VIRAL VIDEO: ಯುವತಿಯ ಕಿಡ್ನ್ಯಾಪ್ ಯತ್ನ: ಆಮೇಲೇನಾಯ್ತು ಗೊತ್ತಾ..?

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಅದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಹಾಗಾದ್ರೆ ಆ ವೀಡಿಯೋದಲ್ಲಿ ಏನಿದೆ ಅನ್ನೋದೆ ಕುತೂಹಲ.

ಯುವತಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಓರ್ವ ಯುವಕ ಆಕೆಯನ್ನ ಕಿಡ್ನ್ಯಾಪ್ ಮಾಡಲು ಯತ್ನಿಸುತ್ತಾನೆ. ಆ ಹುಡುಗಿ ಸಹಾಯಕ್ಕಾಗಿ ಕಿರುಚಾಡುತ್ತಾಳೆ. ಅಷ್ಟು ಹೊತ್ತಿಗಾಗಲೇ ಸ್ಥಳಕ್ಕೆ ಗಾಡಿಯೊಂದು ಬಂದು ಅದರಿಂದ ಯುವಕ-ಯುವತಿಯರು ಹೊರಬರುತ್ತಾರೆ. ಜೊತೆಗೆ ಕೇಕ್, ಸಾಕಷ್ಟು ಉಡುಗೊರೆ ತರುತ್ತಾರೆ. ಇದು ಆ ಯುವತಿಗೆ ಆಕೆಯ ಪ್ರಿಯಕರ ಕೊಡುವ ಬರ್ತ್‌ಡೇ ಸರ್ಪೈಸ್.

ನಂತರ ಆಕೆಗೆ ಹೂ ನೀಡಿ ವಿಶ್ ಮಾಡುತ್ತಾನೆ. ಆಕೆಯ ಬಳಿ ಕ್ಷಮೆ ಕೇಳುತ್ತಾನೆ. ರೋಡಿನ ಮಧ್ಯವೇ ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಈ ವೀಡಿಯೋಗೆ ಸಾಕಷ್ಟು ಜನ ಪರ-ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ಸರ್ಪೈಸ್ ಡಿಫ್ರೆಂಟ್ ಆಗಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಒಂದು ಹೆಣ್ಣಿನೊಂದಿಗೆ ಈ ರೀತಿಯ ನಡುವಳಿಕೆ ತೋರಿಸಿ, ಆಕೆಗೆ ಬರ್ತ್‌ಡೇ ವಿಶ್ ಮಾಡುವುದು ತಪ್ಪು. ಬರ್ತ್‌ಡೇಗೆ ವಿಶ್ ಮಾಡಲು ಹಲವಾರು ರೀತಿಗಳಿಗೆ. ಅದನ್ನ ಬಿಟ್ಟು ಈ ರೀತಿ ಯುವತಿಗೆ ಹಿಂಸೆ ಕೊಟ್ಟು, ಬರ್ತ್‌ಡೇ ವಿಶ್ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವೀಡಿಯೋ ಮೊದ ಮೊದಲು ನೋಡಿದಾಗ ಭಯಾನಕವಾಗಿದ್ದು, ನೋಡುಗರಲ್ಲಿ ಆತಂಕ ಸೃಷ್ಟಿಸುತ್ತದೆ.

This Young Girl Got Kidnapped, You wouldn't believe what happe…

Girl Got Kidnapped, You wouldn't believe what happened next..

Posted by AVRprankTV on Monday, May 16, 2016