ಧೂಳೆಬ್ಬಿಸಿದೆ ಕೆಜಿಎಫ್ ಪ್ರಮೋಷನಲ್ ಫ್ಯಾನ್ ಮೇಡ್ ಸಾಂಗ್

ಸಿಂಗಲ್ ಟ್ರೈಲರ್ನಿಂದ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಿನಿಮಾ ಕೆಜಿಎಫ್. ಡಿಸೆಂಬರ್ 21ಕ್ಕೆ ವಿಶ್ವದಾದ್ಯಂತ ಚಿನ್ನದ ಗಣಿಯ ಗ್ಯಾಂಗ್ಸ್ಟರ್ ರಾಕಿ ದರ್ಶನವಾಗಲಿದೆ. ಟೆಕ್ನಿಕಲ್ ಪ್ರಾಬ್ಲಂನಿಂದ ಕೆಜಿಎಫ್ ಸಾಂಗ್ ರಿಲೀಸ್ ಕೊಂಚ ತಡವಾಗ್ತಿದೆ. ಆದ್ರೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ರ್ಯಾಪ್ ಸಾಂಗೊಂದು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
ಅಭಿಮಾನಿಗಳು ಶುರು ಮಾಡೇಬಿಟ್ರಲ್ಲಾ ಕೆಜಿಎಫ್ ಗಾನಬಜಾನ..?
ಧೂಳೆಬ್ಬಿಸಿದೆ ಕೆಜಿಎಫ್ ಪ್ರಮೋಷನಲ್ ಫ್ಯಾನ್ ಮೇಡ್ ಸಾಂಗ್
ಕೆಜಿಎಫ್ ಸಿನಿಮಾ ಕ್ರೇಜ್ ಬಗ್ಗೆ ಹೊಸದಾಗಿ ಬಿಡಿಸಿ ಹೇಳೋದು ಬೇಕಿಲ್ಲ. ಪರಭಾಷಿಕರು ಕೂಡ ಈ ಹೈವೋಲ್ಟೇಜ್ ಆ್ಯಕ್ಷನ್ ಎಂಟ್ರಟ್ರೈನರ್ಗಾಗಿ ಕಾತರದಿಂದ ಕಾಯ್ತಿದ್ದಾರೆ. ಇಂಥ ಹೊತ್ತಲ್ಲಿ ಕೆಜಿಎಫ್ ಸಾಂಗ್ಸ್ ರಿಲೀಸ್ ಆಗಿಲ್ಲ ಅಂತ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದಾರೆ. ಅವರ ಬೇಸರ ಕಡಿಮೆ ಮಾಡೋಕೆ ಅಭಿಮಾನಿಗಳೇ ಒಂದು ಸಾಂಗ್ ಮಾಡಿ ಕೆಜಿಎಫ್ ರಾಕಿ ಹವಾ ಪರಿಚಯ ಮಾಡ್ಸಿದ್ದಾರೆ.
ರ್ಯಾಪ್ ಟಚ್ನಲ್ಲಿ ಕೆಜಿಎಫ್ ರಾಕಿ ಖದರ್ ಹೇಗಿದೆ ಗೊತ್ತಾ..?
ಕೆಜಿಎಫ್ ಅಸಲಿ ಆಲ್ಬಮ್ ಬಿಡುಗಡೆಗೆ ಶುರುವಾಗಿದೆ ಕ್ಷಣಗಣನೆ
ಆರ್ಪಿ ಬೀಟ್ಸ್ ಮ್ಯೂಸಿಕ್ಗೆ ರ್ಯಾಪರ್ ಚೇತನ್ ಲಿರಿಕ್ಸ್ ಬರೆದಿದ್ದು, ಪ್ರತಾಪ್ ಭಟ್ ಮತ್ತು ಅನಿರುದ್ಧ ಭಾರ್ಗವ್ ವಾಯ್ಸ್ನಲ್ಲಿ ಸಾಂಗ್ ಮಜವಾಗಿದೆ. ರಾಮ್ ರೋವಿನ್ ಮತ್ತು ರ್ಯಾಪರ್ ಚೇತನ್ ರ್ಯಾಪ್ನಲ್ಲಿ ಪ್ರಮೋಷನಲ್ ಸಾಂಗ್ ಅಭಿಮಾನಿಗಳಿ ಕಿಕ್ ಕೊಡ್ತಿದೆ. ಯಾವ್ದೆ ಸಿನಿಮಾ ಸಾಂಗ್ಗಿಂತ ಕಡಿಮೆ ಇಲ್ಲ ಅನ್ನುವಂತೆ ಸಾಂಗ್ನ ಕಂಪೋಸ್ ಮಾಡಿದೆ ರಾಮ್ ರೋವಿನ್ ಆ್ಯಂಡ್ ಟೀಂ.
ಈ ಪ್ರಮೋಷನಲ್ ಸಾಂಗ್ ಕೆಜಿಎಫ್ ಕಾವನ್ನ ಮತ್ತಷ್ಟು ಹೆಚ್ಚಿಸಿದೆ. 3ಕೋಟಿ 60 ಲಕ್ಷಕ್ಕೆ ಲಹರಿ ಸಂಸ್ಥೆ ಕೆಜಿಎಫ್ ಆಡಿಯೋ ರೈಟ್ಸ್ ಖರೀದಿಸಿದ್ದು, ರವಿಬಸ್ರೂರು ಮ್ಯೂಸಿಕ್ ಮಾಡಿರೋ ಕೆಜಿಎಫ್ ಆಲ್ಬಮ್ನ ಸಾಂಗ್ಸ್ ಹೊರಬರೋಕೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದ್ಕಡೆ ಟಾಲಿವುಡ್ನಲ್ಲಿ ಕೆಜಿಎಫ್ ಪ್ರೀ ರಿಲೀಸ್ ಈವೆಂಟ್ ಮಾಡೋಕೆ ಚಿತ್ರತಂಡ ತಯಾರಿ ನಡೆಸ್ತಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಕೆಜಿಎಫ್ ಉತ್ಸವ ಶುರುವಾಗಿದೆ.
ನಾಣಿ..ಎಂಟ್ರಟ್ರೈನ್ಮೆಂಟ್ ಬ್ಯೂರೊ, ಟಿವಿ5