Top

ಕಡಲೆಕಾಯಿ ಪರಿಷೆಗೆ ಲಕ್ಷಾಂತರ ಜನರು ಸಾಕ್ಷಿ

ಕಡಲೆಕಾಯಿ ಪರಿಷೆಗೆ ಲಕ್ಷಾಂತರ ಜನರು ಸಾಕ್ಷಿ
X

ಇತಿಹಾಸ ಪ್ರಸಿದ್ಧ ಬೆಂಗಳೂರು ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರದಿಂದ ಆರಂಭವಾಗಿದೆ. ಬೆಳಿಗ್ಗೆ ಬಸವಣ್ಣ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ.

ಕಾರ್ತಿಕ ಮಾಸದ ಕಡೇ ಸೋಮವಾರ ಬಂದರೆ ಸಾಕು ಎರ್ಲಿಗೂ ಬಸವನಗುಡಿ ನೆನಪಾಗುತ್ತೆ. ಏಕೆಂದರೆ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಅಷ್ಟು ಫೇಮಸ್‌ ಆಗಿದ್ದು, ಇಂದು ಕಡಲೇಕಾಯಿ ಪರಿಷೆ​ಗೆ ಚಾಲನ ಸಿಕ್ಕಿದೆ. ಪರಿಷೆಗೆ ಬರುವವರು ತಪ್ಪದೆ ಕೈ ಚೀಲ ತರುವುದರೊಂದಿಗೆ ನಗರದ ಪರಿಸರವನ್ನು ಕಾಪಾಡಲು ಸಹಕರಿಸಬೇಕೆಂದು ಪಾಲಿಕೆ ಜನರಲ್ಲಿ ಮನವಿ ಮಾಡಿದೆ.

ಕಣ್ಣು ಹಾಯಿಸಿದ್ದಲೆಲ್ಲಾ ಬರೀ ಕಡ್ಲೇಕಾಯಿ. ಪಂಚಾಮೃತ ಅಭಿಷೇಕದಲ್ಲಿ ಮಿಂದೆದ್ದ ಬಸವಣ್ಣ. ಈ ಎಲ್ಲಾ ದೃಶ್ಯಗಳು ಬಸವನಗುಡಿಯ ಕಡ್ಲೇಕಾಯಿ ಪರಿಷೆಯದ್ದು,

ಪ್ರತೀ ವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದ ಕಡೆ ಸೋಮವಾರ ಬಸವನಗುಡಿಯ ದೊಡ್ಡ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಕಡ್ಲೇಕಾಯಿ, ಹಾಲು, ಮೊಸರು, ಬೆಣ್ಣೆ, ತುಪ್ಪ, ಎಳನೀರಿನಿಂದ ಬಸವಣ್ಣನಿಗೆ ಅಭಿಷೇಕ ಮಾಡಲಾಯ್ತು. ಇನ್ನೂ ತುಲಾಭಾರ ನಡೆಸೋ ಮೂಲಕ ಕಡ್ಲೇಕಾಯಿ ಪರಿಷೆಗೆ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಚಾಲನೆ ನೀಡಿದರು

ಇನ್ನು ಈ ಬಾರಿ ಕಡ್ಲೇಕಾಯಿ ಇಳುವರಿ ಹೆಚ್ಚಾಗಿ ಬಂದಿದ್ದು ಬಡವರ ಬಾದಾಮಿ ಚೀಪ್ ರೇಟ್‌ ಸಿಕ್ತಿದೆ. ಹೀಗಾಗಿ ಸಿಕ್ಕಿದ್ದೇ ಚಾನ್ಸು ಅನ್ಕೊಂಡು ಸಿಟಿ ಮಂದಿ ಸಿಕ್ಕಾಪಟ್ಟೆ ಶಾಪಿಂಗ್ ಮಾಡಿದರು. ಇನ್ನು ಕಡ್ಲೇಕಾಯಿ ಪರಿಷೆಲೀ ಕಾಲೇಜ್ ಯೂಥ್ಸ್ ಗಳೂ ಇದ್ದರು. ಇಲ್ ಬನ್ನಿ ಮೂವತ್ತು, ಈಕಡೆ ಬನ್ನಿ ಬರೀ ಇಪ್ಪತ್ತು ರೂಪಾಯಿ ಅನ್ಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡಿದ್ದೇ ಮಾಡಿದ್ದು. ಇನ್ನು ಪರಿಷೇಲಿ ಪ್ಲಾಸ್ಟಿಕ್ ಬಳಸದಂತೆ‌ ಮೇಯರ್ ಸೂಚನೆಯನ್ನ ನೀಡಿದ್ದಾರೆ.

ಕಡ್ಲೇಕಾಯಿ ಸುವಾಸನೆ ಪರಿಮಳ ಬೀರಿದ್ದೇ ತಡ, ಸಿಟಿ ಮಂದಿ ಬ್ಯಾಗು ಗೀಗು ಹಿಡ್ಕೊಂಡು ಬಂದಿದರು. ಪಡ್ಡೆ ಹೈಕ್ಳಂತೂ ಮಿಸ್ ಮಾಡ್ದೆ ಹಾಜರಾಗಿದರು.

ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಡ್ಲೇಕಾಯಿ ಪರಿಷೆ ಸಂಭ್ರಮ ಆರಂಭವಾಗಿದೆ. ನೀವೂ ಸಹ ಮಿಸ್ ಮಾಡ್ದೆ ಪರಿಷೆಗೆ ಹೋಗಿ. ಬಡವರ ಬಾದಾಮಿ ಟೇಸ್ಟ್ ಮಾಡ್ಕೊಂಡು ಬನ್ನಿ.

Next Story

RELATED STORIES