Top

ಸೈರಾ ವರ್ಸಸ್​​ ಸಾಹೋ.. ಟಾರ್ಗೆಟ್ ಆಗಸ್ಟ್ 15th..!

ಸೈರಾ ವರ್ಸಸ್​​ ಸಾಹೋ.. ಟಾರ್ಗೆಟ್ ಆಗಸ್ಟ್ 15th..!
X

ಒಂದ್ಕಡೆ 150 ಸಿನಿಮಾಗಳ ಸರದಾರ ಮೆಗಾ ಸ್ಟಾರ್ ಚಿರಂಜೀವಿ. ಮತ್ತೊಂದ್ಕಡೆ ಬಾಹುಬಲಿಯಾಗಿ ಏಕ್​ದಮ್ ನ್ಯಾಷನಲ್ ಸ್ಟಾರ್ ಪಟ್ಟ ಅಲಂಕರಿಸಿದ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ಇವರಿಬ್ಬರು ನಟಿಸಿರೋ ಸಿನಿಮಾಗಳು ಏಕಕಾಲಕ್ಕೆ ತೆರೆಗಪ್ಪಳಿಸಿದ್ರೆ, ಹೇಗಿರುತ್ತೆ ಹೇಳಿ..? ಇಂತಾದೊಂದು ಬಿಗ್ಗೆಸ್ಟ್ ಬಾಕ್ಸಾಫೀಸ್​ ಕ್ಲಾಶ್​ಗೆ ಸೌತ್ ಸಿನಿದುನಿಯಾ ಸಜ್ಜಾಗ್ತಿದೆ.

ಒಂದೆಡೆ ಸೈರಾ ನರಸಿಂಹ ರೆಡ್ಡಿ. ಮೆಗಾಸ್ಟಾರ್ ಚಿರಂಜೀವಿ ಮಹತ್ವಾಕಾಂಕ್ಷೆಯ ಸಿನಿಮಾ. ಸುರೇಂದರ್ ರೆಡ್ಡಿ ನಿರ್ದೇಶನ ಬಹುನಿರೀಕ್ಷಿತ ಐತಿಹಾಸಿಕ ಬಯೋಪಿಕ್. ಅಮಿತಾಬ್ ಬಚ್ಚನ್, ಚಿರಂಜೀವಿ, ಸುದೀಪ್, ನಯನತಾರಾರಂತಹ ಸೂಪರ್ ಸ್ಟಾರ್​ಗಳ ಸಂಗಮದ ಚಿತ್ರ. ಬಾಹುಬಲಿ ರೇಂಜ್​ನಲ್ಲಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ಮಹಾದೃಶ್ಯಕಾವ್ಯ.

ಇನ್ನೊಂದೆಡೆ ಸಾಹೋ. 2019ರ ಮೋಸ್ಟ್ ಎಕ್ಸ್​​ಪೆಕ್ಟೆಡ್ ಸೌತ್ ಸಿನಿಮಾ. ಬಾಹುಬಲಿ ಪ್ರಭಾಸ್​​​ ಅಭಿನಯದ ಸೈಬರ್​ ಪಂಕ್ ಆಕ್ಷನ್​ ಥ್ರಿಲ್ಲರ್. 200 ಕೋಟಿ ಬಜೆಟ್​​ನಲ್ಲಿ ತಯಾರಾಗ್ತಿರೋ ಪ್ರೆಸ್ಟೀಜಿಯಸ್ ಪ್ರಾಜೆಕ್ಟ್. ಯಂಗ್​​ ರೆಬೆಲ್ ಸ್ಟಾರ್​ ಇಮೇಜ್​​ಗೆ ತಕ್ಕಂತೆ ಹೈ ಟೆಕ್ನಿಕಲ್​ ವ್ಯಾಲ್ಯೂಸ್​ ಜೊತೆಗೆ ಕಟ್ಟಿಕೊಡ್ತಿರೋ ಸೆಲ್ಯೂಲಾಯ್ಡ್. ಹೈವೋಲ್ಟೇಜ್ ಸ್ಟೈಲಿಶ್ ಆಕ್ಷನ್ ಎಂಟ್ರಟ್ರೈನರ್.

ಸೈರಾ ವರ್ಸಸ್​​ ಸಾಹೋ.. ಟಾರ್ಗೆಟ್ ಆಗಸ್ಟ್ 15th

ಮೆಗಾ ಸ್ಟಾರ್​ ಚಿರುಗೆ ಯಂಗ್ ರೆಬೆಲ್ ಸ್ಟಾರ್ ಸವಾಲ್..!

ಸೈರಾ ನರಸಿಂಹ ರೆಡ್ಡಿ ಸಿನಿಮಾ ಬಜೆಟ್ 200 ಕೋಟಿ. ಸಾಹೋ ಸಿನಿಮಾ ಬಜೆಟ್ 300 ಕೋಟಿ. ಈ ಎರಡು ಸಿನಿಮಾಗಳು ಆಗಸ್ಟ್ 15ಕ್ಕೆ ತೆರೆಗಪ್ಪಳಿಸ್ತಾವೆ ಅಂತ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.

ಅಂದುಕೊಂಡಂತೆ ಆಗಿದ್ರೆ, ಎರಡೂ ಸಿನಿಮಾಗಳು ಸಂಕ್ರಾಂತಿ ವೇಳೆಗೆ ತೆರೆಗೆ ಬರ್ಬೇಕಿತ್ತು. ಶೂಟಿಂಗ್ ಲೇಟ್ ಆಗಿದ್ದು, ದಿನದಿಂದ ದಿನಕ್ಕೆ ಕ್ಯಾನ್ವಾಸ್ ದೊಡ್ಡದಾಗಿ ಊಹೆಗೂ ನಿಲುಕದಂತೆ ಸಿನಿಮಾಗಳು ನಿರ್ಮಾಣವಾಗ್ತಿರೋದ್ರಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗ್ತಿದೆ. ಇದೀಗ ಒಂದೇ ದಿನ ಎರಡು ಸಿನಿಮಾ ರಿಲೀಸ್ ಅನ್ನಲಾಗ್ತಿದ್ದು, ಬಿಗ್ ಬಾಕ್ಸಾಫೀಸ್​ ಕ್ಲಾಶ್​ಗೆ ವೇದಿಕೆ ಸಿದ್ಧವಾಗೋ ಲಕ್ಷಣಗಳು ಗೋಚರಿಸುತ್ತಿದೆ.

ಉಯ್ಯಾಲವಾಡ ನರಸಿಂಹ ರೆಡ್ಡಿಯಾಗಿ ಚಿರಂಜೀವಿ ಅಬ್ಬರ..!

ಬಾಹುಬಲಿ ದಾಖಲೆ ಮುರಿತಾನಾ ಸೈರಾ ನರಸಿಂಹ ರೆಡ್ಡಿ..?!

ಆಂಧ್ರದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನಾಧರಿತ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನರಸಿಂಹ ರೆಡ್ಡಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಈಗಾಗಲೇ ಸ್ಯಾಂಪಲ್​ಗಳಲ್ಲಿ ಮೆಗಾಸ್ಟಾರ್ ಆರ್ಭಟಕ್ಕೆ ಫ್ಯಾನ್ಸ್ ಫಿದಾ ಆಗೋಗಿದ್ದಾರೆ. ನರಸಿಂಹ ರೆಡ್ಡಿ ಗುರುವಾಗಿ ಅಮಿತಾಬ್ ಬಚ್ಚನ್, ಪತ್ನಿಯಾಗಿ ನಯನತಾರಾ, ಸ್ನೇಹಿತನಾಗಿ ಸುದೀಪ್ ಹೀಗೆ ದೊಡ್ಡ ತಾರಾಗಣ ಸಿನಿಮಾದಲ್ಲಿದೆ.

ಸ್ವತ: ಚಿರು ಪುತ್ರ ರಾಮ್​ ಚರಣ್ ತೇಜಾ ಚಿತ್ರವನ್ನ ನಿರ್ಮಾಣ ಮಾಡ್ತಿರೋದು ವಿಶೇಷ. ಬಾಲಿವುಡ್, ಹಾಲಿವುಡ್ ಕಲಾವಿದರು ಮತ್ತು ತಂತ್ರಜ್ಞರು ಸೈರಾ ನರಸಿಂಹ ರೆಡ್ಡಿ ತಂಡದಲ್ಲಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬರ್ತಿದೆ. ಸೈರಾ ರಾಜಮೌಳಿಯ ಬಾಹುಬಲಿ ದಾಖಲೆಯನ್ನ ಮುರಿಯುತ್ತೆ ಅನ್ನೋದು ಮೆಗಾ ಫ್ಯಾನ್ಸ್ ಲೆಕ್ಕಾಚಾರ. ಅದಕ್ಕೆ ತಕ್ಕಂತೆ ಎಲ್ಲಾ ವಿಭಾಗದಲ್ಲೂ ವಾಹ್ ಅನ್ನುವಂತೆ ಸಿನಿಮಾ ನಿರ್ಮಾಣವಾಗ್ತಿದೆ.

ವಜ್ರದ ಕಳ್ಳನ ಅವತಾರದಲ್ಲಿ ‘ಸಾಹೋ’ ಪ್ರಭಾಸ್ ಆರ್ಭಟ

ಬಾಹುಬಲಿನ ಮೀರಿಸುವಂತಿದೆ ಸಾಹೋ ಪ್ರಭಾಸ್ ಕ್ರೇಜ್

ಸೈರಾ ನರಸಿಂಹ ರೆಡ್ಡಿ ರೇಂಜ್​ನಲ್ಲಿ ನಿರೀಕ್ಷೆ ಹುಟ್ಟಾಕಿರೋ ಮತ್ತೊಂದು ತೆಲುಗು ಸಿನಿಮಾ ಸಾಹೋ. ಸುಜಿತ್ ನಿರ್ದೇಶನದಲ್ಲಿ ಬಾಹುಬಲಿ ಪ್ರಭಾಸ್ ನಟಿಸ್ತಿರೋ, ಈ ಸಿನಿಮಾ ಶೂಟಿಂಗ್ ಭರದಿಂದ ಸಾಗ್ತಿದೆ. ಚಿತ್ರದಲ್ಲಿ ಪ್ರಭಾಸ್ ವಜ್ರಗಳ ಕಳ್ಳನ ಪಾತ್ರದಲ್ಲಿ ಮಿಂಚಿದ್ದು, ಸ್ಟೈಲಿಶ್ ಅವತಾರದಲ್ಲಿ ಅಭಿಮಾನಿಗಳಿಗೆ ಥ್ರಿಲ್ ಕೊಡೋಕೆ ಬರ್ತಿದ್ದಾರೆ. ಬಾಹುಬಲಿನ ಮರೆಸುವಂತಹ ಸ್ಟೈಲಿಶ್​ ಲುಕ್​ನಲ್ಲಿ ಪ್ರಭಾಸ್ ಗಮನ ಸೆಳಿಯುತ್ತಿದ್ದಾರೆ. ಸಾಹೋ ಟೀಸರ್ ಮತ್ತು ಮೇಕಿಂಗ್ ವೀಡಿಯೋ ಧೂಳೆಬ್ಬಿಸಿದೆ.

ಸೈರಾ- ಸಾಹೋ ನಡುವೆ ಬಾಕ್ಸಾಫೀಸ್​ನಲ್ಲಿ ಬಿಗ್ ಫೈಟ್..!!

ಸ್ವಾತಂತ್ರ್ಯ ಯೋಧನ ಮುಂದೆ ನಡೆಯುತ್ತಾ ವಜ್ರದ ಕಳ್ಳನ ಆಟ..?

ಹೀಗೆ ಸಿಕ್ಕಾಪಟ್ಟೆ ಕುತೂಹಲ ಹುಟ್ಟಾಕಿರೋ ಸೈರಾ ಮತ್ತು ಸಾಹೋ ಸಿನಿಮಾಗಳು ಒಂದೇ ದಿನ ಅಂದ್ರೆ, ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತೆ ಅನ್ನೋದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಸಮ್ಮರ್​ನಲ್ಲಿ ಎರಡೂ ಸಿನಿಮಾಗಳು ತೆರೆಗೆ ಬರ್ತಾವೆ ಅನ್ನಲಾಗಿತ್ತು. ಆದ್ರೆ ಈಗ ಒಂದು ದಿನ ರಿಲೀಸ್ ಅಂತಿದ್ದಾರೆ. ನಿಜಕ್ಕೂ ಅಂತಾದೊಂದು ಬಾಕ್ಸಾಫೀಸ್ ಕ್ಲಾಶ್ ನಡೆಯುತ್ತಾ..? ಎರಡೂ ಸಿನಿಮಾ ತಂಡಗಳು ಇದಕ್ಕೆ ಒಪ್ತಾರಾ..? ಅಥವಾ ಇದೆಲ್ಲಾ ಬರೀ ಗಾಳಿ ಸುದ್ದಿನಾ..? ಕಾದು ನೋಡ್ಬೇಕು.

ಅದೆಲ್ಲಾ ಏನೇ ಇರಲಿ. ಎರಡೂ ಕೂಡ ಟಾಲಿವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾಗಳು. ಒಟ್ಟಿಗೆ ರಿಲೀಸ್ ಆದ್ರೆ, ಅದು ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರೋದು ಗ್ಯಾರೆಂಟಿ. ಈವರೆಗೆ ಎರಡೂ ಸಿನಿಮಾಗಳ ಅಫೀಷಿಯಲ್ ರಿಲೀಸ್ ಡೇಟ್ ಹೊರಬಿದ್ದಿಲ್ಲ. ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡೋವರ್ಗೂ, ಬಾಕ್ಸಾಫೀಸ್ ಕ್ಲಾಶ್, ಬಾಕ್ಸಾಫೀಸ್ ಫೈಟ್ ಅನ್ನೋದು ತಪ್ಪಾಗತ್ತೆ.

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES