Top

ಯಶ್​ಗೆ ಸಲಾಂ ರಾಕಿ ಭಾಯ್ ಅಂದೇಬಿಟ್ರು ರಾಜಮೌಳಿ..!

ಯಶ್​ಗೆ ಸಲಾಂ ರಾಕಿ ಭಾಯ್ ಅಂದೇಬಿಟ್ರು ರಾಜಮೌಳಿ..!
X

ಕೆಜಿಎಫ್ ಆಲ್ಬಮ್​ನ ಫಸ್ಟ್ ಸಾಂಗ್ ಲಾಂಚ್​ಗೆ ಕೌಂಟ್​ಡೌನ್ ಶುರುವಾಗಿದೆ. ಆದ್ರೆ ಅದಕ್ಕೂ ಮೊದ್ಲೇ ಸ್ಯಾಂಡಲ್​ವುಡ್ ರಾಕಿಂಗ್ ಸ್ಟಾರ್ ಯಶ್​ಗೆ ಸಲಾಂ ರಾಕಿ ಭಾಯ್ ಅಂದಿದ್ದಾರೆ, ಬಾಹುಬಲಿ ಖ್ಯಾತಿಯ ರಾಜಮೌಳಿ. ಇಷ್ಟಕ್ಕೂ ಯಶ್ ರಿವೀಲ್ ಮಾಡಲಿರೋ ಆ ಎಕ್ಸೈಟಿಂಗ್ ನ್ಯೂಸ್ ಏನು..? ಮೌಳಿ ಸಲಾಂ ಅಂದಿರೋದ್ಯಾಕೆ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.

ಇಡೀ ಭಾರತೀಯ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ಕನ್ನಡದ ಕೆಜಿಎಫ್. ಬರೀ ಟ್ರೈಲರ್ ಮತ್ತು ಮೇಕಿಂಗ್​ನಿಂದಲೇ ನಿರೀಕ್ಷೆಗೂ ಮೀರಿದ ಕ್ರೇಜ್ ಹುಟ್ಟಿಹಾಕಿದೆ. ಪ್ರತಿಯೊಬ್ಬ ಸಿನಿಪ್ರೇಮಿ, ತುದಿಗಾಲಲ್ಲಿ ನಿಂತು ಕೆಜಿಎಫ್ ರಾಕಿ ಎಂಟ್ರಿಗೆ ಕಾಯುವಂತಾಗಿದೆ. ಅಷ್ಟರ ಮಟ್ಟಿಗೆ ಎಲ್ಲಾ ಭಾಷೆಗಳಲ್ಲೂ ಸೌಂಡ್ ಮಾಡ್ತಿದೆ ರಾಮಾಚಾರಿಯ ಕೆಜಿಎಫ್.

ಪ್ರಶಾಂತ್ ನೀಲ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾ 70ರ ದಶಕದ ಪೀರಿಯಾಡಿಕ್ ಕಥಾನಕ ಹೊಂದಿರಲಿದೆ. ಎರಡು ಹಂತದಲ್ಲಿ ತೆರೆಗೆ ಬರಲಿರೋ ಕೆಜಿಎಫ್, ಸದ್ಯ ಚಾಪ್ಟರ್ ಒನ್ ಇದೇ ಡಿಸೆಂಬರ್ 21ಕ್ಕೆ ವರ್ಲ್ಡ್​ ವೈಡ್ ಗ್ರ್ಯಾಂಡ್ ರಿಲೀಸ್ ಆಗಲಿದೆ. ಯಶ್-ಶ್ರೀನಿಧಿ ಶೆಟ್ಟಿ ಕಾಂಬೋನ ದೊಡ್ಡ ಪರದೆ ಮೇಲೆ ನೋಡೋಕೆ ಎಲ್ರೂ ಉತ್ಸುಕರಾಗಿದ್ದಾರೆ.

ಅರೇ ಇದೆಲ್ಲಾ ಹಳೇ ನ್ಯೂಸ್... ನಯಾ ಖಬರ್ ಕ್ಯಾ ಹೇ ಅಂತ ಹುಬ್ಬೇರಿಸ್ಬೇಡಿ. ಈಗ ಅದೇ ಮ್ಯಾಟರ್​ಗೆ ಬರ್ತಿದ್ದೀವಿ. ಕೆಜಿಎಫ್ ಮಾಡ್ತಿರೋ ಹಂಗಾಮ, ಹುಟ್ಟಿಹಾಕಿರೋ ಕ್ರೇಜ್, ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿನ ಹೈಪ್, ಯಶ್ ಹವಾ ಎಲ್ಲವನ್ನೂ ನೋಡ್ತಿರೋ ರಾಜಮೌಳಿ ಅಕ್ಷರಶಃ ಈ ಸಿನಿಮಾಗೆ ಫಿದಾ ಆಗಿಬಿಟ್ಟಿದ್ದಾರೆ. ಹಾಗಾಗಿ ಖುದ್ದು ರಾಜಮೌಳಿಯೇ ಯಶ್​ಗೆ ಸಲಾಂ ರಾಕಿ ಭಾಯ್ ಅಂತಿದ್ದಾರೆ.

ಯಶ್​ಗೆ ಸಲಾಂ ರಾಕಿ ಭಾಯ್ ಅಂದೇಬಿಟ್ರು ರಾಜಮೌಳಿ..!

ಬಾಹುಬಲಿ ಸಾರಥಿಯಿಂದ KGF ಪ್ರೀ ರಿಲೀಸ್ ಇವೆಂಟ್ ರಂಗು

ಬಾಹುಬಲಿ ರೀತಿ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಸೃಷ್ಠಿಸಿರೋ ಸಿನಿಮಾ ಕೆಜಿಎಫ್. ಅದೇ ಕಾರಣಕ್ಕಾಗಿಯೇ ಬಾಹುಬಲಿ ಖ್ಯಾತಿಯ ರಾಜಮೌಳಿ ಕಣ್ಣು ಯಶ್ ಮೇಲೆ ಬಿದ್ದಿದೆ. ಈ ಹಿಂದೆ ಮೌಳಿಯ ತ್ರಿಬಲ್ ಆರ್ ಚಿತ್ರದಲ್ಲಿ ಯಶ್ ಖಡಕ್ ವಿಲನ್ ಆಗಿ ನಟಿಸ್ತಾರೆ ಅನ್ನೋ ವದಂತಿ ಹರಿದಾಡ್ತಿತ್ತು. ಅದಕ್ಕೆ ಯಶ್ ಅವ್ರೇ ಅದೆಲ್ಲಾ ಅಂತೆಕಂತೆಯ ಸುದ್ದಿ ಅಂತ ಫುಲ್ ಸ್ಟಾಪ್ ಇಟ್ಟಿದ್ರು.

ಇದೀಗ ರಾಜಮೌಳಿ, ಹೈದ್ರಾಬಾದ್​ನಲ್ಲಿ ಇದೇ ಡಿಸೆಂಬರ್ 7ರಂದು ನಡೆಯಲಿರೋ ಕೆಜಿಎಫ್ ತೆಲುಗು ಅವತರಣಿಕೆಯ ಪ್ರೀ ರಿಲೀಸ್ ಇವೆಂಟ್​ಗೆ ಮುಖ್ಯ ಅತಿಥಿಯಾಗಿ ಆಗಮಿಸ್ತಿದ್ದಾರೆ. ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿರೋ ತೆಲುಗು ಕೆಜಿಎಫ್ ಆಲ್ಬಮ್​ನ ಖುದ್ದು ರಾಜಮೌಳಿಯೇ ಲಾಂಚ್ ಮಾಡ್ತಿರೋದು ವಿಶೇಷ. ಈಗಾಗ್ಲೇ ಫ್ಯಾನ್ ಮೇಡ್ ಸಾಂಗ್ಸ್ ಸಖತ್ ಸದ್ದು ಮಾಡ್ತಿದ್ದು, ಇಂದಿನ ಸಲಾಂ ರಾಕಿ ಭಾಯ್​ ಮೂಲಕ ಇಡೀ ಇಂಡಿಯಾ ಯಶ್ ಹಾಗೂ ಟೀಂ ಕೆಜಿಎಫ್​ಗೆ ಸಲಾಂ ಹೊಡೆಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES