Top

2.O ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ..?

2.O ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ..?
X

2.ಓ. ಸೂಪರ್ ಸ್ಟಾರ್ ರಜಿನಿಕಾಂತ್ , ಖಿಲಾಡಿ ಅಕ್ಷಯ್ ಕುಮಾರ್ ನಟನೆಯ ಬಹು ನಿರೀಕ್ಷಿತ ಬಿಗ್ ಸಿನಿಮಾ. ಅಂದುಕೊಂಡಂತೆ 2.ಓ ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಂಡಿದೆ. ಬಟ್ ದಾಖಲೆ ವಿಚಾರದಲ್ಲಿ ಹಿಂದೆ ಬಿದ್ದಿದೆ. ಕಳೆದ ವರ್ಷ ತೆರೆಕಂಡು ವಿಶ್ವ ಚಿತ್ರರಸಿಕರ ಮನ ಗೆದ್ದು, ಕೋಟಿ ಕೋಟಿ ಹಣವನ್ನು ಜೇಬಿಗಿಳಿಸಿಕೊಂಡಿತ್ತು ಬಾಹುಬಲಿ-2.

ಎರಡನೇ ಬಾಹುಬಲಿಯ ದಾಖಲೆಯನ್ನು ಮೀರಿಸೋದು ಶಂಕರ್ ಕಲ್ಪನೆಯ ಯಂತ್ರ ಮಾನವನೇ ಎಂದು ಬಣ್ಣಿಸಲಾಗಿತ್ತು. ಆದ್ರೆ ಆ ನಿರೀಕ್ಷೆ ತಲೆಕೆಳಗಾಗಿದೆ. ಬಾಹುಬಲಿಗಿಂತ ದೊಡ್ಡದಾಗಿ 2.ಓ ತೆರೆಕಂಡರೂ, ಬಾಹುಬಲಿಯ ದಾಖಲೆಯನ್ನು ಅಳಿಸಲು ಸಾಧ್ಯವಾಗಿಲ್ಲ..!!

ಕಳೆದ ನವೆಂಬರ್ 29ಕ್ಕೆ ಇಡೀ ವಿಶ್ವಾದ್ಯಂತ ಬರೋಬ್ಬರಿ 10,500ಕ್ಕೂ ಹೆಚ್ಚು ಬೆಳ್ಳಿಪರದೆಯಲ್ಲಿ 2.ಓ ಪ್ರದರ್ಶನ ಪ್ರಾರಂಭವಾಯ್ತು. ಕಳೆದ ಗುರುವಾರ ಒಂದೇ ದಿನ ಇಡೀ ವಿಶ್ವದಲ್ಲಿಯೇ 33 ಸಾವಿರ ಪ್ರದರ್ಶನ ಕಂಡಿದೆ ರಜಿನಿ ನಟನೆಯ ಈ ಸಿನಿಮಾ. ಆದ್ರೂ ಬಾಬುಬಲಿಯ ದಾಖಲೆಯನ್ನು ಅಳಿಸಲು ಸಾಧ್ಯವಾಗಲಿಲ್ಲ. ಆಗ ಬಹುಬಲಿ-2 ಸಿನಿಮಾ ವಿಶ್ವಾದ್ಯಂತ 9000 ಸಾವಿರ ಚಿತ್ರಮಂದಿಗಳಲಲ್ಲಿ, 20ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿತ್ತು.

2.o ಯಂತ್ರ ಮಾನವ 1 ದಿನಕ್ಕೆ ದೊಚ್ಚಿದ್ದು 110 ಕೋಟಿ ..!

ಬಾಹುಬಲಿ 1ದಿನಕ್ಕೆ ಲೂಟಿ ಮಾಡಿದ್ದು 121 ಕೋಟಿ ..!!

ಮೊದಲ ದಿನ 2.ಓ ವಿಶ್ವಾದ್ಯಂತ ಬರೋಬ್ಬರಿ 110 ಕೋಟಿ ರೂ. ಗಳಿಕೆ ಮಾಡಿದೆ. ಆದರೆ, ಕಳೆದ ವರ್ಷ ತೆರೆಕಂಡಿದ್ದ ‘ಬಾಹುಬಲಿ 2’ ಚಿತ್ರ ಮೊದಲ ದಿನ 121 ಕೋಟಿ ರೂ. ಗಳಿಕೆ ಮಾಡಿ ಸಾರ್ವಕಾಲಿಕ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿತ್ತು.

ಬಾಹುಬಲಿಯ ದಾಖಲೆಯನ್ನು ‘2.0’ ಮುರಿಯಲಿದೆ ಎಂದೇ ಹೇಳಲಾಗಿತ್ತು. ಆದರೆ, ಅದೆಲ್ಲವೂ ತಲೆಕೆಳಗಾಗಿದೆ. ತಮಿಳು ಚಿತ್ರವಾದರೂ, ಹಿಂದಿಯಲ್ಲಿ ಮೊದಲ ದಿನ 20.25 ಕೋಟಿ ರೂ. ಬಾಚಿಕೊಂಡಿದೆ. ಅದೇ ರೀತಿ ತೆಲುಗಿನಲ್ಲಿ 18 ಕೋಟಿ ರೂ. ಗಳಿಸಿದರೆ, ತಮಿಳಿನಲ್ಲಿ 20 ಕೋಟಿ ರೂ. ಸಂಗ್ರಹವಾಗಿದೆ. ಕರ್ನಾಟಕದಿಂದ ಈ ಚಿತ್ರಕ್ಕೆ ಸಿಕ್ಕಿರುವುದು ಬರೋಬ್ಬರಿ 8 ಕೋಟಿ ರೂ.!

2.O ಚಿತ್ರಕ್ಕೆ ದೊಡ್ಡ ಹೊಡೆತ ಕೊಡುತ್ತಿದೆ ಮಿಶ್ರ ಪ್ರತಿಕ್ರಿಯೆ..!

ಯಂತ್ರ ಮಾನವನನ್ನು ಕಾಡುತ್ತಿರುವ ಪೈರಸಿ ಪ್ರೇತ..!?

2.ಓ, ಹತ್ತ ಹತ್ರಾ 550 ಕೋಟಿ ಖರ್ಚು ವೆಚ್ಚದಲ್ಲಿ ನಿರ್ಮಾಣವಾಗಿದೆ. ಸ್ಯಾಟ್​ಲೈಟ್ಸ್ ರೈಟ್ಸ್ , ಟಿವಿ ರೈಟ್ಸ್ , ಆಡಿಯೋ ರೈಟ್ಸ್​ ಅಂತ ಹೆಚ್ಚು ಕಮ್ಮಿ 300ಕೋಟಿ ಲೇಕಾ ಪ್ರೋಡಕ್ಷನ್ ಖಜನೇ ಬಂದಿದೆ. ಆದ್ರೆ ಇದನ್ನ ನಂಬಿ ಮುಂಗಡ ಹಣಕೊಟ್ಟು ವಿತರಕರಿಗೆ ಹಣ ಪೂರ್ತಿ ಲಾಭದ ರೂಪದಲ್ಲಿ ಬರಬೇಕಲ್ವಾ.. ? ಈಗಾಗಲೇ ಎರಡು ದಿನಕ್ಕೆ 190ಕೋಟಿ ಕಲೆಕ್ಷನ್ ಮಾಡಿದೆ ಸಿನಿಮಾ. ಈಗ ಬೇರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಯಿಂದ ಹೈಪ್ ಕಡಿಮೆ ಆಗುತ್ತಿದೆ. ಸಾಲದಕ್ಕೆ ಪೈರಸಿ ಪ್ರೇತ 2.ಓ ಚಿತ್ರವನ್ನು ನುಂಗುತ್ತಿದೆ.

ಈ ಎಲ್ಲಾ ಬೆಳವಣಿಗೆಯನ್ನು ನೋಡ್ತಿದ್ರೆ ರಜಿನಿಕಾಂತ್​ರ ಈ ಅದ್ಧೂರಿ ಅಮೋಘ ಅನನ್ಯ ಸಿನಿಮಾ 500ಕೋಟಿ ದಾಟಿ ಸಾವಿರದ ಮೆಟ್ಟಿಲು ಹತ್ತೋದು ಕಷ್ಟ ಕಷ್ಟವೆನ್ನಿಸುತ್ತಿದೆ. ಕಲೆಕ್ಷನ್ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಚಿತ್ರ ವಿಮರ್ಷಕರ ಪ್ರಕಾರ 2.ಓ ಸಿನಿಮಾ ಭಾರತೀಯ ಚಿತ್ರರಂಗದ ಮುಂದುವರೆದ ತಂತ್ರಜ್ಞಾನದ ದೃಶ್ಯವೈಭವ. ಇನ್ನೇನು ಕೆಲವೇ ದಿನಗಳಲ್ಲಿ ಈ ಅದ್ಧೂರಿ ಸಿನಿಮಾ ಹಿಟ್ಟಾ , ಫ್ಲಾಪಾ ಎಂದು ಡಿಸೈಡ್ ಆಗಲಿದೆ.

Next Story

RELATED STORIES