ಕ್ಯಾನ್ಸರ್ ಚಿಕಿತ್ಸೆ ಪಡೆದು ಮುಂಬೈಗೆ ಮರಳಿದ ನಟಿ ಸೋನಾಲಿ ಬೇಂದ್ರೆ

X
TV5 Kannada3 Dec 2018 5:54 AM GMT
ಮಾರಕ ಕ್ಯಾನ್ಸರ್ಗೆ ತುತ್ತಾಗಿ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮುಂಬೈಗೆ ಮರಳಿದ್ದಾರೆ.
ಮುಂಬೈ ಏರ್ಪೋರ್ಟ್ನಲ್ಲಿ ಸೋನಾಲಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಸೋನಾಲಿ ಪತಿ ಗೋಲ್ಡಿ ಭೇಲ್, ಸದ್ಯಕ್ಕೆ ಸೋನಾಲಿ ಚಿಕಿತ್ಸೆ ಪೂರ್ಣಗೊಂಡಿದ್ದು, ಚಿಕಿತ್ಸೆ ಬಳಿಕ ಸೋನಾಲಿ ಚೇತರಿಸಿಕೊಂಡಿದ್ದಾಳೆ. ಆರೋಗ್ಯವಾಗಿದ್ದಾಳೆ ಎಂದಿದ್ದಾರೆ.ಅಲ್ಲದೇ ಚಿಕಿತ್ಸೆಗಾಗಿ ಆಗಾಗ ನ್ಯೂಯಾರ್ಕ್ಗೆ ಹೋಗಬೇಕೆಂದು ಹೇಳಿದ್ದಾರೆ.
ಜುಲೈನಲ್ಲಿ ಸೋನಾಲಿ ಬೇಂದ್ರೆ ತಾವು ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು.
Next Story