ಕನ್ನಡ ಸಿನಿಮಾವೊಂದು ಪರಭಾಷೆಗಳಲ್ಲೂ ಏಕಕಾಲದಲ್ಲಿ ತೆರೆಗಪ್ಪಳಿಸೋಕೆ ಸಿದ್ಧವಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ಈವರೆಗೆ ಮತ್ಯಾವುದೇ ಸಿನಿಮಾ ಕ್ರಿಯೇಟ್ ಮಾಡಿದ ಕ್ರೇಜ್​ನ ಕೆಜಿಎಫ್ ಹುಟ್ಟಾಕಿದೆ. ಅದೇ ಕಾರಣಕ್ಕೆ ಕೆಜಿಎಫ್ ಸಾಂಗ್ಸ್​ಗಾಗಿ ಫ್ಯಾನ್ಸ್ ಕಾಯುತ್ತೀದ್ದಾರು.

ಸಖತ್ ಸೌಂಡ್ ಮಾಡ್ತಿದೆ ‘ಸಲಾಂ ರಾಕಿ ಭಾಯ್’ ಸಾಂಗ್

ಕುತೂಹಲ ಕೆರಳಿಸಿದೆ ಬಾಂಬೆ ಗ್ಯಾಂಗ್​ಸ್ಟರ್ ರಾಕಿ ಯಶ್ ಕಥೆ

ಸಲಾಂ ರಾಕಿ ಭಾಯ್ ಅಂತ ಶುರುವಾಗೋ ಕೆಜಿಎಫ್ ಸಿನಿಮಾದ ಫಸ್ಟ್ ಲಿರಿಕಲ್ ವೀಡಿಯೋ ಸಾಂಗ್​ ರಿಲೀಸ್​ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.. ಕೆಜಿಎಫ್ ರಾಕಿ ಮುಂಬೈನಲ್ಲಿ ದರ್ಬಾರ್ ನಡೆಸೋವಾಗ ಬರೋ ಹಾಡಿದು. ಅದಕ್ಕೆ ತಕ್ಕಂತೆ ಹಿಂದಿ ಮತ್ತು ಕನ್ನಡ ಪದಗಳನ್ನ ಬಳಸಿ ಸಾಹಿತ್ಯ ಪೋಣಿಸಿದ್ದಾರೆ ವಿ. ನಾಗೇಂದ್ರ ಪ್ರಸಾದ್.

ರವಿಬಸ್ರೂರು ಸಂಗೀತದ ಈ ಹಾಡನ್ನ ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಚಿನ್ ಬಸ್ರೂರು ಸೇರಿದಂತೆ ಸಾಕಷ್ಟು ಗಾಯಕರು ಹಾಡಿದ್ದಾರೆ. ರಾಕಿಯ ಖಡಲ್ ಪೋಸ್ಟರ್​ಗಳನ್ನ ಮಾಂಟೇಜ್ ಮಾಡಿ ಲಿರಿಕಲ್ ವೀಡಿಯೋ ರಿಲೀಸ್ ಮಾಡಿದೆ ಚಿತ್ರತಂಡ.. ಮುಂಬೈನಲ್ಲಿ ಭೂಗತ ಲೋಕದ ಅಧಿಪತಿಯಾಗಿ ಬೆಳೆಯುವ ರಾಕಿಯ ಪಾತ್ರ ಪರಿಚಯಿಸುವ ಹಾಡಿದು.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ವರ್ಷನ್ ಸಲಾಂ ರಾಕಿ ಭಾಯ್ ಲಿರಿಕಲ್ ಸಾಂಗ್ ರಿಲೀಸ್ ಮಾಡಲಾಗಿದೆ.. ರಾಕಿ ಭಾಯ್ ಖದರ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿದೆ.. ರಾಕಿಂಗ್ ಸ್ಟಾರ್ ಫ್ಯಾನ್ಸ್ ಅಂತೂ ಪದೇ ಪದೇ ಸಾಂಗ್ ಕೇಳಿ ಎಂಜಾಯ್ ಮಾಡ್ತಿದ್ದಾರೆ.. ಈ ಮಾಸ್ ನಂಬರ್ ಸಿನಿಮಾ ಬಗೆಗಿನ ಕುತೂಹಲವನ್ನು ದುಪ್ಪಟ್ಟಾಗಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್​ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ಅಯ್ಯಪ್ಪ, ಬಿ. ಸುರೇಶ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಡಿಸೆಂಬರ್ 21ಕ್ಕೆ ವಿಶ್ವದಾದ್ಯಂತ ಏಕಕಾಲಕ್ಕೆ ಕೆಜಿಎಫ್ ರಾಕಿ ದರ್ಬಾರ್ ಶುರುವಾಗಲಿದೆ.

Next Story

RELATED STORIES